

ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಪ್ರತಿಯೊಂದು ಹಬ್ಬಗಳು ತಮ್ಮದೇ ಆದ ವಿಶೇಷತೆ ಹೊಂದಿರುವಂತೆ ಮಕರ ಸಂಕ್ರಾಂತಿ ಕೂಡ ವಿಶಿಷ್ಟ ವಿಶೇಷ ಹಬ್ಬವಾಗಿದೆ. ಮಕರ ಸಂಕ್ರಾಂತಿ ಹಬ್ಬವು ಜನತೆಯನ್ನು ಔದ್ಯೋಗಿಕ, ಧಾಮಿರ್ಕ ಸಾಮಾಜಿಕ, ಪಾರಂಪರಿಕವಾಗಿ ಪರಿವತಿರ್ಸುವ ಜೊತೆಗೆ ಆರೋಗ್ಯದ ಪರಿಕಲ್ಪನೆಯನ್ನು ಮೂಡಿಸುವುದಾಗಿದೆ ಎಂದು ಅಕ್ಕಮಹಾದೇವಿ ಯೋಗ ವಿಾನ ಕೇಂದ್ರದ ಅಧ್ಯೆ ವಿಜಯಲಕ್ಷಿ$್ಮ ಆನೆಹೊಸೂರ ತಿಳಿಸಿರುವರು.
ಮಕರ ಸಂಕ್ರಾತಿ ಪ್ರಯುಕ್ತ ಸಿದ್ಧಲಿಂಗ ನಗರ ಬಸವ ಯೋಗ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬದ ದಿನ ಕೆಲವರು ಪುಣ್ಯ ೇತ್ರಗಳಿಗೆ ಪ್ರಯಾಣ ಮಾಡಿದರೆ ಇನ್ನೂ ಕೆಲವರು ನದಿ, ಕೆರೆ, ಇನ್ನಿತರೆ ತೀರ್ಥ ೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವರು ಮತ್ತೆ ಕೆಲವರು ಪ್ರಸಕ್ತ ಸ್ಥಳಗಳಿಗೆ ಹೋಗಿ ಸಹಭೋಜನ ಮಾಡುವರು. ಈ ಎಲ್ಲ ಕಾರ್ಯಗಳಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳುವರು. ಮನೆಯಲ್ಲಿಯೇ ಇದ್ದು ಬೇಸತ್ತ ಮಹಿಳೆಯರ ಮನಕೆ ಇವು ಉಲ್ಲಾಸ ನೀಡಿ ಹೆಚ್ಚಿನ ಖುಷಿ, ಆನಂದ ತರುತ್ತವೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮನೋಲ್ಲಾಸಕ್ಕೆ ಮರಕ ಸಂಕ್ರಾಂತಿ ಹಬ್ಬ ಸಹಕಾರಿಯಾಗಿದೆ ಎಂದರು.
ಜನರು ವಾಟ್ಸಾಪ್ ಮೂಲಕ ಹಬ್ಬಗಳ ಶುಭಾಶಯ ಹೇಳುವುದು ರೂಢಯಾಗಿದೆ. ಇದರಿಂದ ಪರಸ್ಪರರಲ್ಲಿ ಪ್ರೀತಿ, ಅನ್ಯೋನ್ಯ ಭಾವ ಬೆಳೆಯುವುದಿಲ್ಲ. ನಮ್ಮ ಪೂರ್ವಜರು ""ಎಳ್ಳು ಬೆಲ್ಲ ತೊಗೊಳ್ಳಿ, ಒಳ್ಳೆಯವರಾಗಿ ಇರೋಣ'' ಎಂದು ಸಮಕ್ಷಮವಾಗಿ ಹೇಳುವ ಶುಭಾಶಯ ಮನಕ್ಕೆ ಋಷಿ ತರುವದಲ್ಲದೆ ಪ್ರೀತಿ, ವಿಶ್ವಾಸ, ಬಾಂಧವ್ಯ, ಭಾವಗಳು ಹೆಚ್ಚುವಂತೆ ಮಾಡುತ್ತಿದ್ದವು. ಮಕ್ಕಳು ಮತ್ತು ಯುವಜನತೆಯಲ್ಲಿ ಈ ಅರಿವನ್ನು ಮೂಡಿಸುವದು ಅಗತ್ಯವಾಗಿದೆ ಎಂದರು.
ಡಾ. ಎಂ. ವಿ. ಐಹೊಳ್ಳಿ ಮಾತನಾಡಿ, ಸಂಕ್ರಾಂತಿ ನಿಮಿತ್ಯ ಅವರವರ ಮನೆಯಲ್ಲಿ ತಯಾರಿಸಿದ ಆಹಾರ ತಂದು ಆತ್ಮೀಯರ ಜತೆ ಕೂಡಿ ಸಹಭೊಜನ ಮಾಡುವುದು ಸಾಮರಸ್ಯದ ಸಂಕೇತವಾಗಿದೆ ಮತ್ತು ಅನೇಕ ಜನರ ಪರಿಚಯ ಆಗುತ್ತದೆ ಎಂದು ತಿಳಿಸಿದರು.
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಎಸ್. ಬಿ. ಗೌಡರ, ಜಯಶ್ರೀ ವಸ್ತ್ರದ, ಪಲ್ಲವಿ ಐಹೊಳ್ಳಿ, ಲಲಿತಾ ಅಣ್ಣಿಗೇರಿ, ಸುಲೋಚನಾ ಐಹೊಳ್ಳಿ, ವಿಜಯಾ ಚನ್ನಶೆಟ್ಟಿ, ಪ್ರತಿಭಾ ಇನಾಮತಿ, ಜಯಶ್ರೀ ಡಾವಣಗೇರಿ, ಸುನಂದಾ ಜ್ಯಾನೋಪಂತರ, ಪುಷ್ಪಾ ಹಿರೇಮಠ, ಮಹಾದೇವಿ ಚರಂತಿಮಠ, ಕಸ್ತೂರಿ ಮರಿಗೌಡರ, ಶಕುಂತಲಾ ಬ್ಯಾಳಿ, ಶೋಭಾ ಭಾಂಡಗೆ ಇದ್ದರು.