

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಶುಕ್ರವಾರ ಆರ್ಡಿಪಿಆರ್ ವಿವಿ ಮತ್ತು ದಣ ಕೊರಿಯಾದ ಎಚ್ಡಬ್ಲುಪಿಎಲ್ ಸಂಸ್ಥೆ ಸಹಯೋಗದಲ್ಲಿ "ಶಾಂತಿ, ಸಂಸತಿಯ ಜಿಲ್ಲೆ ಘೋಷಣೆ ಹಾಗೂ ಶಾಂತಿ ಅನುಷ್ಠಾನ ವೇದಿಕೆ' ಕಾರ್ಯಕ್ರಮ ಜರುಗಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯನ ಅಹಂಭಾವ ಮತ್ತು ದುರಾಸೆಯ ಆಲೋಚನೆಗಳೇ ಜಾಗತಿಕ ಅಶಾಂತಿ ಮೂಡಲು ಕಾರಣವಾಗಿದೆ. ಈ ಸ್ವಭಾವ ದೂರವಾದರೆ, ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಸರ್ವಾ-ಧಿಕಾರ ಮನೋಭಾವ ನೆಲೆಗೊಳ್ಳುವುದರಿಂದ ದೇಶದೇಶಗಳ ನಡುವೆ ಸಾಮರಸ್ಯ ಕಳೆದುಹೋಗಿ ಜೀವ ಹಾನಿಯಂತಹ ಘೋರ ಕೃತ್ಯಗಳು ಜರುಗುತ್ತಿವೆ. ಇಂದು ಜಗತ್ತು ಶಾಂತಿಯನ್ನು ಬಯಸುತ್ತದೆ. ಅದು ನೆಲೆಗೊಳ್ಳಬೇಕಾದ ಅಗತ್ಯವಿದೆ. ವಿಶ್ವಕ್ಕೆ ಶಾಂತಿಯ ಸಾರವನ್ನು ಸಾರಿದ ದೇಶ ಭಾರತ ಎಂದು ಹೇಳಿದರು.
ವಿವಿ ಕುಲಪತಿ ಪ್ರೊ. ಡಾ. ಸುರೇಶ ನಾಡಗೌಡರ ಮಾತನಾಡಿ, ವಿಶ್ವ ಒಂದು ಕುಟುಂಬವಿದ್ದಂತೆ. ಜಾಗತಿಕ ಮಟ್ಟದಲ್ಲಿ ಯಾವುದೇ ಭಾಗದಲ್ಲಿ ನಡೆಯುವ ಅಹಿತಕರ ಟನೆಗಳು, ಯುದ್ಧಗಳು ವಿಶ್ವದ ಎಲ್ಲ ಭಾಗಗಳಲ್ಲಿ ಅದರ ಪರಿಣಾಮ ಬೀರುತ್ತದೆ. ಶಾಂತಿ ಕದಡುವ ಅಹಿತಕರ ಟನೆಗಳನ್ನು ನಿಯಂತ್ರಿಸುವ ಅಗತ್ಯತೆ ನಮ್ಮ ಮುಂದಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸಹಬಾಳ್ವೆ ನೆಲಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್ಸಿಇಎಸ್ ಕಾನೂನು ಕಾಲೇಜು ಮತ್ತು ಎಎಸ್ಎಸ್ ವಾಣಿಜ್ಯ ಕಾಲೇಜುಗಳ ಹಾಗೂ ಎಚ್ಡಬ್ಲುಪಿಎಲ್ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ವೂನಾಮ್ ಕಿಂ, ಪ್ರಶಾಂತ್ ಮೇರವಾಡೆ, ಪ್ರಕಾಶ ಮಚ್ಚೇನಹಳ್ಳಿ, ಅಭಿಷೇಕ ಇ., ಡಾ. ಚೈತ್ರಾ, ಸುರೇಶ ಲಮಾಣಿ ಇತರರು ಇದ್ದರು.