

ಗದಗ : ನಗರದ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಅಸ್ಮಾಕಂ ಸಂಸ್ಕೃತ ನಿರಂತರ ಕಾರ್ಯಕ್ರಮವು ಮುಳಗುಂದ ನಾಕಾ ಹತ್ತಿರದ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಜರುಗಿತು. ಸಾನಿಧ್ಯ ವಹಿಸಿದ್ದ ಧಾರ್ಮಿಕ ಪಾಠಶಾಲೆಯ ವ್ಯವಸ್ಥಾಪಕರಾದ ಪೂಜ್ಯ ಶ್ರೀ ಶಿವಪ್ರಸಾದ ದೇವರು ಮಾತನಾಡಿ, ಸಂಸ್ಕೃತ ಜಾಗೃತಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಲ್ಲರೂ ಪರಿಶ್ರಮದಿಂದ ಸಂಸ್ಕೃತ ಕಲಿಯುವಂತಾಗಲಿ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜ.ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಸ್.ಎನ್ ಶಿಂಪಗೇರ ಮಾತನಾಡಿ, ‘ನಮ್ಮ ಶರೀರದಲ್ಲಿನ ದೊಡ್ಡ ವೈರಿ ಸೋಮಾರಿತನವೇ, ಆದ್ದರಿಂದ ಆಲಸ್ಯವನು ಬಿಟ್ಟು ಎಲ್ಲ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು ಎಂದು ನುಡಿದು ವಿದ್ಯೆಯ ಮಹತ್ವವನ್ನು ವಿವರಿಸಿದರು. ಅತಿಥಿಗಳಾದ ಕಣವಿ ಹನುಮಾನ್ ಮಂದಿರ ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಕಳಕಪ್ಪ ಕುರ್ತಕೋಟಿ ಮಾತನಾಡಿ, ಸುಭಾಷಿತ ಅಂದರೆ ಒಳ್ಳೆಯ ಮಾತು, ಈ ಸುಭಾಕ್ಷಿತರಸ ಭೂಮಿಯಲ್ಲಿರುವುದರಿಂದ ಇದರ ಮುಂದೆ, ನನ್ನ ಆಟ ನಡೆಯುದಿಲ್ಲವೆಂದು ಅಮೃತವೂ ಹೆದರಿ ಸ್ವರ್ಗಕ್ಕೆ ಹೋಯಿತು. ಸುಭಾಷಿತಗಳನ್ನು ಅರಿತು ನಿಮ್ಮ ಜೀವನವನ್ನು ಪಾವನಗೊಳಿಸಿರಿ ಎಂದು ವಿದ್ಯಾರ್ಥಿಗಳನ್ನು ಕುರಿತು ನುಡಿದರು. ಹಾವೇರಿಯ ಶ್ರೀ ಸಂತೋಷ ಅವರಿಂದಸುಭಾಕ್ಷಿತಗಳ ಮಹತ್ವ’ ಕುರಿತು ಉಪನ್ಯಾಸ ಜರುಗಿತು.
ಜ.ತೋ.ಸ.ಪಾ ಹಿರಿಯ ಶಿಕ್ಷಕರಾದ ಎಸ್.ಎಸ್ ನೀಲಗುಂದ, ಮಹಾಂತೇಶ ಮಾದರ, ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಐಕ್ಯ ಮಂತ್ರದೊAದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.