ಈ ಮೊದಲು ನಾವು ಕೆಲಸ ಮಾಡುವ ಸಂದರ್ಭದಲ್ಲಿ ಕೂಸಿನ ಮನೆ ಇರಲಿಲ್ಲಾ ಕಳೆದ ಬಾರಿ ಈ ಬಾರಿ ಕೂಸಿನ ಮನೆ ಆಗಿದೆ, ಮೊದಲೆಲ್ಲಾ ನಮ್ಮ ಮಕ್ಕಳನ್ನು ಇನ್ನೊಬ್ಬರ ಬಳಿ ಹೇಗೆ ಬಿಟ್ಟು ಹೋಗಬೇಕು ಎಂಬ ಚಿಂತೆ ಕಾಡುತಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಲಿತಾ ರಾಠೋಡ ಅವರು ನಮಗೆ ತಿಳಿ ಹೇಳಿದರು, ನಾವು ಒಂದೆರಡು ದಿನ ಬಿಟ್ಟು ಮಕ್ಕಳು ಇರುತ್ತಾರೋ ಇಲ್ಲವೋ ಎಂಬುದರ ಕುರಿತು ಪರೀಕ್ಷೆ ಮಾಡಿದೆವು, ಆದರೆ ಮಕ್ಕಳು ಉಳಿದ ಮಕ್ಕಳ ಜೊತೆಗೆ ಸೇರಿ ಆಟ ವಾಡುತ್ತಾ, ಉಟ ಮಾಡುತ್ತಾ ಕಾಲ ಕಳೆಯುತ್ತಾರೆ. ಕೆಲಸ ಮುಗಿಸಿ ಬರುವ ಸಂದರ್ಭದಲ್ಲಿ ಮಕ್ಕಳನ್ನು ನಾವು ಮನೆಗೆ ಕರೆದುಕೊಂಡು ಹೊಗುತ್ತೇವೆ...