ಶಿರಹಟ್ಟಿ ಪಟ್ಟಣದಲ್ಲಿ ಹಿಂದೂ ಸಮಾವೇಶ

06GDG03
Published on
ಗದಗ: ಬರುವ ನ.8 ರಂದು ಶಿರಹಟ್ಟಿ ಪಟ್ಟಣದಲ್ಲಿ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಲಿದ್ದಾರೆ ಎಂದು ಶ್ರೀರಾಮಸೇನೆ ಬೆಳಗಾವಿ ವಿಭಾಗದ ಮುಖ್ಯಸ್ಥ ರಾಜು ಖಾನಪ್ಪನ್ನವರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಇತ್ತೀಚೆಗೆ ಶಿರಹಟ್ಟಿಯಲ್ಲಿ ಹಿಂದೂ ಯುವಕನ ಮೇಲೆ ಎಸ್ ಡಿ ಪಿಐ ಮುಖಂಡರು ಹಲ್ಲೆ ನಡೆಸಿದ್ದಾರೆ. ನೆಮ್ಮದಿಯಿಂದ ಇದ್ದ ಶಿರಹಟ್ಟಿ ಪಟ್ಟಣದಲ್ಲಿ ಕೋಮು ಗಲಭೆ ಶುರುವಾಗಿದೆ. ಪ್ರಕರಣದಲ್ಲಿ ಎಸ್ ಡಿಪಿಐ ಮುಖಂಡರು ಪೊಲೀಸ್ ಇಲಾಖೆ ಮೇಲೆ ಹಲ್ಲೆ ನಡೆಸಿದೆ. ಹೀಗಿದ್ದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿದೆ. ಶಿರಹಟ್ಟಿ ಪ್ರಕರಣದಲ್ಲಿ ಹಿಂದೂಗಳ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು. ಆದರೆ, ಎಸ್ ಡಿ ಪಿ ಐ ಕಾರ್ಯಕರ್ತರ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಶಿರಹಟ್ಟಿಯಲ್ಲಿ ಸ್ವಾಗತಿಸುತ್ತಾರೆ. ಎಚ್.ಕೆ. ಪಾಟೀಲರ ಜಾತಿ ರಾಜಕಾರಣದಿಂದ ಈ ಅವ್ಯವಸ್ಥೆ ಶುರುವಾಯಿತು.  ಹೀಗಾಗಿ ಹಿಂದೂಗಳ ರಕ್ಷಣೆಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಾವೇಶ ಪಕ್ಷಾತೀತವಾಗಿದೆ. ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಬೇಕು. ಹಿಂದೂಗಳ ಅನ್ಯಾಯ ವಿರುದ್ಧ ನಡೆದಿರುವ ಷಢ್ಯಂತ್ರ ಬಗ್ಗೆ ಅರಿತುಕೊಂಡು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ರಾಜು ಖಾನಪ್ಪನ್ನವರ ಹೇಳಿದರು.
ಕುಮಾರ ನಡಗೇರಿ, ಪ್ರಕಾಶ ಬಡೆನ್ನವರ, ಸಂತೋಷ ಕುರಿ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಶಿವಯೋಗಿ ಹಿರೇಮಠ, ಶಂಕರ ಬಾವಿ ಇತರರು ಇದ್ದರು.
ಬಾಕ್ಸ್:
ಪೊಲೀಸ್ ಇಲಾಖೆ ವೈಫಲ್ಯ ಆಗಿದೆ. ಶಿರಹಟ್ಟಿ, ಲಕ್ಷ್ಮೇಶ್ವರ ಮುಂಡರಗಿಯಲ್ಲಿ ಮರಳು ಮಾಫಿಯಾ ತಲೆ ಎತ್ತಿದೆ. ಇದಕ್ಕೆ ಕಾರಣವೇ ಪೊಲೀಸ್ ಇಲಾಖೆ. ಈ ಭಾಗದಲ್ಲಿ ರಾಜಾರೋಷವಾಗಿ ಇಸ್ಪಿಟ್ ಆಡಿಸಲಾಗುತ್ತಿದೆ. ಅಕ್ರಮವಾಗಿ ಖಸಾಯಿಖಾನೆ ನಡೆಸಲಾಗುತ್ತಿದೆ. ಇದರೆಲ್ಲದ ಹಫ್ತಾ ಪೊಲೀಸ್ ಇಲಾಖೆಗೆ ಪ್ರತಿ ತಿಂಗಳು ಮುಟ್ಟುತ್ತದೆ. ಇದಕ್ಕೆ ಸ್ಥಳೀಯ ಪೊಲೀಸ್ ಇಲಾಖೆ ಅಧಿಕಾರಿಗಳೇ ಕಾರಣ. ಎಸ್ಪಿ ರೋಹನ್ ಜಗದೀಶ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ರಾಜು ಖಾನಪ್ಪನ್ನವರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net