ಪುಟ್ಟರಾಜರು ಭಕ್ತರ ಹೃದಯದಲ್ಲಿ ವಿರಾಜಮಾನರು: ಕೊಪ್ಪಳದ ಗವೀಸಿದ್ದೇಶ್ವರರು

15GDG07
Published on

ವಿಜಯವಾಣಿ ಸುದ್ದಿಜಾಲ ಗದಗ
ಪುಟ್ಟರಾಜರು ಭಕ್ತರ ಹೃದಯದಲ್ಲಿ ವಿರಾಜಮಾನರು. ಜಗತ್ತಿನ ಎಂಟನೇ ಅಧ್ಭುತ ಇದ್ದಂಥೆ. ಅಂಧರಿಗಾಗಿ ಪ್ರಪಂಚದ ಕಣ್ಣು ತೆರಿಸಿದವರು. ಅವರ ಸಾಹಿತ್ಯದ ಸಂಗೀತದ ಸಾಧನೆ ವಿಶಿಷ್ಠವಾಗಿದೆ. ಅವರು ಬರೆದ ಬಸವ ಪುರಾಣವನ್ನು ಸ್ವಂತ ರಾಷ್ಟ್ರಪತಿಗಳೇ ತಲೆಯ ಮೇಲೆ ಹೊತ್ತು ಮೆರೆದಿದ್ದರಿಂದ ಪುರಾಣದ ಶ್ರೇಷ್ಠತೆ ಸಾಯಾಗಿದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಶನಿವಾಋ ಏರ್ಪಡಿಸಿದ್ದ ಪುಟ್ಟರಾಜ ಕವಿ ಗವಾಯಿಗಳವರ 14ನೇ ವರ್ಷದ ಪುಣ್ಯಸ್ಮರಣೆ ಹಾಗೂ ತೃತೀಯ ವರ್ಷದ ರಥೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈ ನಾಡಿನಲ್ಲಿ ಅನೇಕ ರಾಜರು ಮಣ್ಣಿಗಾಗಿ ಹೋರಾಡಿ, ಮಣ್ಣಿನ ಸಾಮ್ರಾಟರಾದರೆ, ಪುಟ್ಟರಾಜರು ಭಕ್ತರ ಮನಸ್ಸಿನ ಸಾಮ್ರಾಟರಾಗಿ ಅವರ ಹೃದಯ ಸಿಂಹಾಸನದಲ್ಲಿ ಅಲಂಕೃತರಾಗಿದ್ದಾರೆ ಎಂದರು.
ಬಳಗಾನೂರ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯನ ಜೀವನ ಸುಂದರ ಆಗಬೇಕಾದರೆ ಮೌಲ್ಯದ ದಿವ್ಯ ಚೇತನಗಳ ಸ್ಮರಣೋತ್ಸವ ಜರುಗಿದಾಗ ಮಾತ್ರ ಎಂದರು. ಗುರು ಪುಟ್ಟರಾಜರು ಬದುಕಿನ ಸಾಧನೆಯಿಂದ ದೊಡ್ಡವರಾದವರು ಎಂದರು.
ಗಚ್ಚಿನ ಹಿರೇಮಠದ ಚನ್ನ ಮಲ್ಲಶಿವಾಚಾರ್ಯರು ಮಾತನಾಡಿ, ಬೆಳವಣಿಕಿ ಗ್ರಾಮದ ಇತಿಹಾಸ ಮೆರದ ಗ್ರಾಮವಾಗಿದೆ. ಪುಟ್ಟರಾಜರು ನುಡಿಗಳನ್ನು ಚಾಚುತಪ್ಪದೇ ಪಾಲಿಸಿಕೊಂಡು ಬಂದವರಾಗಿದ್ದಾರೆ. ಈ ಗ್ರಾಮ ಅವರ ತವರುಮನೆಯಾಗಿದೆ ಎಂದು ತಿಳಿಸಿದರು.
ಅಡ್ನೂರ ಪಂಚಾರ ಶಿವಾಚಾರ್ಯ ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೋಮಶೇಖರ ಚರೇದ, ಪುಟ್ಟರಾಜ ತಾಳಿ, ಮಂಜುನಾಥ ಶಾಸ್ತ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net