

ಗದಗ: ನಗರದ ತೋಂಟದಾರ್ಯ ಸಂಸ್ಕೃತ ಪಾಠಶಾಲಾ ಹಾಗೂ ಸಂಸ್ಕೃತ ಭಾರತೀ ಸಹಯೋಗದಲ್ಲಿ ದಿ.11-7-25ರಿಂದ ನಡೆದ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭ ರವಿವಾರ ದಿ.20ರಂದು ಭೂಮ ರೆಡ್ಡಿ ಸರ್ಕಲ್ ಬಳಿಯಿರುವ ಜ. ತೋಂಟದಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಜರುಗಿತು.
ಅತಿಥಿಗಳಾಗಿ ಆಗಮಿಸಿದ ಸಾಫ್ಟವೇರ್ ಉದ್ಯೋಗಿ ಹಾಗೂ ಶಿಬಿರಾರ್ಥಿ ಶ್ರೀ ಪ್ರವೀಣ ಬೆನ್ನೂರವರು ಸಂಸ್ಕೃತ ಸರಳವಾಗಿದ್ದು ರಾಮಾಯಣ ಮಹಾಭಾರತ ಮುಂತಾದ ಅನೇಕ ಗ್ರಂಥಗಳು ಸಂಸ್ಕೃತದಲ್ಲಿವೆ ಮತ್ತು ಅನೇಕ ಸಂಸ್ಕೃತ ಶಬ್ದಗಳು ಕನ್ನಡದಲ್ಲಿ ಸೇರಿಕೊಂಡಿವೆ ಸಂಸ್ಕೃತ ಕಲಿಯುವ ಮೂಲಕ ದೊಡ್ಡ ದೊಡ್ಡ ಗ್ರಂಥಗಳನ್ನು ನಾವು ಅರ್ಥೈಸಿಕೊಳ್ಳಬೇಕೆಂದರು ಶಿಬಿರ ಸಂಚಾಲಕಿಯರಾದ ಶ್ರೀಮತಿ ಶೈಲಜಾ ಭಗಿನೀ ಅವರು ಸಂಸ್ಕೃತ ಭಾಷೆಯ ಸರಿ ಯಾದ ಅಧ್ಯಯನದಿಂದ ಸಂತೋಷವಾಗುವದಲ್ಲದೆ ಇಲ್ಲಿನ ಅಲ್ಪಪ್ರಾಣ ಮಹಾಪ್ರಾಣಗಳ ಕ್ರಮಬದ್ಧ ಉಚ್ಚಾರದಿಂದ ವ್ಯಾಯಾಮವಾಗಿ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿ ಶಿಬಿರ ನಡೆಸಲು ಅವಕಾಶ ಕೊಟ್ಟ ಜ.ತೋ.ಸಂಸ್ಕ್ರತ ಪಾಠಶಾಲೆಯ ಮುಖ್ಯಸ್ಥರಿಗೆ ಕ್ರುತಜ್ಞತೆ ಸಲ್ಲಿಸಿದರು ಸಹಾಯಕರಾದ ಬಳ್ಳಾರಿಯ ತೇಜಸ್ ಅವರು ಈ ಶಿಬಿರದಿಂದ ನನ್ನ ಸಂಭಾಷ ಣೆಯಲ್ಲಿ ಆಗುತ್ತಿರುವ ಲೋಪ ದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಯಿತು ಎಂದರು ಅಧ್ಯಕ್ಷ ಸ್ಥಾನದಿಂದ ಮುಖ್ಯಾಧ್ಯಾಪಕರಾದ ಶ್ರೀ ಶಿವಮೂರ್ತೆಪ್ಪ ಶಿಂಪಿಗೇರವರು ಸಂಸ್ಕೃತ ಅಪಾರ ಜ್ಞಾನರಾಶಿಯುಳ್ಳ ಭಾಷೆ 1990ರಲ್ಲಿ ಗದಗ ನಗರದಲ್ಲಿ ಏಕಕಾಲಕ್ಕೆ ಜ.ತೋ. ಸಂಸ್ಕೃತ ಪಾಠಶಾಲೆ, ಅಣ್ಣಿಗೇರಿ ಆಶ್ರಮ, ವೀರೇಶ್ವರ ಪುಣ್ಯಾಶ್ರಮ ಹೀಗೆ ಹತ್ತು ಸಂಸ್ಕೃತ ಸಂಭಾಷಣೆ ಶಿಬಿರಗಳನ್ನು ನಡೆಸಿ ಹಿಂದಿನ ಜಿಲ್ಲಾಧ್ಯಕ್ಷ ದಿ.ಪ್ರೊ. ರವೀಂದ್ರ ಕೊಪ್ಪರ ನೇತೃತ್ವದಲ್ಲಿ ಬೀದಿ ನಾಟಕ ಶೋಭಾಯಾತ್ರೆ ನಡೆಸಿ ಸಂಸ್ಕೃತ ಭಾರತೀ ಸಂಸ್ಥೆಯ ಚಟುವಟಿಕೆಗಳಿಗೆ ಕೈ ಜೋಡಿಸಿದ್ದು ಸ್ಮರಿಸಿ ಶಿಬಿರಾರ್ಥಿಗಳು ಸಂಸ್ಕೃತದಲ್ಲಿ ಏನಾದರೂ ಕಠಿಣ ಸಮಸ್ಯೆ ಇದ್ದರೆ ಅಂಥವರಿಗೆ ನಮ್ಮ ಶಾಲೆ ಸದಾ ತೆರೆದಿರುತ್ತದೆ ನೀವು ಪರಸ್ಪರ ಸಂಭಾಷಣೆ ಮಾಡುವ ಮೂಲಕ ಸಂಸ್ಕೃತವನ್ನು ಬೆಳೆಸಿ ಮಿತ್ರರಿಗೂ ಸಂಸ್ಕೃತವನ್ನು ಕಲಿಸಬೇಕೆಂದರು ಸಂಸ್ಕೃತ ಭಾರತೀ ಗದಗ ನಗರ ಸಂಯೋಜಕರು ಶ್ರೀ ಮೌನೇಶ್ ಭಜಂತ್ರಿ, ಗುರುಸಿದ್ಧಯ್ಯ ಚ.ಹಿರೇಮಠ, ಗಂಗಾಧರ ತೆಗ್ಗಿ ನಮಠ, ಸಂಸ್ಕೃತ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಪಟ್ಟಣಶೆಟ್ಟಿ, ಶಿಕ್ಷಕ ಮಹಾಂತೇಶ ಮಾದರ, ಸಂಗಮೇಶ ಮುಂತಾದವರು ಉಪಸ್ಥಿತರಿದ್ದರು ಐಕ್ಯ ಮಂತ್ರದೊಂದಿಗೆ ಕಾರ್ಯಕ್ರಮ ಮುಗಿಯಿತು