

ಭಾರತೀಯ ಸಂಸ್ಕಾರ, ಸಂಸತಿ ಜಗತ್ತಿಗೆ ಹೆಸರಾಗಿದೆ: ಬೂದೀಶ್ವರ ಶ್ರೀ
ವಿಜಯವಾಣಿ ಸುದ್ದಿಜಾಲ ಗದಗ
ಅತ್ಯುನ್ನತವಾದ ಸಂಸ್ಕಾರ, ಸಂಸತಿಗೆ ಜಗತ್ತಿನಲ್ಲಿಯೇ ಹೆಸರಾಗಿರುವ ಭಾರತಕ್ಕೆ ತನ್ನದೇ ಆದ ಹಿರಿಮೆ ಗರಿಮೆಯ ಸ್ಥಾನವಿದೆ ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು ಹೇಳಿದರು.
ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದ 17ನೇ ವಾಷಿರ್ಕೋತ್ಸವದ ನಿಮಿತ್ಯ ಗದಗ&ಬೆಟಗೇರಿಯ ಶಿರಡಿ ಸಾಯಿಬಾಬಾ ಸತ್ಸಂಗ ಶುಕ್ರವಾರ ಏರ್ಪಡಿಸಿದ್ದ ಶಿರಡಿ ಸಾಯಿಬಾಬಾರ ಧುನಿ ಶಿಲಾನ್ಯಾಸ, ಸಾಯಿ ಛಾಯಾಛತ್ರ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತನಗರಿವಿಲ್ಲದೆ ಜಗತ್ತು ಭಾರತಕ್ಕೆ ಕೈ ಮುಗಿಯುತ್ತದೆ. ಎಂತಹ ನಾಸ್ತಿಕನೂ ಕೂಡ ತಲೆ ಬಾಗಿ ನಮಿಸುವನು. ಭಾರತದ ಸಂಸ್ಕಾರ, ಸಂಸತಿ. ಮಹಾನ್ ತಪಸ್ವಿಗಳು, ತತ್ವಜ್ಞಾನಿಗಳು, ಧರ್ಮ ಗುರುಗಳು ಭದ್ರವಾದ ತತ್ವ ಸಂದೇಶ, ಸಂಸ್ಕಾರ, ಸಂಸತಿಯೇಇದಕ್ಕೆ ಕಾರಣ. ಹೆಣ್ಣಿನಲ್ಲಿ ತಾಯಿತನವನ್ನು, ದೈವತ್ವವನ್ನು, ಸಹೋದರತ್ವವನ್ನು ಕಂಡ ದೇಶ ಜಗತ್ತಿನ ಭೂಪಟದಲ್ಲಿ ಎಲ್ಲಿಯಾದರೂ ಇದ್ದರೆ ಅದು ನಮ್ಮ ಹೆಮ್ಮೆಯ ಭಾರತದಲ್ಲಿ ಮಾತ್ರ. ಅಂತಹ ಸಂಸ್ಕಾರ ಸಂಸತಿ ನಮ್ಮಲ್ಲಿದೆ ಎಂದರು.
ದೇವ ಮಾನವರಾಗಿದ್ದ ಶಿರಡಿ ಸಾಯಿಬಾಬಾ ಅವರು ಸಕಲರಲ್ಲಿ, ಸಕಲ ಪ್ರಾಣಿಜೀವಿಗಳಲ್ಲಿ ದೇವರ ಸ್ವರೂಪವನ್ನು ಕಾಣಬೇಕು. ಸಂಕಷ್ಟದಲ್ಲಿ ಇರುವವರಿಗೆ, ನಿರ್ಗತಿಕರಿಗೆ ಸಹಾಯ ಮಾಡಬೇಕು, ದಾನಧರ್ಮ ಮಾಡಬೇಕು ಎಂದು ಬೋಧಿಸುವ ಮೂಲಕ ಸಬ್ ಕಾ ಮಾಲೀಕ ಏಕ್ ಹೈ ಎಂದು ಎಲ್ಲರಲ್ಲಿ ಸದ್ಭಾವನೆ ಮೂಡಿಸಿದವರು. ಸಂಕಷ್ಟದಲ್ಲಿ ಇರುವವರನ್ನು ಸಂರಸು, ನೆರವು ನೀಡು, ಹಸಿದ ಹೊಟ್ಟೆಗೆ ಅನ್ನ ನೀಡು ಎಂದು ಬಾಬಾ ಬೋಧಿಸಿದ್ದಾರೆ ಎಂದರು.
ಸಾಯಿ ಸಂಸ್ಥಾನ ಶಿರಡಿ ೇತ್ರದ ಸೇವಾ ನಿವೃತ್ತ ಪುರೋಹಿತರಾದ ಬಾಳಾಸಾಹೇಬ ಜೋಶಿ ಅವರು ಶಿರಡಿ ಸಾಯಿಬಾಬಾರ ಧುನಿ ಶಿಲಾನ್ಯಾಸ, ಭೂಮಿ ಪೂಜೆಯ ಧಾಮಿರ್ಕ ಸಾಂಪ್ರದಾಯಿಕ ವಿಧಿವಿಧಾನ ನೆರವೇರಿಸಿ ಮಾತನಾಡಿ ಶೃದ್ಧಾಭಕ್ತಿಯಿಂದ ಸ್ಮರಣೆ, ಸಾಮಾಜಿಕ, ಧಾಮಿರ್ಕ ಕಾರ್ಯದಲ್ಲಿ ಮುನ್ನಡೆದರೆ ಸಾಯಿಬಾಬಾ ಆಶೀರ್ವದಿಸಿ ಮುನ್ನಡೆಸುವರು. ಬಾಬಾ ಮಂದಿರ ಸುಂದರವಾಗಿ ನಿರ್ಮಾಣಗೊಂಡಿದೆ, ಭಕ್ತರನ್ನು ಆಕಷಿರ್ಸಿ ಸದ್ಭಾವನೆ ಮೂಡಿಸುತ್ತಿರುವದು ಅಭಿನಂದನೀಯ ಎಂದರು.
ಅಧ್ಯತೆ ವಹಿಸಿದ್ದ ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯ ಮಹೇಶಗೌಡ ತಲೇಗೌಡ್ರ ಸಾಯಿಬಾಬಾ ಮಂದಿರದ ಧರ್ಮ ಕಾರ್ಯಗಳನ್ನು ವಿವರಿಸಿದರು.
ಡಾ. ಎಸ್. ಬಿ. ಶೆಟ್ಟರ, ರವಿಶಂಕರ ಚಿಂಚಲಿ, ಗಂಗಣ್ಣ ಕೋಟಿ, ಅವಿನಾಶ ಸುಲಾಖೆ, ರುವೀ ತ್ತೇಪೂರ, ಐ. ಕೆ. ಬಲೂಚಿಗಿ, ಕೆ.ನಾಗೇಶರಾವ್, ಉಮೇಶ ನಾಲ್ವಾಡ, ಸಂಜಯ ರೊದ್ದಂ, ದೀಪಕ ಸುಲಾಖೆ, ಡಾ. ಎಸ್. ಡಿ. ಯರಗೇರಿ, ಸಿದ್ದಣ್ಣ ಗೌರಿಪುರ, ರಾಮಣ್ಣ ಕಾಶಪ್ಪನವರ, ರವಿರಾಜ ಕೋಟಿ, ಸದಾಶಿವಪ್ಪ ವಾಲಿ ಹಲವರು ಇದ್ದರು.