

ವಿಜಯವಾಣಿ ಸುದ್ದಿಜಾಲ ಗದಗ
ರೋಟರಿ ಸಂಸ್ಥೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಶಿಬಿರದಲ್ಲಿ 11 ಜನರಿಗೆ ಯಶಸ್ವಿ ಕಣ್ಣಿನ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಅಂದಾಜು 27 ಜನ ರೋಗಿಗಳನ್ನು ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಕಿಶನ್ ಮೇರವಾಡೆ, ಸಂಸ್ಥೆ ನಡೆಸಲು ನಗರದ ಗಣ್ಯರು ದಾನ ನೀಡುತ್ತಿದ್ದಾರೆ. ಸಂಸ್ಥೆಯು ನಿರಂತರವಾಗಿ ಕೈಗೊಳ್ಳುತ್ತಿರು ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಪ್ರಾಯೋಜಿಸಲು ತಮಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಂಸ್ಥೆಯು ಕೈಗೊಳ್ಳವ ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬವು ಸಹಾಯ ಮಾಡುವುದಾಗಿ ಹೇಳಿದರು.
ಸಂತೋಷ ಅಕ್ಕಿ, ಶಿವಾಚಾರ್ಯ ಹೊಸಳ್ಳಿಮಠ, ಡಾ. ಆರ್. ಉಪ್ಪಿನ, ಬಾಲಕೃಷ್ಣ ಕಾಮತ, ಪ್ರದಿಪ ಉಗಲಾಟ, ವೀಣಾ ತಿರ್ಲಾಪೂರ, ಅಯ ಶೆಟ್ಟಿ, ಚನ್ನವಿರ ಹುಣಶಿಕಟ್ಟಿ, ಮಹೇಶ ಹಿಂಡಿ, ವಿಶ್ವನಾಥ ಯಳಮಲಿ, ಎಚ್. ಎಸ್. ಪಾಟೀಲ ಇತರರು ಇದ್ದರು.