ಕಲೆ, ಸಾಹಿತ್ಯ, ಸಂಸ್ಕöÈತಿ, ಆಧ್ಯಾತ್ಮ, ಸಂಗೀತ, ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆ, ಸಹಕಾರ, ಔಧ್ಯಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಗದಗ ಪರಿಸರದಲ್ಲಿ ಸಂಗೀತ ನಿನಾದಿಸುತ್ತಿದೆ. ನಮ್ಮ ಜಿಲ್ಲೆಯ ಗಾಳಿಯಲ್ಲಿ ವಿದ್ಯುತ್ ಇದೆ. ಗಣಿಗಳಲ್ಲಿ ಬಂಗಾರವಿದೆ. ಇಲ್ಲಿಯ ದೇವಾಲಯಗಳು, ಬಸದಿಗಳು, ದರ್ಗಾಗಳು ಹಾಗೂ ಅನೇಕ ಪ್ರಾಚೀನ ಸ್ಮಾರಕಗಳಿವೆ. ಖ್ಯಾತಿವೆತ್ತ ಕಲಾವಿದರ ನೆಲೆಬೀಡಾಗಿದೆ. ಸಾಂಸ್ಕöÈತಿಕ ವೈಭವ ಸಾರುವ ಈ ಪರಿಸರ ಐತಿಹಾಸಿಕ, ಪಾರಂಪಾರಿಕ, ನೆಲಗಳನ್ನೊಳಗೊಂಡಿದೆ. ಇಲ್ಲಿ ಧರ್ಮ ಸಮನ್ವಯತೆ ಇದೆ, ಸಾಮರಸ್ಯವಿದೆ. ಇಲ್ಲಿ ಬಂಧುತ್ವ ಬಲಗೊಂಡಿದೆ. ಪ್ರೀತಿ- ಸ್ನೇಹ ಬೆಸೆಗೊಂಡಿದೆ. ಪುರಾತತ್ವದ ನೆಲೆಗಳಿವೆ. ಆಧುನಿಕತೆ ತೆರೆದುಕೊಂಡಿದೆ. ಕೆ.ಜಿ.ಯಿಂದ ಪಿ.ಜಿ.ಯ ಎಲ್ಲ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದು ಸಹಕಾರದ ಗಂಗೋತ್ರಿ, ಒಟ್ಟಿನಲ್ಲಿ ಗದಗ, ರಾಜ್ಯದ ಸಾಂಸ್ಕöÈತಿಕ, ಸಾಹಿತ್ಯಕ ರಾಜಧಾನಿಯಾಗಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.