ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ, ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಆಗ್ರಹಿಸಿ ಪ್ರತಿಭಟನೆ

20GDG02
Published on
ಗದಗ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ನರಸಾಪುರ ಕೈಗಾರಿಕಾ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಉತ್ತಮ ಕರ್ನಾಟಕ ಮಹಾಸಭಾ ವತಿಯಿಂದ ಜಿಲ್ಲಾಡಳಿತ ಮುಂಭಾಗದಲ್ಲಿ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ ಜಿಲ್ಲೆಯ ಅರಣ್ಯ ಅವಲಂಬಿತ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ದಾಖಲೆಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡದೇ ತಿರಸ್ಕರಿಸಲಾಗಿದೆ. ತಿರಸ್ಕಾರ ಪ್ರಕ್ರಿಯೆ ಮರು ಪರಿಶೀಲನೆಗೆ ಸರ್ಕಾರ ವಾಗ್ದಾನ ನೀಡಿತ್ತು. ಈ ವರೆಗೆ ಮರು ಪರಿಶೀಲನೆ ಆಗಿಲ್ಲ. ಸರ್ಕಾರದಿಂದ ಹೊಸ ಅರ್ಜಿ ಸ್ವೀಕಾರಕ್ಕೆ ಅನುಮತಿ ದೊರೆತರು ಅರಣ್ಯ ಅವಲಂಬಿತ ಬಗರ್ ಹುಕುಂ ರೈತರಿಂದ ಅಧಿಕೃತವಾಗಿ ಯಾವುದೆ ಅರ್ಜಿಯನ್ನು ಸ್ವೀಕರಿಸದೆ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಈ ಕೂಡಲೆ ಸ್ವಿಕರೀಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಗದಗ ತಾಲೂಕಾ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ವಿಶ್ವವಿದ್ಯಾಲಯ ನಿರ್ಮಿಸಲು ಒಕ್ಕಲೇಬ್ಬಿಸಿದ ನೊಂದ ರೈತರಿಗೆ ಕೂಡಲೇ ಪರಿಹಾರವನ್ನು ನೀಡಬೇಕು.  ಅಥವಾ ಪರ್ಯಾಯ ಜಮೀನನ್ನು ನೀಡಬೇಕು. ಲಕ್ಷೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದ ಹುಲ್ಲುಗಾವಲು ಸಾಗುವಳಿ ರೈತರಿಗೆ ಹಕ್ಕು ಪತ್ರ ನೀಡಬೇಕು. ಬೆಳದಡಿ, ನಾಗಾವಿ ತಾಂಡಾ, ಕಳಸಾಪುರ, ಅಡವಿಸೋಮಾಪುರ, ಹುಯಿಲಗೊಳ, ನಾಗಾವಿ ಇನ್ನೂ ಕೆಲವು ಗ್ರಾಮಗಳಲ್ಲಿ ಇನಾಮ್ ಜಮೀನಿನಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತ ಬಂದಿರುವ ಜಮೀನುಗಳು ರೈತರ ಕಬ್ಜಾದಲ್ಲಿ ಇವೆ. ಆದರೆ ನಕಲಿ ದಾಖಲೆ ಸೃಷ್ಟಿಸಿ ನೈಜ ಬಡ ರೈತರಿಗೆ ಅನ್ಯಾಯ ಎಸಗಲಾಗಿದೆ. ಕೂಡಲೇ ಶಾಮಿಲಾದ ಅಧಿಕಾರಿಗಳ ಮೇಲೆ ಕ್ರಿಮೀನಲ್ ಪ್ರಕರಣ ದಾಖಲಿಸಿ, ನೊಂದ ರೈತರಿಗೆ ನ್ಯಾಯದೊರಕಿಸಿ ಕೊಡಬೇಕು ಎಂದು ರವಿಕಾಂತ ಅಂಗಡಿ ಆಗ್ರಹಿಸಿದರು.
ಸೋಲಾರ್, ಪವನ ವಿದ್ಯುತ್ ಕಂಪನಿಗಳಿಂದ ರೈತರಿಗೆ ಸರಿಯಾದ ಪರಿಹಾರ, ಸ್ಥಳಿಯರಿಗೆ ಹಾಗೂ ಜಮೀನು ಕಳೆದುಕೊಂಡ ರೈತರಿಗೆ ಉದ್ಯೋಗ, ಲಿಜ್ ಮೊತ್ತದಲ್ಲಿ ಭಾರಿ ಹೊಸವಾಗಿದ್ದು ಕೂಡಲೆ ಕಂಪನಿಗಳ ಮೇಲೆ ಕ್ರಿಮೀನಲ್‌ ಪ್ರಕರಣ ದಾಖಲಿಸಿ, ನೊಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರವಿಕಾಂತ ಅಂಗಡಿ ಆಗ್ರಹಿಸಿದರು.
ಎನ್. ಟಿ. ಪೂಜಾರ, ಪಾಂಡು ಚವಾಣ, ರಮೇಶ ಮಜ್ಜೂರು, ಶ್ರೀನಿವಾಸ ಶಿರಹಟ್ಟಿ, ಬಸವಣ್ಣೆಪ್ಪ ಚಿಂಚಲಿ, ಚಂಬಣ್ಣ ಚೆನ್ನಪಟ್ಟಣ, ಹನುಮಂತ ಚೆನ್ನಪಟ್ಟಣ
ಫೋಟೋ
ಬಗರ್ ಹುಕುಂ ಹಕ್ಕು ಪತ್ರ, ಕೈಗಾರಿಕೆ ವಲಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸರಳಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ರವಿಕಾಂತ ಅಂಗಡಿ, ಎನ್. ಟಿ. ಪೂಜಾರ, ಪಾಂಡು ಚವಾಣ, ರಮೇಶ ಮಜ್ಜೂರು, ಶ್ರೀನಿವಾಸ ಶಿರಹಟ್ಟಿ, ಖಾದೀರ್ ಸಾಬ್,  ಬಸವಣ್ಣೆಪ್ಪ ಚಿಂಚಲಿ ಇತರರು ಇದ್ದರು.
ಹಕ್ಕೊತ್ತಾಯಗಳು: 
* ಗದಗ ತಾಲೂಕು ನರಸಾಪುರದಲ್ಲಿ KIADB 2ನೇ ಹಂತದ 216 ಎಕರೆ ಭೂಸ್ವಾಧಿನ ಕೈಬಿಟ್ಟು ರೈತರಿಗೆ ಜಮೀನನ್ನು ಮರಳಿಸಬೇಕು.
* ಕಂದಾಯ ಅರಣ್ಯ ಹುಲ್ಲುಗಾವಲು ಹಾಗೂ ಮಾಲ್ಕಿ ಜಮೀನಿನಲ್ಲಿ ವಾಸವಿರುವ ತಾಂಡಾ ಹಾಡಿ-ಹಟ್ಟಿ ಜನರಿಗೆ ಮನೆಗಳ ಹಾಗೂ ನಿವೇಶನಗಳ ಹಕ್ಕುಪತ್ರ ನೀಡಬೇಕು. ಕೆಲವು ಕಡೆ ಕಟ್ಟಿದ ಮನೆಗಳನ್ನು ಕೆಡವಲಾಗುತ್ತಿದೆ ಇಂತಹ ಹೇಯ ಕೃತ್ಯ ನಿಲ್ಲಬೇಕು.
* ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಭೂ ಸ್ವಾಧಿನಕ್ಕಾಗಿ ಖಾಸಗಿ ಮಾಲಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅವರೊಂದಿಗೆ ಶಾಮೀಲಾಗಿ, 11 ಕೋಟಿ ರೂಪಾಯಿ ಖಾಸಗಿ ಮಾಲಕರಿಗೆ ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮೀನಲ್ ಪ್ರಕರಣ ದಾಖಲಿಸಬೇಕು.
* ಕೇಲೂರಿನ ಪರಿಶಿಷ್ಠ ಜಾತಿಗೆ ಸೇರಿದ ಮೃತ ಹುತಾತ್ಮ ಮಹಿಳೆ ನಿರ್ದುಲಾ ರಾಮನಗೌಡ ಪಾಟೀಲರ ಸ್ಮಾರಕ ನಿರ್ಮಾಣವನ್ನು ಮುಂಡರಗಿಯಲ್ಲಿ ಮಾಡಬೇಕು.
* ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿ ಇದ್ದು ಇಲ್ಲದಂತಾಗಿದೆ. ಸಮಿತಿ ಸಕ್ರೀಯವಾಗಿ ಕಾರ್ಯನಿರ್ವಹಿಸಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು.
* ಕಪ್ಪತ್ತಗುಡ್ಡದ 10 ಕೀ.ಮಿ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನೀಷೆಧಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net