ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

1000298084
Published on

ಗದಗ: ಸಮೀಪದ ಬಿಂಕದಕಟ್ಟಿಯ ಶ್ರೀ ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು 5-6-2025ರ ಗುರುವಾರದಂದು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಶಾಲೆಯ ಅಧ್ಯಕ್ಷರಾದ ಶ್ರೀ ವಿ.ಡಿ. ರಂಗಪ್ಪನವರು, ಪೋಷಕರಾದ ಶ್ರೀ ರಾಜೇಂದ್ರ ಮುಧೋಳ್ ಮತ್ತು ಶ್ರೀಮತಿ ರೇಣುಕಾ ಎಸ್ ಕೊಳ್ಳಿ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಕೆ.ಆರ್. ರವರು ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಶಾಲೆಯ ಮಕ್ಕಳಿಂದ ಊರಿನ ಬೀದಿಗಳಲ್ಲಿ ಸಂಚರಿಸಿ ಪರಿಸರ ಸಂರಕ್ಷಣೆ ಬಗ್ಗೆ ಜಾತಾವನ್ನು ನೆಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರ ವೃಂದ ದವರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಸಮೀನಾ ರವರು ನೆಡೆಸಿಕೊಟ್ಟರು. ಇನ್ನೋರ್ವ ಶಿಕ್ಷಕಿಯಾದ ಶ್ರೀಮತಿ ಅಕ್ಕಮ್ಮ ಹರಿಜನ ರವರು ಸರ್ವರನ್ನು ಸ್ವಾಗತಿಸಿದರು. ಹಾಗೂ ಶಾಲೆಯ ಶಿಕ್ಷಕಿಯಾದ ನಾಗರತ್ನ ಮರೆಕರ್ ರವರು ಪರಿಸರ ದಿನಾಚರಣೆಯ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ವಿವರವಾಗಿ ತಿಳಿಸಿದರು. ಮತ್ತು ಶಾಲೆಯ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಯ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು. ಕೊನೆಯದಾಗಿ ಇನ್ನೋರ್ವ ಶಿಕ್ಷಕಿಯರಾದ ಶ್ರುತಿ ಬ್ಯಾಹಟ್ಟಿಯವರು ಸರ್ವರನ್ನು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net