

ವಿಜಯವಾಣಿ ಸುದ್ದಿಜಾಲ ಗದಗ
ಗುರುರ್ಪೂಣಿಮೆಗೆ ಧಾಮಿರ್ಕ ಹಾಗೂ ಶೈಣಿಕ ಮಹತ್ವವಿದೆ. ಗುರು ಎಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂಬ ನಂಬಿಕೆ ಇದೆ. ಗುರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ನಂಬಿಕೆಯಿಂದ ಜೀವನವನ್ನು ನಾವೆಲ್ಲ ನಡೆಸುತ್ತಿದ್ದೇವೆ ಎಂದು ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.
ಜಿಲ್ಲಾ ಸಖಿ ಸಹೇಲಿ ಸಂಟನೆಯಿಂದ ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ಜರುಗಿದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ಸರಿಯಾದ ಮಾರ್ಗ ತೋರಬಲ್ಲವನೇ ಗುರು. ಈ ಎರಡರದಲ್ಲಿ ಗುರು ಶಿಷ್ಯರ ಬಾಂಧವ್ಯವಿದೆ. ಮನುಷ್ಯನ ಸಾವಿರಾರೂ ತೊಂದರೆಗಳಿಗೆ ಸರಿಯಾದ ಮಾರ್ಗಗಳನ್ನು, ನ್ಯಾಯ ನೀತಿ, ಧರ್ಮ ಸಂಸತಿಯ ಹಾದಿಯನ್ನು ತೋರಿ ಅವರನ್ನು ಸದ್ವಿಚಾರಿಗಳನ್ನಾಗಿ ಮಾಡುವವನೇ ಗುರು ಆಗಿದ್ದಾನೆ ಎಂದರು.
ಸಖಿ ಸಹೇಲಿ ಸಂದ ಅಧ್ಯೆ ಸುಮಾ ಪಾಟೀಲ ಮಾತನಾಡಿ ಮನುಷ್ಯನ ಭವದ ತೊಂದರೆಗಳಿಗೆ ಸರಿಯಾದ ಬೋಧನೆಯ ಮೂಲಕ ಸೂಕ್ತವಾದ ದಾರಿಯನ್ನು ತೋರಿ ಭಕ್ತನ ಬದುಕಿಗೆ ನಿಜಾರ್ಥ ಬರುವಂತೆ ಅವರನ್ನು ಉತ್ತಮರನ್ನಾಗಿ ಮಾಡುವ ಕೆಲಸವು ಗುರುವಿನಿಂದ ನಡೆಯುತ್ತದೆ ಎಂದರು.
ನಿರ್ಮಲಾ ಪಾಟೀಲ ಮಾತನಾಡಿ ಮಠ ಮಾನ್ಯಗಳು ನಮ್ಮೆಲ್ಲರ ಬದುಕಿಗೆ ಬೆಳಕು ನೀಡುವ ಶಕ್ತಿ ಕೇಂದ್ರಗಳು. ಮನುಷ್ಯನ ಜೀವನಕ್ಕೆ ಬೇಕಾಗಬಲ್ಲ ಉತ್ತಮ ಸನ್ಮಾರ್ಗವನ್ನು ತೋರುವ ಪೂಜ್ಯರು ನಮ್ಮ ಜೀವನದ ಆಶಾಕಿರಣ ಎಂದರು.
ಶಶಿಕಲಾ ಮಾಲೀಪಾಟೀಲ, ಮಾಧುರಿ ಮಾಳೆಕೊಪ್ಪ, ಅಶ್ವಿನಿ ಮಾದಗುಂಡಿ, ಚಂದ್ರಕಲಾ ಸ್ಥಾವರಮಠ, ಪ್ರಿಯಾಂಕಾ ಹಳ್ಳಿ, ವಿದ್ಯಾ ಶಿವನಗುತ್ತಿ, ಮಧು ಕರಿಬಿಷ್ಠಿ, ರೇಖಾ ರೊಟ್ಟಿ, ಸುಷ್ಮೀತಾ ವೆರ್ಣಕರ, ಸುಗ್ಗಲಾ ಯಳಮಲಿ, ಶೋಭಾ ಹಿರೇಮಠ, ಶ್ರೀದೇವಿ ಮಹೇಂದ್ರಕರ, ಪದ್ಮಿನಿ ಇತರರು ಇದ್ದರು.