

ವಿಜಯವಾಣಿ ಸುದ್ದಿಜಾಲ ಗದಗ
ನಿವೃತ್ತಿ ಕಾರ್ಯಕ್ರಮಗಳು ಕುಟುಂಬ ವರ್ಗಕ್ಕೆ, ಆಪ್ತರಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ರವಿ ಗುಂಜೀಕರ ಅವರ ಅಭಿಮಾನಿ ಬಳಗ ಅವರ ನಿವೃತ್ತಿ ನಿಮಿತ್ಯ ಹಮ್ಮಿಕೊಂಡ ಜನೋಪಯೋಗಿ ಕಾರ್ಯಕ್ರಮಗಳನ್ನು ನೋಡಿದರೆ ಇದು ನಿಜವಾಗಿಯೂ ಸಾರ್ಥಕ ಹಾಗೂ ಮಾದರಿ ನಿವೃತ್ತಿ ಸಮಾರಂಭವಾಗಿದೆ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
ನಗರದ ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂದ ನಿಕಟಪೂರ್ವ ಅಧ್ಯ ರವಿ ಗುಂಜೀಕರ ಅವರ ನಿವೃತ್ತಿ ನಿಮಿತ್ಯ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಬಸವಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಯನ್ನು ಜನಸೇವೆ ಎಂದು ಭಾವಿಸಿ ಅನೇಕ ಹಿಂದುಳಿದ ಜನರು, ಸಾರ್ವಜನಿಕರು ಹಾಗೂ ವಿದ್ಯಾಥಿರ್ಗಳಿಗೆ ನೆರವಾದ ರವಿ ಗುಂಜೀಕರ ತಾವು ಸಮಾಜದ ಋಣ ಇಟ್ಟುಕೊಳ್ಳದೇ ಸಮಾಜದ ಮೇಲೆ ಋಣ ಹೊರಿಸಿರುವ ಅಪರೂಪದ ವ್ಯಕ್ತಿಗಳು. ಬಸವ ಜಯಂತಿ ಹಾಗೂ ಅಯ ತೃತೀಯದ ಸಿನದಂದು 60 ಸಸಿಗಳನ್ನು ನೆಟ್ಟಿರುವುದು ಶ್ಲಾನೀಯವಾಗಿದೆ. ಇಂದಿನ ದಿನಗಳಲ್ಲಿ ಗಿಡ ಮರ ಉಳಿಸಿ ಬೆಳಸುವ ಅನಿವಾರ್ಯತೆ ಹೆಚ್ಚಿದೆ. ಆರು ದಿನಗಳ ಕಾಲ ಹಮ್ಮಿಕೊಂಡಿರುವ ರಕ್ತದಾನ, ಪೌರಕಾಮಿರ್ಕರಿಗೆ ಸನ್ಮಾನ, ಮಹಿಳಾ ದಿನಾಚರಣೆ, ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮಗಳು ವೈಶಿಷ್ಠರ್ಪೂಣವಾಗಿದ್ದು ಸಂರ್ಪೂಣ ಯಶಸ್ಸು ಸಿಗಲಿ ಎಂದರು.
ಅರಣ್ಯ ಇಲಾಖೆ ಅಧಿಕಾರಿ ಜಯರಾಮ ಮಾತನಾಡಿ, ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ 60 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ತಂದಿದೆ. ಈ ಭಾಗದಲ್ಲಿ ಜನ್ಮದಿನದಂಥ ವಿಶೇಷ ಕಾರ್ಯಕ್ರಮಗಳಲ್ಲಿ ಸಸಿ ನೆಡುವ ನಿರ್ಣಯ ಕೈಕೊಂಡರೆ ಅದಕ್ಕೆ ಅರಣ್ಯ ಇಲಾಖೆ ಸಹಾಯ&ಸಹಕಾರ ನೀಡುತ್ತದೆ. ಕೇವಲ ಸಸಿಗಳನ್ನು ಹಚ್ಚುವುದಷ್ಟೇ ಮುಖ್ಯವಲ್ಲ. ಬದಲಿಗೆ ಅವುಗಳನ್ನು ಪೋಷಿಸುವುದು ಅವಶ್ಯವಾಗಿದೆ ಎಂದರು.
ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯ ಬಸವರಾಜ ಬಳ್ಳಾರಿ, ಕೆ. ಎ್ ಹಳ್ಯಾಳ, ಎಂ. ಎಂ. ಹಣಶಿ, ಎಚ್. ವೈ. ಸಂದಕದ, ಬಸವರಾಜ ಗದಗಿನ, ಆರ್. ಎಂ. ಲಿಂಬನಾಯಕ, ಎಸ್. ಎಸ್. ಪಾಟೀಲ, ಜಿ. ಎನ್. ಮಲ್ಲೂರ, ಬಸವರಾಜ ದೇಸಾಯಿ, ಅರುಣಕುಮಾರ ಚವ್ಹಾಣ, ಎಂ. ಎಂ. ನಿಟ್ಟಳ್ಳಿ ಹಲವರು ಇದ್ದರು.
ಕೋಟ್:
ನೌಕರರು ನಿವೃತ್ತಿಯಾಗುವುದು ಸಹಜ, ಆದರೆ ನಿವೃತ್ತಿ ಕಾರ್ಯಕ್ರಮಗಳು ಸಮಾಜಮುಖಿ ನೆಲೆಗಟ್ಟಿನಲ್ಲಿ ವಿಧಾಯಕವಾಗಿ ನಡೆಯಬೇಕು ಎನ್ನುವ ಚಿಂತನೆಯಿಂದ ನನ್ನ ಅಭಿಮಾನಿ ಬಳಗದವರು ಆರು ದಿನಗಳ ಕಾಲ ದಿನವೂ ಒಂದು ಉತಷ್ಠ ಅರ್ಥರ್ಪೂಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ರವಿ ಗುಂಜೀಕರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ
ಕೋಟ್:
ರವಿ ಗುಂಜೀಕರ ಅವರ ಸೇವೆ ಅನುಪಮ ಆಗಿದೆ. ಅವರ ನಿವೃತ್ತಿ ನಿಮಿತ್ಯ ವಿವಿಧ ರೀತಿ ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೊಂದು ಅವೀಸ್ಮರಣೀಯ ಕಾರ್ಯಕ್ರಮ
ಬಸವರಾಜ ಬಳ್ಳಾರಿ