ಆರ್​ಡಿಪಿಆರ್​ ವಿವಿಯಲ್ಲಿ ಗಾಂಧೀಜಿ ಶಾಸ್ತ್ರೀಜಿ ಸ್ಮರಣೆ, ಕವಿಗೋಷ್ಠಿ

02GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಪ್ರಕೃತಿಯಲ್ಲಿನ ಮಣ್ಣು, ನೀರು, ಗಾಳಿ, ಆಕಾಶ ಮತ್ತು ಪ್ರಕಾಶ ಇವುಗಳನ್ನು ಪಂಚ ಮಹಾಭೂತಗಳೆಂದು ಕರೆಯುತ್ತೇವೆ. ನಮ್ಮ ದೇಹವೂ ಇದರಿಂದಲೇ ನಿರ್ಮಾಣವಾಗಿದೆ. ಪಕೃತಿಯಿಂದ ಚಿಕಿತ್ಸೆ ಪಡೆಯುವುದೇ ಪ್ರಕೃತಿ ಚಿಕಿತ್ಸೆ ಆಗಿದೆ ಎಂದು ವೈದ್ಯಾಧಿಕಾರಿ ಡಾ. ಸತೀಶ ಹೊಂಬಾಳಿ ಹೇಳಿದರು.
ನಗರದ ಆರ್​ಡಿಪಿಆರ್​ ವಿವಿಯಲ್ಲಿ ಜಿಲ್ಲಾ ಕಸಾಪ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧೀ ಸ್ಮರಣೆ ಚಿಂತನಾ ಗೋಷ್ಠಿ, ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಗಾಂಧೀಜಿಯವರು ಅಪ್ರತಿಮ ವೈದ್ಯರಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ ನೋವುರಹಿತ ಸ್ಥಿತಿಯಲ್ಲ. ಕಾಯಿಲೆರಹಿತ ಸ್ಥಿತಿಯಲ್ಲ. ದೈಹಿಕ ಮಾನಸಿಕ ಶಾರೀರಿಕ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿ ಅತ್ಯಂತ ಉನ್ನತವಾಗಿರುವ ಸ್ಥಿತಿಯಾಗಿದೆ ಎಂದು ಗಾಂಧೀಜಿ ಹೇಳಿದ್ದರು. ಅವರು ಪ್ರಕೃತಿ ಚಿಕಿತ್ಸೆಯಲ್ಲಿ ನಂಬಿದ್ದರು ಮತ್ತು ಅನುಸರಿಸಿದ್ದರು ಎಂದರು.
ಚಿಂತನ ಗೋಷ್ಠಿಯ ಅಧ್ಯತೆ ವಹಿಸಿ ಮಾತನಾಡಿದ ಕುಲಸಚಿವ ಸುರೇಶ ನಾಡಗೌಡರ, ಗಾಂಧೀಜಿ ಅವರ ಕನಸಿನ ಗ್ರಾಮ ಸ್ವರಾಜ್​ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯ ಪ್ರೇರಣೆ ಆಗಿದೆ. ಇಲ್ಲಿ ಕಲಿಯಲು ಬರುವ ವಿದ್ಯಾಥಿರ್ಗಳಿಗೆ ಗಾಂಧೀಜಿಯವರ ಮೂಲ ಆಶಯಗಳನ್ನು ತಿಳಿಸುವುದಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಾಂಧೀಜಿಯವರ ಕುರಿತು ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಆಯೋಜನೆ ಮಾಡಿರುವುದು ಸ್ತುತ್ಯಾರ್ಹ ಎಂದರು.
ಪ್ರಕಾಶ ಭಟ್​, ಪ್ರಶಾಂತ ಜೆ.ಸಿ, ವಿವೇಕಾನಂದಗೌಡ ಪಾಟೀಲ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಪ್ರಕಾಶ ಮಾಚೇನಹಳ್ಳಿ, ಪ್ರಶಾಂತ ಮೇರವಾಡೆ, ಪ್ರಕಾಶ ಮಾಚೇನಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net