

ಗದಗ: ವಿದ್ಯಾರ್ಥಿಗಳು ಟಿ.ವ್ಹಿ, ಮೊಬೈಲ್ ಚಟಕ್ಕೆ ದಾಸರಾಗದೇ ಉತ್ತಮ ಹವ್ಯಾಸಗಳನ್ನು ರೂಢೀಸಿಕೊಂಡು ಕಷ್ಟಪಟ್ಟು ಇಷ್ಟಪಟ್ಟು ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪುಗೊಳ್ಳಲು ಸಾಧ್ಯ ಎಂದು ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಆರ್.ಬಿ.ದಾನಪ್ಪಗೌಡ್ರ ಹೇಳಿದರು.
ಅವರು ರೋಣ ತಾಲೂಕಿನ ಮಾರನಬಸರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ರೋಟರಿ ಗದಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯಿAದ ಎರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾಲಕ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಧರ್ಮದ ತಳಹದಿಯಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು, ಒಳ್ಳೆ ಹವ್ಯಾಸಗಳನ್ನು ರೂಢೀಸಬೇಕು, ಪಠ್ಯೇತರ ಚಟುವಟಿಕೆಗಳಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು, ಉತ್ತಮ ಶಿಕ್ಷಣದಿಂದ ವ್ಯಕ್ತಿ ಉನ್ನತ ಹುದ್ದೆ ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಕಾAತ ಮಾರನಬಸರಿ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದು, ಇಲ್ಲಿನ ಶಿಕ್ಷಕ ಬಳಗ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡುತ್ತಿದ್ದಾರೆ ಎಂದರಲ್ಲದೆ ರೋಟರಿ ಸಂಸ್ಥೆಯವರು ನಮ್ಮ ಗ್ರಾಮದವರೆಗೂ ಬಂದು ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿರುವದು ಅಭಿನಂದನೀಯ ಎಂದರು.
ವೇದಿಕೆಯ ಮೇಲೆ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯ ಅಧ್ಯಕ್ಷ ಪ್ರದೀಪ ಕುಲಕರ್ಣಿ, ಡಾ.ಮುರಳಿಕೃಷ್ಣ, ಗಂಗಾಧರಮೂರ್ತಿ ತಿಪಟೂರ, ಸುರೇಶ ನಿಡಗುಂದಿ, ಕ್ಲಬ್ ಕಾರ್ಯದರ್ಶಿ ಸಿ.ಜಿ.ಹಿರೇಗೌಡ್ರ ಎಂ.ಬಿ.ರಮಣಿ ಉಪಸ್ಥಿತರಿದ್ದರು.
ಗದುಗಿನ ಸೌಖ್ಯದಾ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿAದ ಉಚಿತ ಆರೋಗ್ಯ ತಪಾಸಣೆ ಜರುಗಿತು. ಅಕಲೇಶ ರಂಗಣ್ಣವರ ಮಹೇಶ ನೇತ್ರತಪಾಸಣೆ ಮಾಡಿದರು. ರೋಟರಿ ಗದಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯಿAದ ಅಗತ್ಯವಿದ್ದವರಿಗೆ ಉಚಿತ ಕನ್ನಡಕ ನೀಡಲಾಯಿತು. ಆರೋಗ್ಯ ತಪಾಸಣೆಯ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶಿಕ್ಷಕ ಶಿಕ್ಷಕಿಯರು ಪಾಲ್ಗೋಂಡಿದ್ದರು. ಕ್ಲಬ್ ಕಾರ್ಯದರ್ಶಿ ಸಿ.ಜಿ.ಹಿರೇಗೌಡ್ರ ಕೊನೆಗೆ ವಂದಿಸಿದರು.
ಕಾರ್ಯಕ್ರಮದ ಬಳಿಕ ಗ್ರಾಮದ ರೈತರಿಗೆ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ರೈತರಬಾಂಧವರು, ಗ್ರಾಮದ ಗಣ್ಯರು ಪಾಲ್ಗೋಂಡಿದ್ದರು.
= = =
ಫೋಟೋ ಇದೆ : ದಾನಪ್ಪಗೌಡ್ರ
= = =
ಸುದ್ದಿ ಪ್ರಕಟಣೆ ಕೃಪೆಗೆ/ ಸಿ.ಜಿ.ಹಿರೇಗೌಡ್ರ, ಕಾರ್ಯದರ್ಶಿ
ರೋಟರಿ ಗದಗ ಸೆಂಟ್ರಲ್, ಗದಗ.
= = =