

ಗದಗ: ಜನಮುಖಿ-ಸಮಾಜಮುಖಿಯಾಗಿ ಸೇವೆ ಮಾಡುವ ಮೂಲಕ ಮಾನವೀಯ ಗುಣಗಳನ್ನು ಬೆಳೆಸಿ ಸ್ನೇಹವನ್ನು ಗಟ್ಟಿಗೊಳಿಸುವುದೇ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ನ ಹಿರಿದಾದ ಉದ್ದೇಶವಾಗಿದೆ ಎಂದು ರೋಟರಿ ಕ್ಲಬ್ನ ಜಿಲ್ಲಾ ಗವರ್ನರ್ ಶರದ್ ಪೈ ಹೇಳಿದರು.
ಗದಗ-ಬೆಟಗೇರಿ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ನೀಡಿದ ಅವರು ನಗರದ ಉಮಾದೇವಿ ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್ದಲ್ಲಿ ಕ್ಲಬ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಗದಗ-ಬೆಟಗೇರಿ ರೋಟರಿ ಕ್ಲಬ್ನ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಜನಮುಖಿ ಹಾಗೂ ಸಮಾಜಮುಖಿಯಾಗಿ ಈಗಾಗಲೇ ಕೈಗೊಂಡಿರುವ ಹಾಗೂ ಉದ್ದೇಶಿಸಿತ ಯೋಜನೆಗಳು ಶ್ಲಾö್ಯಘನೀಯವಾದವುಗಳು ಎಂದು ಬಣ್ಣಿಸಿದರಲ್ಲದೆ ಕ್ಲಬ್ನ ಯೋಜನೆಗಳಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷ ಡಾ.ರೇವಣಸಿದ್ಧೇಶ್ವರ ಉಪ್ಪಿನ ಕ್ಲಬ್ನ ಹಿರಿಯ ಸದಸ್ಯರುಗಳ ಸಲಹೆ ಸೂಚನೆಯನ್ವಯ ಯೋಜನೆಗಳನ್ನು ರೂಪಿಸಲಾಗಿದ್ದು ಅವರೆಲ್ಲರ ಸಹಕಾರದೊಂದಿಗೆ ಉಚಿತ ನೇತ್ರ ಶಸ್ತç ಚಿಕಿತ್ಸೆ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು ಇನ್ನೂ ಉತ್ತಮ ಕಾರ್ಯ ಮಾಡುವದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕ್ಲಬ್ಗೆ ನೂತನ ಸದಸ್ಯರನ್ನಾಗಿ ಎಸ್.ಬಿ.ಸುಧಾಕರ, ವಿಶ್ವನಾಥ ಪಾಟೀಲ, ಶಶಿಧರಗೌಡ ಕಳ್ಳಿ, ಉಮೇಶ ಚನ್ನುಪಾಟೀಲ, ಸಂದೇಶ ಇರಾಳ, ಕಾರ್ತಿಕ ಮುತ್ತಿನಪೆಂಡಿಮಠ ಬರಮಾಡಿಕೊಳ್ಳಲಾಯಿತು.
ವೇದಿಕೆ ಮೇಲೆ ಕ್ಲಬ್ನ ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ ಉಪಸ್ಥಿತರಿದ್ದರು. ಡಾ.ರೇವಣಸಿದ್ಧೇಶ್ವರ ಉಪ್ಪಿನ ಸ್ವಾಗತಿಸಿದರು, ಶ್ರೀಧರ ಸುಲ್ತಾನಪೂರ, ಬಿ.ಪಿ.ಕಲ್ಮಠ ಪರಿಚಯಿಸಿದರು, ಕಾರ್ಯದರ್ಶಿ ಸಂತೋಷ ಅಕ್ಕಿ ನಿರೂಪಿಸಿದರು ಬಿ.ಪಿ.ಕಾಮತ್ ವಂದಿಸಿದರು.
ಡಾ.ಶೇಖರ ಸಜ್ಜನರ, ಡಾ.ಜಿ.ಬಿ.ಪಾಟೀಲ, ಎಚ್.ಎಸ್.ಪಾಟೀಲ, ಡಾ.ರಾಜೇಂದ್ರ ಗಚ್ಚಿನಮಠ, ಕೆ.ಎಸ್.ನಾಲತ್ವಾಡಮಠ, ಅಶೋಕ ಅಕ್ಕಿ, ಅಕ್ಷಯ ಶೆಟ್ಟಿ, ಸುರೇಶ ಕುಂಬಾರ, ನರೇಶ ಜೈನ್, ಚಂದ್ರಮೌಳಿ ಜಾಲಿ, ಮಹಾಂತೇಶ ಬಾತಾಖಾನಿ, ವಿಶ್ವನಾಥ ಯಳಮಲಿ, ಅರವಿಂದಸಿAಗ್ ಬ್ಯಾಳಿ ಸೇರಿದಂತೆ ರೋಟರಿ ಹಾಗೂ ರೋಟ್ರಾö್ಯಕ್ಟ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೋಂಡಿದ್ದರು.