ಪಟ್ಟಣದ ತಾಲೂಕ ಪಂಚಾಯತಿ ಯಲ್ಲಿ ಇರುವ ಗ್ಯಾರಂಟಿ ಕಾರ್ಯಾಲಯದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿ ಗ್ರಾಮ ದಲ್ಲಿಯೂ ಕೂಡಾ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ವೆ ಮಾಡಲು ನೇಮಿಸಿ, ನೇಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಹೋಗಿ ಸರ್ವೆ ಮಾಡಿ ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿದರ ಬಗ್ಗೆ ಪರಿಶೀಲನೆ ಮಾಡಬೇಕು, ಗ್ಯಾರಂಟಿ ಯೋಜನೆಗಳು ಇನ್ನು ತಲುಪದಿದಲ್ಲಿ , ತಲುಪದೇ ಇರಲು ಕಾರಣವನ್ನು ಕಂಡು ಹಿಡಿದು ಪರಿಶೀಲಿಸಿ ಅದಕ್ಕೆ ಪರಿಹಾರವನ್ನು ಕಲ್ಪಿಸಿ ಅರ್ಹರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಅವರು ಹೇಳಿದರು.