ರೋಟರಿ ಕ್ಲಬ್​ದಿಂದ ಸಮಾಜಮುಖಿ ಜನಮುಖಿ ಕಾರ್ಯ: ತೋಂಟದ ಶ್ರೀ

22GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಮನುಷ್ಯನ ಸರ್ವ ಇಂದ್ರೀಯಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದೆ. ಕಣ್ಣಿನ ಸಂರಣೆ, ಕಾಳಜಿ ವಹಿಸಬೇಕು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ನಗರದ ರೋಟರಿ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ 200ನೇ ನಿರಂತರ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರೋಟರಿ ಕ್ಲಬ್​ ಸಮಾಜಮುಖಿಯಾಗಿ, ಜನಮುಖಿಯಾಗಿ ಸೇವೆ ಮಾಡುವುದರಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. ಜನತೆಯ ಆರೋಗ್ಯ ಸುಧಾರಣೆ ಹಾಗೂ ಸಮಾಜದ ಸ್ವಾಸ್ಥ$್ಯ ಕಾಪಾಡುವಲ್ಲಿ ರೋಟರಿ ಪದಾಧಿಕಾರಿಗಳು ತಮ್ಮನ್ನು ಸೇವಾ ಕಾರ್ಯಕ್ಕೆ ಸರ್ಮಪಿಸಿ ಕೊಂಡಿರುವದು ಶ್ಲಾನೀಯ. ಈ ಮೊದಲು ಗೋದಾನ, ಭೂದಾನ, ಅನ್ನದಾನ, ರಕ್ತದಾನ, ನೇತ್ರದಾನ ಹಾಗೂ ಇತ್ತೀಚೆಗೆ ದೇಹದಾನ ಹೀಗೆ ದಾನಗಳ ವಿಸ್ತಾರವು ಹೆಚ್ಚುತ್ತಿದೆ. ದಾನಗುಣಕ್ಕೆ ಹೊಸ ಪರಿಕಲ್ಪನೆಯೂ ಬಂದಿದೆ. ಆ ಮೂಲಕ ಸಮಾಜಕ್ಕೆ ಒಳಿತಾಗುತ್ತ ಬಂದಿದೆ. ಆಧುನಿಕತೆಯ ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ವೈದ್ಯಕಿಯ ೇತ್ರದಲ್ಲೂ ಹೊಸ ಆವಿಷ್ಕಾರಗಳು, ಅತ್ಯಾಧುನಿಕ ಯಂತ್ರೋಪಕರಣಗಳು ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಗಣನೀಯ ಪಾತ್ರ ವಹಿಸಿವೆ ಎಂದರು.

ಡಾ. ಶೇಖರ ಸಜ್ಜನರ ಮಾತನಾಡಿ, ಜನಸೇವೆಗಾಗಿ ತನ್ನನ್ನು ಸರ್ಮಪಿಸಿಕೊಂಡಿರುವ ರೋಟರಿ ಕ್ಲಬ್​ ತನ್ನ ಹಲವಾರು ಸಮಾಜಮುಖಿ ಕಾರ್ಯಗಳಿಂದಾಗಿ ಜನಮನ್ನಣೆ ಪಡೆದುಕೊಂಡಿದೆ. ಈ ಎಲ್ಲ ಕಾರ್ಯಗಳಿಗೆ ಪ್ರಾಯೋಜಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಕಾರ್ಯಕ್ರಮದಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಗಳು ನಿರಂತರವಾಗಿ ಸಾಗಬೇಕು ಎಂದರು.

ಉಚಿತ ನೇತ್ರ ಶಸ್ತ್ರಶಿಬಿರಗಳು ಯಶಸ್ವಿ ಆಗುಲು ಕಾರಣರಾದ ದಾನಿಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು.

ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ, ಕುಂದ್ರಾಳ ಹಿರೇಮಠ, ಡಾ. ಆರ್​. ಬಿ. ಉಪ್ಪಿನ, ಡಾ.ಉಮೇಶ ಪುರದ, ವಿಶ್ವನಾಥ ಯಳಮಲಿ, ಶ್ರೀಧರ ಸುಲ್ತಾನಪೂರ ಬಾಲಕೃಷ್ಣ ಕಾಮತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net