ಪಿಯು ನೌಕರ ಸಂದಿಂದ ವಿದ್ಯಾಥಿರ್ಗಳಿಗೆ ಸನ್ಮಾನ

10GDG01
Published on

ಪ್ರಥಮ ಸ್ಥಾನವನ್ನು ಎಂದಿಗೂ ಬಿಟ್ಟು ಕೊಡಬೇಡಿ: ಜಿಲ್ಲಾಧಿಕಾರಿ ಸಿ.ಎನ್​. ಶ್ರಿಧರ

ವಿಜಯವಾಣಿ ಸುದ್ದಿಜಾಲ ಗದಗ

ಪ್ರಸಕ್ತ ಸಾಲಿನಲ್ಲಿ ದ್ವೀತಿಯ ಪಿಯುಸಿ ವಾಷಿರ್ಕ ಪರೀೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥಿರ್ಗಳು ತಮ್ಮ ಮುಂದಿನ ಅಧ್ಯಯನದಲ್ಲಿಯೂ ನಿರಂತರ ಶ್ರಮವಹಿಸಿ ಪ್ರಥಮ ಸ್ಥಾನವನ್ನು ಎಂದಿಗೂ ಬಿಟ್ಟು ಕೊಡಬಾರದು ಎಂದು ಜಿಲ್ಲಾಧಿಕಾರಿಗಳಾದ ಸಿ.ಎನ್​. ಶ್ರೀಧರ ಹೇಳಿದರು.

ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂ ಹಾಗೂ ಪ್ರೊ. ಎಸ್​.ವಿ. ಸಂಕನೂರ ಅಭಿಮಾನಿ ಬಳಗ ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ ಗದಗ ಜಿಲ್ಲೆಗೆ ದ್ವೀತಿಯ ಪಿಯುಸಿ ವಾಷಿರ್ಕ ಪರೀೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾಥಿರ್ಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾಥಿರ್ಗಳ ಸಾಧನೆ ನಿರಂತರವಾಗಿರಬೇಕು. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಬೇಕು. ಪಿಯುಸಿ ಪರೀೆಯಲ್ಲಿ ಯಶಸ್ಸುಗಳಿಸಿದಂತೆ ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸನ್ನು ಗಳಿಸುತ್ತ ಸಾಗಬೇಕು ಎಂದರು. ವಿದ್ಯಾಥಿರ್ಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ ಉಪನ್ಯಾಸಕರು ಹಾಗೂ ಪಾಲಕರನ್ನು ಅಭಿನಂದಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಎಸ್​. ವಿ. ಸಂಕನೂರ ಮಾತನಾಡಿ, ವಿದ್ಯೆಯು ಯಾರ ಸ್ವತ್ತು ಅಲ್ಲ, ಅದು ಸತತ ಪರಿಶ್ರಮದಿಂದ ಯಾರಾದರೂ ಸಾಧನೆ ಮಾಡಬಹುದು. ಮೂವರು ವಿದ್ಯಾಥಿರ್ನಿಯರು ಬಡ ಕುಟುಂಬದಿಂದ ಹಾಗೂ ಪರಿವಾರದ ತೊಂದರೆಗಳನ್ನು ಎದುರಿಸಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಕಲಿತ ಕಾಲೇಜಿಗೆ ಕೀತಿರ್ ತಂದಿದ್ದಾರೆ. ವಿಜಯಲಕ್ಷಿ$್ಮ ಗೊಂಡಬಾಳ ಕುರಿಗಾರಿಕೆ ಹಾಗೂ 33 ಜನರಿರುವ ಅವಿಭಕ್ತ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ ಉತ್ತಮ ಶೈಣಿಕ ಸಾಧನೆ ಮಾಡಿದ್ದಾಳೆ. ಕಾವ್ಯ ಹಿರೇಗೌಡರ ತಮ್ಮ ತಂದೆ ಅನಾರೋಗ್ಯ ಹಾಗೂ ಬಡತನದ ಸ್ಥಿತಿಯಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನವತಿಕಾ ಹಜಾರೆ ಅನೇಕ ಕೌಟುಂಬಿಕ ಕಷ್ಟಗಳಿದ್ದರೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದರು.

ವಿದ್ಯಾಥಿರ್ನಿಯರು ತಮ್ಮ ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೇ ದೃಢ ಸಂಕಲ್ಪ ಹಾಗೂ ಆತ್ಮ ವಿಶ್ವಾಸದಿಂದ ಮುಂದೆಯೂ ಶೈಣಿಕ ಸಾಧನೆಯನ್ನು ಮುಂದುವರೆಸಿ ಐಎಎಸ್​, ಕೆಎಎಸ್​, ನಂತಹ ಸ್ಪರ್ಧಾತ್ಮಕ ಪರೀೆಗಳನ್ನು ಎದುರಿಸಿ ಉತ್ತಮ ಅ-ಕಾರಿಗಳಾಗಿ ರೂಪಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಾಣಿಜ್ಯ ವಿಭಾಗದಲ್ಲಿ 592 (ಶೇ.98.66) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನವತಿಕ ಹಜಾರಿ, ವಿಜ್ಞಾನ ವಿಭಾಗದಲ್ಲಿ 590 (ಶೇ.98.33) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾವ್ಯ ಹಿರೇಗೌಡರ ಜೆ. ಟಿ. ಕಾಲೇಜಿನ ವಿದ್ಯಾಥಿರ್ನಿಯರಾಗಿದ್ದಾರೆ. ಕಲಾ ವಿಭಾಗದಲ್ಲಿ 587 (ಶೇ.97.83) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುಂಡರಗಿಯ ಜೆ.ಎ. ಪಿಯು ಕಾಲೇಜ ವಿದ್ಯಾಥಿರ್ನಿ ವಿಜಯಲಕ್ಷಿ$್ಮ ಗೊಂಡಬಾಳ ವಿದ್ಯಾಥಿರ್ನಿಯರನ್ನು ಹಾಗೂ ಅವರ ತಾಯಂದಿರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ವಿದ್ಯಾಥಿರ್ನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ತಮಗೆ ಅಧ್ಯಯನದ ಪ್ರತಿ ಹಂತದಲ್ಲಿ ಸಹಾಯ ಸಹಕಾರ ಮಾರ್ಗದರ್ಶನ ನೀಡಿದ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ತಮ್ಮ ಪಾಲಕರಿಗೆ ಧನ್ಯವಾದಗಳನ್ನು ಅಪಿರ್ಸಿದರು.

ವಿಧಾನ ಪರಿಷತ್​ ಸದಸ್ಯ ಪ್ರೊ. ಎಸ್​. ವಿ. ಸಂಕನೂರ ವಿದ್ಯಾಥಿರ್ನಿಯರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿ ಅಭಿನಂದಿಸಿದರು.

ಪಿಯು ಮಹಾವಿದ್ಯಾಲಯದ ನೌಕರರ ಸಂದ ಅಧ್ಯ ಅಶೋಕ ಅಂಗಡಿ, ಜೆ. ಟಿ. ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಪಿ. ಜಿ. ಪಾಟೀಲ, ರಾಜ್ಯ ಪಿಯು ಮಹಾವಿದ್ಯಾಲಯದ ನೌಕರರ ಸಂದ ಗೌರವಾಧ್ಯ ಪವಾಡಿಗೌಡ್ರ, ಎಸ್​. ಐ. ಮೇಟಿ, ಜೆ. ಎ. ಸಿಸಿರ್, ಡಾ. ಬಿ. ಎಸ್​. ರಾಠೋಡ, ಎಸ್​. ಎಸ್​. ಕುಲಕಣಿರ್, ಬಿ. ವಿ. ಪಾಟೀಲ, ಡಾ. ವೈ. ಆರ್​. ಬೇಲೇರಿ, ಪ್ರೊ. ಎಸ್​. ಎನ್​. ಕೌಲಗಿ, ಡಾ. ದತ್ತಪ್ರಸನ್ನ ಪಾಟೀಲ, ಎನ್​. ವಿ ಜೋಷಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net