ರವಿ ಗುಂಜೀಕರ ನಿವೃತ್ತಿ ನಿಮಿತ್ಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

05GDG04
Published on

ಅಸಹಾಯಕರಿಗೆ ಸೇವೆ ಸಲ್ಲಿಸುವುದು ರವಿ ಗುಂಜೀಕರ ಜಾಯಮಾನ : ಡಾ.ಎಸ್.ಆರ್ ಹಿರೇಮಠ

ಗದಗ : ಸರ್ಕಾರಿ ಸೇವೆಯಲ್ಲಿ ಇರುವಷ್ಟು ದಿನ ನೊಂದವರ-ಬಡವರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ರವಿ ಗುಂಜೀಕರ ಅವರು ನಿವೃತ್ತಿ ನಂತರವೂ ತಮ್ಮ ಸೇವಾಕಾರ್ಯ ಮುಂದುವರೆಸಿದ್ದು, ಅಸಹಾಯಕರಿಗೆ ಸೇವೆ ಸಲ್ಲಿಸುವುದು ರವಿ ಗುಂಜೀಕರ ಅವರ ಜಾಯಮಾನವಾಗಿದೆ ಎಂದು ರವಿ ಗುಂಜೀಕರ ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಡಾ.ಎಸ್ ಆರ್ ಹಿರೇಮಠ ನುಡಿದರು.

ಅವರು ದಿ.04 ರಂದು ನಗರದ ಕೆ.ಎಚ್ ಪಾಟೀಲ ಜಿಲ್ಲಾಸ್ಪತ್ರೆ (ಜಿಮ್ಸ್) ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ರವಿ ಎಲ್ ಗುಂಜೀಕರ ಅವರ ನಿವೃತ್ತಿ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲುಗಳುಳ್ಳ ಪೋಷಕಾಂಶಯುಕ್ತ ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಮಾತನಾಡಿ,

ರಕ್ತದಾನ, ಮಹಿಳಾ ದಿನಾಚರಣೆ, ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಇಂದು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಮ್ಮಿಕೊಂಡಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವ ಪ್ರವೃತ್ತಿ ಕೇವಲ ವೃತ್ತಿ-ಅಧಿಕಾರಕ್ಕೆ ಸೀಮಿತವಲ್ಲ ಎನ್ನುವುದನ್ನು ರವಿ ಗುಂಜೀಕರ ನಿರೂಪಿಸಿದ್ದಾರೆ ಎಂದರು.

ರವಿ ಗುಂಜೀಕರ ಹಾಗೂ ಅವರ ಅಭಿಮಾನಿ ಬಳಗದ ಸದಸ್ಯರು ನೂರಾರು ರೋಗಿಗಳಿಗೆ ಹಣ್ಣು-ಹಂಪಲಿನ ಕಿಟ್ ವಿತರಿಸಿದರು, ಈ ಸಂದರ್ಭದಲ್ಲಿ ಗುಂಜೀಕರ ಅವರು ರೋಗಿಗಳ ಆಶೋತ್ತರ ಆಲಿಸಿ ಸಾಂತ್ವನ ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳಾರಿ, ರವಿ ಗುಂಜೀಕರ ಅಭಿಮಾನಿ ಬಳಗದ ಅಧ್ಯಕ್ಷರಾದ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಕೆ.ಎಫ್ ಹಳ್ಯಾಳ, ಆರ್.ಎಂ ನಿಂಬನಾಯ್ಕರ, ಮಂಜು ಮಾನೆ, ಶಿವಾಜಿ ಪಾವನ, ರೇಡಿಯಾಲಜಿಸ್ಟ್ ಲಕ್ಷö್ಮಣ ಮುದುಡಿ, ನಾಗೇಂದ್ರ ಯಳಮಲಿ ಸೇರಿದಂತೆ ಶುಶ್ರೂಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net