

ವಿಜಯವಾಣಿ ಸುದ್ದಿಜಾಲ ಗದಗ
ವಿಶ್ವಗುರು ಬಸವಣ್ಣನವರ ಚರಿತೆ ಲೋಕಪಾನವ ಚರಿತೆ, ಧಾಮಿರ್ಕ ವ್ಯವಸ್ಥೆಗಳು ಸುಲಭವಾಗಿ ಯಾರಕೈಗೂ ಸಿಗದ ಸಂದರ್ಭದಲ್ಲಿ ಬಸವಣ್ಣನವರ ಅವತಾರವಾವಿಟ್ಟು ಪ್ರತಿಯೊಬ್ಬರು ಪ್ರತಿನಿತ್ಯ ಆರಾಧಿಸುವ ಇಷ್ಟಲಿಂಗ ಜಗತ್ತಿಗೆ ಪರಿಚಯಿಸಿದರು. ಜೊತೆಗೆ ಇಷ್ಟಲಿಂಗಕ್ಕೆ ಇರುವ ಎಲ್ಲ ರೀತಿಯ ಮೈಲಿಗೆಯನ್ನು ಕಳೆದು ಇಷ್ಟಲಿಂಗದ ರೂಪದಲ್ಲಿ ಪ್ರತಿಯೊಬ್ಬರ ಬಡವರ ಮನೆಗೆ ಭಗವಂತ ಬರುವ ಹಾಗೆ ಶ್ರೇಷ್ಠ ದಾರ್ಶನಿಕ ವಿಶ್ವಗುರು ಬಸವಣ್ಣನವರು ಮಾಡಿದರು ಎಂದು ಶಿವಾನಂದ ಬೃಹನ್ಮಠದ ಸದಾಶಿವನಾಂದ ಶ್ರೀಗಳು ಹೇಳಿದರು.
ನಗರದ ಬಸವ ವನದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಸವೇಶ್ವರ ಜಯಂತಿ ಆಚರಿಸಿ ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಲಾಂತರ ಜನ ಸತ್ಯ ಶುದ್ಧವಾದ ಕಾಯಕ, ಶುದ್ಧವಾದ ಆಹಾರ ವಿಹಾರ ಕ್ರಮದೊಂದಿಗೆ ಬದುಕಿಗೆ ನಡೆಸಲು ಹಾಕಿದ ಬುನಾಧಿಯೇ ಬಸವಣ್ಣನವರ ಸಂದೇಶ ಆಗಿದೆ. ಬಸವೇಶ್ವರ ನಗರ ಸಮಾನ ಮನಸ್ಕರ ಯುವಕರ ಪಡೆ, ಶ್ರೀರಾಮ ಸೇನಾ, ಆಟೋ ಸೇನಾ, ದಲಿತ ಮಿತ್ರ ಮೇಳ ಹಾಗೂ ಶಿವ ರಾಮ ಕೃಷ್ಣ ಸೇವಾ ಟ್ರಸ್ಟ್ ವತಿಯಿಂದ ಇಂತಹ ಸಮಾನತೆ ಕಾರ್ಯಕ್ರಮ ಏರ್ಪಡಿಸುರುವುದು ಮಹತ್ವವೇ ಸರಿ ಎಂದರು.
ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದಶಿರ್ ರಾಜು ಖಾನಪ್ಪನವರ ಮಾತನಾಡಿ, ಮಹಾನ ಸಂತ, ದಾರ್ಶನಿಕ ಕಾಯಕವೇ ಕೈಲಾಸ ಎಂದು ನುಡಿದ ಬಸವಣ್ಣನವರ ಜಯಂತ್ಯೋತ್ಸವ ಆಚರಿಸುವುದು ನಮ್ಮಲ್ಲರ ಹೆಮ್ಮೆ ಎಂದರು.
ಮಹೇಶ ರೋಖಡೆ, ಜಿಲ್ಲಾಧ್ಯ ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಸತೀಶ ಕುಂಬಾರ, ಈರಣ್ಣ ಗಾಣಿಗೇರ, ಸುನೀಲ ಮುಳ್ಳಾಳ, ಕಿರಣ ಹಿರೇಮಠ, ಸದಾನಂದಸಿಂಗ್ ರ್ಗುಲಹೊಸೂರ, ಪ್ರಮೋದಸಿಂಗ್ ರಜಪೂತ, ಬಸವರಾಜ ಕುರ್ತಕೋಟಿ ಹಲವರು ಇದ್ದರು.