ಮಕ್ಕಳಿಗೆ ಪಾರಿತೋಷಕ ವಿತರಣಾ ಸಮಾರಂಭ

Royal Angal Madhyam Proudhashaleyalli Makkalige Paritoshak Vitarana Samarambha News Photo
Published on

ಗದಗ: ನಗರದ ರಾಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ವಿವಿಧ ಸ್ಪರ್ಧೆ ಆಟೋಟಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ವಿತರಣಾ ಸಮಾರಂಭ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಎಸ್. ಸಿ. ಹಿರೇಮಠ ಸಿ.ಆರ್.ಪಿ. ನಂಬರ್ ೫ ಗದಗ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿಕಾರಿಗಳಾದ ಎ. ಎಂ. ಢಾಲಾಯತ ಇವರು ವಹಿಸಿದ್ದರು.

ಕಾರ್ಯಕ್ರಮಕ್ಕೆ ಸರ್ವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಎಸ್. ಕುಂಬಾರ ಗುರುಗಳು ಸ್ವಾಗತಿಸಿದರು ಕಾರ್ಯಕ್ರಮ ಸಸಿಗೆ ನೀರು ಉಣಿಸುವ ಮೂಲಕ ಹಿರೇಮಠ, ಢಾಲಾಯತ, ಕುಂಬಾರ ಫಾತಿಮಾ ನದಾಫ್, ಲಕ್ಷ್ಮೀನಾಯ್ಕರ ಎಲ್ಲರೂ ಸೇರಿ ಉದ್ಘಾಟಿಸಿದರು. ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ಕಾರ್ಯಕ್ರಮಕ್ಕೆ ಸರ್ವರನ್ನು ಕುಂಬಾರ್ ಸ್ವಾಗತಸಿದರು ಮುಖ್ಯ ಅತಿಥಿಗಳ ಪರಿಚಯವನ್ನು ರವಿಚಂದ್ರನ್ ಸರ್ ಮಾಡಿದರು ಈ ಸಂದರ್ಭದಲ್ಲಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ, ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು ಹಾಗೂ ಆಟದಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಸಿದ ಮಕ್ಕಳಿಗೆ ಪಾರಿತೋಷಕವನ್ನು ವಿತರಿಸಲಾಯಿತು. ಇದೇ ರೀತಿಯಾಗಿ ಗುಂಪು ಆಟದಲ್ಲಿ ಭಾಗವಹಿಸಿ ವಿಜೇತರಾದ ಟೀಮಿಗೆ ಪಾರಿತೋಷಕವನ್ನು ವಿತರಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸಾನಿಯಾ ಮುಲ್ಲಾ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆಯನ್ನು ಶಹನಾಜ ತಂಬ್ರಹಳ್ಳಿ ಶಿಕ್ಷಕಿ ಮಾಡಿದರು. ಪೂರ್ವ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆ ಕಾರ್ಯಕ್ರಮ ಲಕ್ಷ್ಮಿ ಕಲ್ಲೂರ್ ಶಿಕ್ಷಕಿ ಮಾಡಿದ ಮಾಡಿದರು. ಹೈಸ್ಕೂಲ್ ವಿಭಾಗದ ಬಹುಮಾನ ವಿತರಣೆಯನ್ನು ಅಂಜುಮ ಈಟಿ ಶಿಕ್ಷಕಿ ಮಾಡಿದರು. ಸ್ಪೋರ್ಟ್ಸ್ ಭಾಗದ ಬಹುಮಾನ ವಿತರಣೆಯನ್ನು ಮೋಹನ್ ಬಳ್ಳಾರಿ ಸರ್ ಮಾಡಿದರು.

ಈ ಸಂದರ್ಭದಲ್ಲಿ ದ್ರಾಕ್ಷಾಯಿಣಿ ಗುಡಿಗೇರಿ ಆಫ್ರಿನ್ ತಹಸಿಲ್ದಾರ್, ಶಿಲ್ಪಾ ತಳಗೇರಿ, ಪುಷ್ಪಾ ಮೆಣಸಿಗಿ, ಯಾಸ್ಮಿನ್ ಬಳ್ಳಾರಿ, ಜಿನಥ್ ಮಾಲ್ದಾರ್, ಪರಝಾನಾ ಧಾರವಾಡ, ನಿಖತ್ತ ನರಗುಂದ, ಸೌಮ್ಯ ಸರ್ವಿ, ವೀಣಾ ಪಾ. ವಿ. ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯ ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು ಎಂದು ಶಾಲಾ ಆಡಳಿತ ಅಧಿಕಾರಿಯಾಗಿ ಎ. ಎಂ. ಢಾಲಾಯತ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net