ಕಾನೂನು ಆಯೋಗದ ಅಧ್ಯಕ್ಷ ಡಾ. ಅಶೋಕ ಇಂಚಿಗೇರಿ ಮಾತನಾಡಿ, ನಿಜವಾದ ಮನುಷ್ಯರಾಗುವುದೇ ಮಾನವ ಹಕ್ಕಿನ ರಕ್ಷಣೆ ಆಗಿದೆ. ನೈತಿಕತೆಯನ್ನು ಬೆಂಬಲಿಸುವುದು, ಸ್ವತಂತ್ರ÷್ಯವಾಗಿ ಬದುಕುವುದು ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮಾನವ ಹಕ್ಕುಗಳು ಎಂದು ಹೇಳಬಹುದು. ಎಲ್ಲ ಧರ್ಮಗ್ರಂಥಗಳಲ್ಲಿ ಮಾವನ ಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ನಿಧನದ ನಂತರವೂ ಅಂತ್ಯಸAಸ್ಕಾರವು ಕೂಡ ಇಚ್ಛೆಯಂತೆ ನಡೆಯಬೇಕು. ಅದು ಕೂಡ ಮಾನವ ಹಕ್ಕಾಗಿದೆ ಎಂದು ಹೇಳಿದರು.
ಕಾನೂನು ಆಯೋಗದ ಸದಸ್ಯ ಎ.ಜೆ. ನಿಜಗಣ್ಣವರ, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜ, ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಸಿ. ಎಸ್. ಪಾಟೀಲ, ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ ಧರ್ಮ ಗೌಡರ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಶರಥ, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿವಿ ಕುಲಸಚಿವ ಡಾ. ಎಸ್.ವಿ. ನಾಡಗೌಡರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ ಉಪಸ್ಥಿತರಿದ್ದರು.