ದೀನ ದಲಿತರ ಸೇವೆಯಿಂದ ಅಧಿಕಾರಕ್ಕೆ ಸಾರ್ಥಕತೆ - ಎಸ್ ವಿ ಸಂಕನೂರ

02GDG03
Published on

ಇದೇ ಸಂಧರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಳಕಪ್ಪ ಬಂಡಿ,ಅಧ್ಯಕ್ಷೆ ವಹಿಸಿದ್ದ ಶಾಸಕ ಡಾ ಚಂದ್ರು ಲಮಾಣಿ, ಮುಖಂಡ ರವಿ ದಂಡಿನ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ಪ್ರಧಾನ ಕಾರ್ಯದರ್ಶಿ ಆರ್ ಕೆ ಚವಾಣ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ ಮಲ್ಲಾಪೂರ, ಪಕೀರೇಶ ರಟ್ಟೀಹಳ್ಳಿ, ನಾಗರಾಜ ಕುಲಕರ್ಣಿ, ಗದಗ ಗ್ರಾಮೀಣ ಘಟಕದ ಅಧ್ಯಕ್ಷ ಬೂದಪ್ಪ ಹಳ್ಳಿ, ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಜಾನು ಲಮಾಣಿ, ರಾಜೇಶ್ವರಿ ಸಾಲುಗಟ್ಟಿ, ಅಶ್ವಿನಿ ಅಂಕಲಕೋಟಿ, ಕಸ್ತೂರಿ ಕಮ್ಮಾರ, ಕಮಲಾಕ್ಷಿ ಗೊಂದಿ, ಅಶ್ವಿನಿ  ಜಗತಾಪ್,  ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಚೆನ್ನಮ್ಮ ಹುಲ್ಕಣ್ಣವರ, ಕಮಲಾಕ್ಷಿ ಅಂಗಡಿ, ಸುಮಂಗಲ ಕೊನೆವಾಲ, ಜ್ಯೋತಿ ಹಾನಗಲ, ನಂದ ಪಲ್ಲೇದ, ಅರುಣಾ ಪಾಟೀಲ, ವಿನೋದ ಹಂಸನೂರ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

ನೂರಾರು ವರ್ಷಗಳ ಹಿಂದೆ ಲೋಕ ಕಲ್ಯಾಣದ ಮೂಲಕ ಜನಮಾನಸದಲ್ಲಿ ಉಳಿದ ಅಹಿಲ್ಯಾಬಾಯಿ ಹೋಳ್ಕರ್ ಅವರು ಮಕ್ಕಳಿಲ್ಲದ ವಿಧವಾ ಮಹಿಳೆಯರ ಆಸ್ತಿಯನ್ನು ರಾಜ್ಯಾಡಳಿತ ವಶಪಡಿಸಿಕೊಳ್ಳುವ ಕಾನೂನನ್ನು ತಗೆದುಹಾಕಿ ಆಸ್ತಿ ಹೊಂದುವ ಹಕ್ಕನ್ನು ಕಲ್ಪಿಸಿ ಕೊಟ್ಟಿದ್ದಲ್ಲದೆ ವಿಧವಾ ವಿವಾಹ,ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಪುರುಷ ಸಮಾನ ಹಕ್ಕು ನೀಡಿದವರು. ಔರಂಗಜೇಬನ ದಾಳಿಯಲ್ಲಿ ಹಾನಿಗೊಳಗಾದ ದೇವಾಲಯಗಳ ಜೀರ್ಣೋದ್ದಾರ, ಧಾರ್ಮಿಕ ಛತ್ರಗಳು, ಕೆರೆ ಕಟ್ಟೆಗಳನ್ನ ನಿರ್ಮಾಣ ಹೀಗೆ ತಮ್ಮ ಆಡಳಿತದುದ್ದಕ್ಕೂ ಅಸಹಾಯಕ ಜನರ ಆಶೋತ್ತರಗಳಿಗೆ ಸ್ಪಂದಿಸಿ ನ್ಯಾಯಪರವಾಗಿ ನಿಂತ ದಿಟ್ಟ ರಾಣಿ ಲೋಕಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರನ್ನ ಆದರ್ಶವಾಗಿ ಇಟ್ಟುಕೊಂಡು ನಾವೆಲ್ಲರು ನಡೆಯೋಣ ಎಂದು ಶಾಸಕ ಎಸ್ ವಿ ಸಂಕನೂರ ಹೇಳಿದರು.

ಗದಗನಲ್ಲಿ ನಡೆದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ನಿಮಿತ್ಯ ನಡೆದ "ಹೋಳ್ಕರ್ ಜೀವನ ಚರಿತ್ರೆ ಹಾಗು ಸಾಕ್ಷ್ಯ ಚಿತ್ರ ಪ್ರದರ್ಶನವನ್ನ ಉದ್ಘಾಟಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯೆವಸ್ತೆಯಲ್ಲಿ ಜನರ ಮೂಲಕ ಸಿಕ್ಕ ಅಧಿಕಾರವನ್ನ ವಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳದೆ ಪ್ರತಿ ಪ್ರಜೆಯ ಯೋಗಕ್ಷೇಮಕ್ಕೆ ನಾಡಿನ ಪ್ರಗತಿಗಾಗಿ ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂದರು.

ಗದಗ: ಸರ್ಕಾರವಿರಲಿ ಸಂಘ ಸಂಸ್ಥೆಗಳೆ ಆಗಿರಲಿ ಅಧಿಕಾರ ಬಂದಾಗ ಜನಸಾಮಾನ್ಯರ ದೀನ ದಲಿತರ ಒಳಿತಿಗಾಗಿ ಶ್ರಮಿಸಬೇಕು,ಅಂತವರ ಸೇವೆಯಲ್ಲಿಯೇ ಅಧಿಕಾರದ ಸಾರ್ಥಕತೆ ಇರುವದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net