ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ  ಆಚರಣೆ

IMG-20251007-WA0017
Published on
ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ  ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ(ಪ್ರ) ಹಾಗೂ ಕುಲಸಚಿವರಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅವರು ಮಾತನಾಡಿ, “ಭಾರತದ ಸಂಸ್ಕೃತಿ ಮತ್ತು ತತ್ವಜ್ಞಾನವು ಮಾನವ ಜೀವನದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ವಾಲ್ಮೀಕಿಯವರ ರಾಮಾಯಣವು ಕೇವಲ ಸಾಹಿತ್ಯವಲ್ಲ, ಅದು ಜೀವನದ ಮಾರ್ಗದರ್ಶಕ ಗ್ರಂಥ. ವಾಲ್ಮೀಕಿಯವರ ತತ್ವ, ಆದರ್ಶಗಳು ಮತ್ತು ಧರ್ಮನಿಷ್ಠ ಜೀವನದ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನವು ಮಾನವೀಯತೆ, ಕರುಣೆ ಮತ್ತು ಸತ್ಯನಿಷ್ಠೆಯ ಶಾಶ್ವತ ಸಂದೇಶವನ್ನು ನೀಡುತ್ತದೆ" ಎಂದು ಹೇಳಿದರು.
 ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ ಎಸ್ ಮಾಚೇನಹಳ್ಳಿ ಅವರು ಮಾತನಾಡಿ, “ಮಹರ್ಷಿ ವಾಲ್ಮೀಕಿ ಮಾನವ ಕುಲಕ್ಕೆ ದಾರಿ ತೋರಿದ ಮಹಾನ್ ಚೇತನ. ಅವರ ರಾಮಾಯಣವು ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಜೀವಂತ ಪ್ರತೀಕವಾಗಿದೆ. ವಾಲ್ಮೀಕಿಯವರ ಜೀವನ ಪರಿವರ್ತನೆಯ ಮತ್ತು ಆತ್ಮಜ್ಯೋತಿಯ ಸಂಕೇತ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳಾದ ಶ್ರೀ ಶಶಿಭೂಷಣ ದೇವೂರು, ಶ್ರೀ ಮೃತ್ಯುಂಜಯ ಮೆಣಸಿನಕಾಯಿ, ವಿಶೇಷಾಧಿಕಾರಿ ಶ್ರೀ ಉಮೇಶ್ ಬಾರಕೇರ, ಸಿಟಿಪಿಎಸ್ ನಿರ್ದೇಶಕರಾದ ಡಾ. ಅಬ್ದುಲ್ ಅಜೀಜ್ ಮುಲ್ಲಾ, ಡಾ. ಅಭಯ್ ಕುಮಾರ ಗಸ್ತಿ, ಕಾರ್ಯಕ್ರಮ ಸಂಯೋಜಕರಾದ ಡಾ. ಶ್ರೀಧರ ಹಾದಿಮನಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net