ವಾಲ್ಮೀಕಿ ಅಭಿವೃದ್ದಿ ನಿಗಮದ ಆಕ್ರಮ ಹಣ ವರ್ಗಾವಣೆ ಪ್ರಕರಣಶ್ರೀರಾಮ ಸೇನೆಯಿಂದ ಬೃಹತ್ ಪ್ರತಿಭಟನೆ

26GDG04
Published on

ಗದಗ : ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಲ್ಲಿಯ ಮುಳಗುಂದ ನಾಕಾದಿಂದ ಬೃಹತ್ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾಂiÀiðದರ್ಶಿ ರಾಜೂ ಖಾನಪ್ಪನವರ ರಾಜ್ಯ ಕಾಂಗ್ರೇಸ್ ಸರಕಾರ ದಲಿತರು,ಹಿಂದುಳಿದವರು,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಪರವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೇರಿದ ನಂತರ ರಾಜ್ಯ ಸರಕಾರ ದಲಿತರು,ಹಿಂದುಳಿದವರು,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡz ಜನರನ್ನು ತುಳಿಯುವ ಕೆಲಸದಲ್ಲಿ ನಿರತವಾಗಿದೆಯೆಂದು ಆರೋಪಿಸಿದರು.
ರಾಜ್ಯ ಸರಕಾರಿ ಸ್ವಾಮ್ಯದ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ದಿಗೆ ಸರಕಾರ ಮೀಸಲಿಟ್ಟಿರುವ ಕೋಟ್ಯಾಂತರ ರೂಪಾಯಿಗಳನ್ನು ಮಾಜಿ ಸಚಿವ ನಾಗೇಂದ್ರ,ಅಭಿವೃದ್ದಿ ನಿಗಮದ ಅಧ್ಯಕ್ಷ ದದ್ಧಲ ಸೇರಿದಂತೆ ಇತರರು ಕಬಳಿಸಿದ್ದಾರೆ. ಈ ಕೋಟ್ಯಾಂತರ ರೂಪಾಯಿಗಳನ್ನು ವಿವಿಧ ಖಾಸಗಿ ಬ್ಯಾಂಕ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಸರಕಾರ ಮೊದಲಿಗೆ ಆಕ್ರಮವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿ ಹೇಳಿಕೆ ನೀಡಿದ್ದರೂ ಸಿಬಿಐ,ಇಡಿ ಮಧ್ಯಪ್ರವೇಶದಿಂದ ಸಚಿವರಾಗಿದ್ದ ನಾಗೇಂದ್ರನ ರಾಜೀನಾಮೆ ಪಡೆದಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಯಾದಿಯಾಗಿ ಅನೇಕ ಜನ ರಾಜಕೀಯ ವ್ಯಕ್ತಿಗಳು,ಅಧಿಕಾರಿಗಳು ಸೇರಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಲು ತನಿಖಾ ಸಂಸ್ಥೆಗಳಿಗೆ ಅನುಕೂಲತೆ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿಯಾಗಿದ್ದ ಕಲ್ಲೇಶಪ್ಪ ಎಂಬುವವರು ಭಾರೀ ಭ್ರಷ್ಟರಾಗಿದ್ದಾರೆ. ಈ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡಿರುವ ಕಲ್ಲೇಶಪ್ಪ ಅವರನ್ನು ಇಡಿ ಅಧಿಕಾರಿಗಳು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಅಧಿಕಾರಿ ಗದಗ ಜಿಲ್ಲಾ ಪಂಚಾಯತನಲ್ಲಿ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವಾಗಲೂ ಸಹ ಅನೇಕ ಭ್ರಷ್ಟಾಚಾರದ ಆರೋಪಗಳಿದ್ದವು.ಅಂತಹ ಭ್ರಷ್ಟ ಅಧಿಕಾರಿಯನ್ನು ಸ್ವಂತ ವೇತನ ಶ್ರೇಣಿ ಆಧಾರದ ಮೇಲೆ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿಯನ್ನಾಗಿಸಿರುವದು ಸರಕಾರದ ಸಾಚಾತನವನ್ನು ತೋರುತ್ತದೆಯೆಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿಯಾಗಿದ್ದ ಕಲ್ಲೇಶಪ್ಪ ನೆರೆಯ ಕೊಪ್ಪಳದಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಂಟರನ್ಯಾಶನಲ್ ಸ್ಕೂಲ್,ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಭ್ರಷ್ಟಾಚಾರದಿಂದ ಬಂದಿರುವ ಹಣವನ್ನು ಶಾಲಾ,ಕಾಲೇಜಗಳಲ್ಲಿ ತೊಡಗಿಸಲಾಗಿದೆ. ಇಡಿ ಅಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕಾಂಗ್ರೇಸ್ ಪಕ್ಷದ ನಾಯಕರು,ಮುಖ್ಯಮಂತ್ರಿಗಳು ಪ್ರತಿ ಮಾತಿಗೂ ತಾವು ಅಂಬೇಡ್ಕರ ರಚಿಸಿದ ಸಂವಿಧಾನದAತೆ ನಡೆಯುವವರು ಎಂದು ತಮ್ಮ ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದರು.ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕಾ ಖರ್ಗೆ ಅವರಂತೂ ತಾವೇ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರರ ವಾರಸ್ಸುದಾರರೆಂಬAತೆ ಟಿವಿ,ಪತ್ರಿಕೆಗಳಲ್ಲಿ ಫೋಜು ನೀಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ,ಸಚಿವ ಪ್ರಿಯಾಂಕ ಖರ್ಗೆ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಕೋಟ್ಯಾಂತರ ರೂಪಾಯಿಗಳ ಆಕ್ರಮ ವರ್ಗಾವಣೆ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲವೆಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಕೋಟ್ಯಾಂತರ ರೂಪಾಯಿಗಳ ಆಕ್ರಮ ಹಣದಿಂದ ಬಳ್ಳಾರಿ ಲೋಕಸಭೆ ಚುನಾವಣೆಗೆ ಕಾಂಗ್ರೇಸ್ ಅಭ್ಯರ್ಥಿ ಜಯಶಾಲಿಯಾಗಿದ್ದಾರೆಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡಗಳು ಕೂಡಲೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ತಡೆಹಿಡಿಯಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವಂತೆ ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ನಾಗಪ್ಪ ಮುದಕಮ್ಮನವರ ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ರವಾನಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯ ಶಾರೀರಿಕ ಪ್ರಮುಖ ಮಹೇಶ ರೋಖಡೆ,ಜಿಲ್ಲಾಧ್ಯಕ್ಷ ಸೋಮು ಗುಡಿ,ಬಸವರಾಜ ಕುರ್ತಕೋಟಿ,ಹುಲಿಗೆಪ್ಪ ವಾಲ್ಮೀಕಿ,ಅಶೋಕ ಬಜಂತ್ರಿ,ಕಿರಣ ಹಿರೇಮಠ,ಭರತ್ ಲದ್ದಿ,ಈರಣ್ಣ ಪೂಜಾರ,ವೆಂಕಟೇಶ ದೊಡ್ಡಮನಿ,ರಾಜೂ ಗದ್ದಿ,ಸಂಜು ಚೆಟ್ಟಿ,ಕುಮಾರ ಮಿಟ್ಟಿಮಠ,ಪುನೀತ್ ತಮ್ಮಣ್ಣವರ,ಸಂಜೂ ಸೂರ್ಯವಂಶಿ,ಮಹಾAತೇಶ ಪಾಟೀಲ,ಶಿವಯೋಗಿ ಹಿರೇಮಠ,ಶರಣಪ್ಪ ಲಕ್ಕುಂಡಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net