

ಶಿವಾನಂದ ಹಿರೇಮಠ ಗದಗ
ವೀರಶೈವ ಲಿಂಗಾಯತ ಸಮುದಾಯಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಆತಂಕ, ಗೊಂದಲ ಏರ್ಪಟ್ಟಾಗಲೆಲ್ಲ ಗದಗ ಜಿಲ್ಲೆಯು ವೀರಶೈವ ಲಿಂಗಾಯತ ಒಗ್ಗಟ್ಟಿನ ಬಲ ಪ್ರದರ್ಶನದ ಕೇಂದ್ರವಾಗುತ್ತಿದೆ. ಸಾಮಾಜಿಕ ದೃಷ್ಟಿಯಿಂದ ಗುಣಾತ್ಮಕ ಬೆಳವಣಿಯೂ ಆಗಿದ್ದು, ಜಗದ್ದುರು ವೀರಗಂಗಾಧರ ಸ್ವಾಮೀಜಿಗಳು ನಡೆದಾಡಿದ ಜಿಲ್ಲೆಯ ಆಗಿದ್ದರಿಂದ ಸಮುದಾಯದ ಒಗ್ಗಟ್ಟಿಗೆ ಗದಗ ಜಿಲ್ಲೆ ಮುಖ್ಯ ಭೂಮಿಕೆಯೂ ಆಗುತ್ತಿದೆ.
ಈ ಹಿಂದೆ 2018ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಬುಗಿಲೆದ್ದು, ಸಮುದಾಯದಲ್ಲಿ ಗೊಂದಲ ಸೃಷ್ಟಿ ಆದಾಗಲೆಲ್ಲ ವೀರಶೈವ ಲಿಂಗಾಯತ ಸಮುದಾಯ ಒಂದೇ ಎಂದು ಸಂದೇಶ ಸಾರುವ ಬೃಹತ್ ಸಮಾವೇಶವು ಪಂಚಪೀಠಾಧೀಶ್ವರ ಸಾನ್ನಿಧ್ಯದಲ್ಲಿ ಗದಗ ನಲ್ಲೇ ನಡೆದಿದ್ದು ಇತಿಹಾಸವಾಗಿತ್ತು. ಆದರೆ ಇಂದು ವಿಭಿನ್ನ ಸನ್ನಿವೇಶ ಸೃಷ್ಟಿ ಆಗಿದ್ದು, ಜಾತಿಗಣಿತಿ ವಿಷಯದಲ್ಲಿ ಸಮುದಾಯದ ಏಕತೆಗೆ ಪಂಚಪಿಠಾಧೀಶ್ವರರು ಗದಗ ಜಿಲ್ಲೆಯಲ್ಲಿ ಒಂದೇ ವೇದಿಕೆಯಲ್ಲಿ ಸಮಾಗಮಗೊಂಡಿದ್ದು ವಿಶೇಷ.
ಪ್ರತ್ಯೇಕ ಲಿಂಗಾಯತ ಧರ್ಮ ಕೂಗಿಗಿಂತಲೂ ಇಂದಿನ ಜಾತಿಗಣತಿ ವಿಷಯ ಸಮುದಾಯದ ಮೇಲೆ ಬೃಹತ್ ಪರಿಣಾಮ ಬೀರಲಿದೆ ಎಂಬುದು ಸುಳ್ಳಲ್ಲ. ಚುನಾವಣೆಗಾಗಿ ರಾಜಕೀಯ ಪ್ರಭಾವಿಗಳು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಹುನ್ನಾರಕ್ಕೆ ಕೈ ಹಾಕಿದ್ದರು ಎಂಬುದು ಈಗ ಇತಿಹಾಸ. ಈ ಹಿಂದೆ ಲೆ$್ಮಶ್ವರದಲ್ಲೇ ನಡೆದಿದ್ದ ರಂಭಾಪುರಿ ಜಗದ್ಗರುಗಳು ದಸರಾ ದಭಾರ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾತ ಬಹಿರಂಗ ಕ್ಷಮೆ ಕೇಳಿದ್ದರು. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನಲ್ಲಿ ರಾಜಕೀಯ ಇಚ್ಚಾಶಕ್ತಿ ಇತ್ತೇಬೆಂದದನ್ನು ಒಪ್ಪಿಕೊಂಡಿದ್ದರು. ತಜ್ಞರ ಪ್ರಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸ್ಥಾನಮಾನ ಸಿಗುದಿಲ್ಲ ಎಂಬುದು ಅಷ್ಟೇ ಸ್ಪಷ್ಟವಾಗಿದ್ದು, ಈಗ ಪ್ರತ್ಯೇಕ ಧರ್ಮದ ಕೂಗು ಇತಿಹಾಸ ಮಾತ್ರ. ಆದರೆ, ಇಂದಿನ ಜಾತಿಗಣತಿ ವಿಷವೇ ವಿಭಿನ್ನವಾಗಿದ್ದು, ಸಮುದಾಯದ ಎಲ್ಲ ಒಳಪಂಗಡಗಳ ಗಣತಿಯಲ್ಲೂ ಒಗಟ್ಟು ಪ್ರದಶಿರ್ಸುವ ಕೆಲಸ ಮಾಡಬೇಕಿದ್ದನ್ನು ಪಂಚಪೀಠಾಧಿಶ್ವರರು ತಿಳಿಸಿದ್ದಾರೆ.
ಸಂದೇಶ ಏನು?
ಈ ಹಿಂದೆ ಗಣತಿ ಸಂದರ್ಭದಲ್ಲಿ ಕೆಲವರು "ಹಿಂದು' ಎಂದು. ಮತ್ತೇ ಕೆಲವರು ಲಿಂಗಾಯತ ಎಂದು ನಮೂದಿಸಿದ್ದೇ ಮೀಸಲು ವ್ಯತ್ಯಾಸ ಆಗುವುದಕ್ಕೆ ಮುಖ್ಯ ಕಾರಣ ಎಂಬುದು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರದ ಜಾತಿ ಮತ್ತು ಜನಗಣತಿಯಲ್ಲಿ ಹಿಂದೂ ಕಾಲಂ ಜತೆಗೆ ವೀರಶೈವ ಲಿಂಗಾಯತ ಒಳ ಪಂಗಡಗಳ ಕಾಲಂಗಳನ್ನು ಹೊಸದಾಗಿ ಸೃಷ್ಟಿಸಬೇಕೆನ್ನುವ ಕೂಗು ಕೇಳಿ ಬಂದಿದೆ. ಧರ್ಮದ ಆಧಾರದಲ್ಲಿ ಹಿಂದುವಾಗಿ, ಜಾತಿ ಆಧಾರದಲ್ಲಿ ವೀರಶೈವ ಲಿಂಗಾಯತವಾಗಿ(ಒಳಪಂಗಡ) ಗಣತಿ ಸಂದರ್ಭದಲ್ಲಿ ಜನರು ಸೂಚಿಸಬೇಕೆನ್ನುವ ಆಶವನ್ನು ಸಭೆಯಲ್ಲಿ ಹಕ್ಕೊತ್ತಾಯಿಸಲಾಗಿದೆ. ಈ ಹಿಂದೆ ಹಿಂದು ಗಾಣಿಗ, ಲಿಂಗಾಯತ ಗಾಣಿಗ ಎಂಬಂತೆ ಎಲ್ಲ ಒಳಪಂಗಡಗದ ಜನರು ಹಿಂದು ಮತ್ತು ಲಿಂಗಾಯತ ಎಂಬ ಪದ ಬಳಕೆ ಮಾಡಿದ್ದಾರೆ. ಜಾತಿ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲೂ ಈ ತಪ್ಪೆಸಗಿದ್ದಾರೆ. ಹೀಗಾಗಿ ಮೀಸಲು ಸಂದರ್ಭದಲ್ಲಿ ವ್ಯತ್ಯಾಸ ಆಗುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸಭೆಯಲ್ಲಿ ರಂಭಾಪುರಿ ಜಗದ್ಗುರುಗಳು ಹೇಳಿದ್ದೇನು?
ಸಿದ್ದರಾಮಯ್ಯ ಯಾವ ಸಂದರ್ಭದಲ್ಲಿ ಸಿಎಂ ಆಗಿದ್ದಾರೆ ಅಂತಹ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಆಪತ್ತು ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ವೀಶೈವ ಲಿಂಗಾಯತ ಧರ್ಮವನ್ನು ಬೇರ್ಪಡಿಸುವ ಪ್ರಯತ್ನ ಮಾಡಿದರು. ಪಂಚಪೀಠಗಳು ಒಮ್ಮತದ ಧ್ವನಿ ಮೂಲಕ ಧರ್ಮ ಒಡೆಯದಂತೆ ನೋಡಿಕೊಳ್ಳಲಾಯಿತು. ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಕೆಲವು ಜಾತಿಗಳನ್ನು ತುಷ್ಟೀಕರಣ ಮಾಡಿ, ಕೆಲವು ಜಾತಿಗಳನ್ನು ನಿರ್ಲಕ್ಷ$್ಯ ಮಾಡುವುದು ಒಳ್ಳೆಯದಲ್ಲ. ಇಂದು ವೀರಶೈವ ಲಿಂಗಾಯತ ಸಮಾಜ ಹರಿದು ಹಂಚಿ ಛಿದ್ರವಾಗುತ್ತಿದೆ. ಸಮಾಜಕ್ಕೆ ಬಂದಿರುವ ಕಷ್ಟದ ಸಮಯದಲ್ಲಿ ವೈಯಕ್ತಿಕ ಅಭಿಪ್ರಾಯಗಳು ಹಿತವಲ್ಲ. ಸರ್ಕಾರ ಕೆಲವೇ ಸಮುದಾಯದ ಜನರಿಗೆ ಆದ್ಯತೆ ಕೊಟ್ಟಿರುವುದನ್ನು ನೋಡಿದ್ದೇವೆ. ಧರ್ಮವನ್ನು ಒಡೆದು ಛಿದ್ರ ಮಾಡಿ, ಜಾತಿ ಗುಂಪುಗಳನ್ನು ಮಾಡಿರುವದು ಅಖಂಡ ವೀರಶೈವ ಲಿಂಗಾಯತ ಧರ್ಮಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ವೀರಶೈವ ಧರ್ಮ ಜಾತಿ, ಮತ ಪಂಥವನ್ನು ಮೀರಿ ಅನ್ನ ಆಶ್ರಯವನ್ನು ನೀಡುತ್ತ ಬಂದಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಜಾತಿ ಗಣತಿ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು. ಬಸವಣ್ಣನ ವಚಗಳ ಮೂಲಕ ವೀರಶೈವ ಲಿಂಗಯತ ಮಹತ್ವವನ್ನು ವಿವರಿಸಿದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹೇಳಿದ್ದೇನು?
ಪಂಚಪೀಠಗಳ ಮಾರ್ಗದರ್ಶನದಲ್ಲಿ ಎಲ್ಲ ಮಠಾಧೀಶರೊಂದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶ ಹಮ್ಮಿಕೊಂಡು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ. ದಾವಣಗೆರೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗುವದು. ಕಾಶೀ, ಕೇದಾರ, ಶ್ರೀಶೈಲ, ಉಜ್ಜಯಿನಿ ಹಾಗೂ ರಂಭಾಪುರಿ ಪೀಠಗಳ ಜಗದ್ಗುರುಗಳ ಸಾನ್ನಿಧ್ಯದಲ್ಲಿ ದಾವಣಗೆರೆಯಲ್ಲೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಶಂಕರ ಬಿದರಿ ಹೇಳಿದ್ದೇನು?
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ, 2015ರಲ್ಲಿ ಮಾಡಿದ ವರದಿ 2025ರಲ್ಲಿ ಅಪ್ರಸ್ತುತ. ರಾಜ್ಯದ ಬಹುತೇಕ ಮನೆಗಳಿಗೆ ಖುದ್ದಾಗಿ ಬಂದು ಸಮೀಕ್ಷೆ ಮಾಡಿಲ್ಲ. ಎಲ್ಲ ಲಿಂಗಾಯತರ ಆಚಾರ, ವಿಚಾರ ಸಂಸ್ಕಥತಿ ಒಂದೇ ಆಗಿದೆ. ಆದರೆ, ಹಾವನೂರ ಕಮಿಷನ್ ವರದಿಯಲ್ಲಿ ಲಿಂಗಾಯತರನ್ನು ಒಂದು ಜಾತಿ ಎಂದು ಪರಿಗಣಿಸಿದ್ದರಿಂದ ವೀರಶೈವ ಲಿಂಗಾಯತ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಎರಡು ತಲೆಮಾರಿನವರು ಈಗಾಗಲೇ ಸಂಕಷ್ಟ ಅನುಭವಿಸಿದ್ದಾರೆ ಎಂದರು.