

ಗದಗ: ಓದುವ ಹವ್ಯಾಸ ಅದು ನಮ್ಮ ಜ್ಞಾನದ ವಿಕಾಸ ಉತ್ತಮ ಪುಸ್ತಕಗಳ ಓದು ನಮ್ಮ ಬದುಕನ್ನು ಪರಿಪೂರ್ಣಗೊಳಿಸುತ್ತದೆ ಹಾಗೂ ನಮ್ಮನ್ನು ಸದೃಢರನ್ನಾಗಿಸುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ ಹೇಳಿದರು.
ಅವರು ಮಂಗಳವಾರ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಸಾಪ್ತಾಹಿಕ ಸಭೆಯಲ್ಲಿ ಪುಸ್ತಕಗಳ ಮಹತ್ವ ಕುರಿತು ಮಾತನಾಡಿದರು. ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಓದಿನ ಅಭಿರುಚಿ ಹೆಚ್ಚಿಸಲು ಹಳೇಯ ಹಾಗೂ ಹೊಸ ಪುಸ್ತಕಗಳ ಸಂಗ್ರಹ ಕಾರ್ಯ ನಡೆಯಬೇಕು ಅಂದಾಗ ಮಕ್ಕಳಲ್ಲಿ ಓದುವ ಹವ್ಯಾಸ ಹಾಗೂ ಕುತೂಹಲ ಮೂಡಿ ಬರುತ್ತದೆ ಎಂದರು.
ಗದುಗಿನ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಸುರೇಶ ಕುಂಬಾರ ಮಾತನಾಡಿ ವ್ಯವಸಾಯ ನಮ್ಮೆಲ್ಲರ ಮೂಲ ಕಸಬು ಆಧುನಿಕತೆಯೊಂದಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಭೂಮಿ ತಾಯಿಯ ಒಡಲು ಹೊನ್ನಿನ ಕಡಲು ಹೀಗಾಗಿ ನಮ್ಮ ಹಿರಿಯರು ಮಣ್ಣನ್ನು ದೇವರೆಂದು ಪೂಜಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಡಾ.ರೇವಣಶಿದ್ದೇಶ್ವರ ಉಪ್ಪಿನ ಮಾತನಾಡಿ ಓದು ಮಹತ್ವವನ್ನು ನಾವಿಂದು ಮರೆಯುತ್ತಿದ್ದೇವೆ. ಮೊಬೈಲ್-ಟಿವಿಗೆ ಮಕ್ಕಳು ಹೊಂದಿಕೊAಡಿದ್ದಾರೆ. ಓದು ಬರಹವು ಮಕ್ಕಳಲ್ಲಿ ಹೆಚ್ಚಾಗಬೇಕು ಹಾಗೂ ಗ್ರಾಮೀಣರ ಬದುಕಿನ ಮುಖ್ಯ ಉದ್ಯೋಗ ಕೃಷಿ ಆಗಿದ್ದು ವಿದ್ಯಾವಂತ ನಮ್ಮ ಯುವಕರು ಕೃಷಿಯನ್ನೇ ಪ್ರಧಾನವಾಗಿ ಮಾಡಿಕೊಂಡು ಸೂಕ್ತ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ನೂತನ ಡಿಡಿಪಿಐ ಆಗಿ ಬಡ್ತಿ ಪಡೆದ ನಿಮಿತ್ಯ ಆರ್.ಎಸ್.ಬುರಡಿ ಹಾಗೂ ನಿವೃತ್ತಿಯಾದ ಸುರೇಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ ನಿರೂಪಿಸಿದರು, ಶ್ರೀಧರ ಸುಲ್ತಾನಪೂರ ಸ್ವಾಗತಿಸಿದರು, ಮಹಾಂತೇಶ ಬಾತಾಖಾನಿ ವಂದಿಸಿದರು.
ಕ್ಲಬ್ ಸದಸ್ಯರಾದ ವಿಶ್ವನಾಥ ಯಳಮಲಿ, ಚಂದ್ರಮೌಳಿ ಜಾಲಿ, ಡಾ.ಚಂದ್ರಶೇಖರ ಬಳ್ಳಾರಿ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ನ ಅಸಿಸ್ಟಂಟ್ ಗರ‍್ನರ್ ಶಿವಾಚಾರ್ಯ ಹೊಸಳ್ಳಿಮಠ, ಚನ್ನವೀರ ಹುಣಶೀಕಟ್ಟಿ, ಡಾ.ಆರ್.ಎಸ್.ಬಳ್ಳಾರಿ, ಎಚ್.ಎಸ್.ಪಾಟೀಲ, ಡಾ.ಉಮೇಶ ಪುರದ, ಅಶೋಕ ಅಕ್ಕಿ, ಅರವಿಂದಸಿAಗ್ ಬ್ಯಾಳಿ, ಡಾ.ಪ್ರದೀಪ ಉಗಲಾಟ, ಕಾರ್ತಿಕ ಮುತ್ತಿನಪೆಂಡಿಮಠ ಮುಂತಾದವರು ಉಪಸ್ಥಿತರಿದ್ದರು.