ರಾಜೇಶ್ವರಿ ಕಲಾ ಕುಟೀರದ ವಾಷಿರ್ಕೋತ್ಸವ

28GDG03
Published on

ಸಂಗೀತ, ನೃತ್ಯ ಸಾಂಸತಿಕ ಸದಭಿರುಚಿಯಿಂದ ಮನಸ್ಸು ಅರಳುವದು: ಅಶೋಕ ಅಕ್ಕಿ

ವಿಜಯವಾಣಿ ಸುದ್ದಿಜಾಲ ಗದಗ

ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸತಿಯನ್ನು ರೂಢೀಸಬೇಕು. ಸಂಗೀತ, ನೃತ್ಯ ಸಾಂಸತಿಕ ಸದಭಿರುಚಿಯಿಂದ ಮನಸ್ಸು ಅರಳುವದು ಎಂದು ವಿಜಯ ಲಲಿತ ಕಲಾ ಸಂಸ್ಥೆಯ ಅಧ್ಯ ಅಶೋಕ ಅಕ್ಕಿ ಹೇಳಿದರು.

ಬುಧವಾರ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ರಾಜೇಶ್ವರಿ ಕಲಾ ಕುಟೀರದ 24ನೇ ವಾಷಿರ್ಕೋತ್ಸವ ಸಮಾರಂಭ, ಸಂಗೀತ ನೃತ್ಯೋಲ್ಲಾಸ, 2025 ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಅವರು, ಸಂಗೀತ, ನೃತ್ಯ, ಚಿತ್ರಕಲೆ ಸಾಂಸತಿಕ ಸಾಹಿತ್ಯಿಕ ಸಂಟನೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಸಂಟಿಕರ ಸಂಕಟ ಅನುಭವಿಸಿದವರಿಗೇ ಗೊತ್ತು. ಇವು ಲಾಭವನ್ನು ಕೊಡುವುದಿಲ್ಲ. ಆದರೆ ಮಾನಸಿಕ ನೆಮ್ಮದಿ ಸಂತೃಪ್ತಿಯನ್ನು ನೀಡಬಲ್ಲವು. ಸಾಂಸತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ರಾಜೇಶ್ವರಿ ಕಲಾ ಕುಟಿರ ಗಣನೀಯ ಕಾರ್ಯ ಮಾಡಿದೆ ಎಂದರು.

ರಂಗನಿರ್ದೆಶಕ ನಿಂಗು ಸೊಲಗಿ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರಹೊಮ್ಮಿಸಲು ಇಂತಹ ಸಂಟನೆ, ವೇದಿಕೆಗಳು ಅಗತ್ಯ. ಮಕ್ಕಳಲ್ಲಿ ಸಾಂಸತಿಕ ಪ್ರಜ್ಞೆಯನ್ನು ಮೂಡಿಸಲು ಪಾಲಕರು ಮುಂದಾಗಬೇಕು ಎಂದರು.

ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ ಪ್ರತಿಭೆಯ ವಿಕಸನ ವ್ಯಕ್ತಿತ್ವ ವಿಕಸನವಾಗಿದೆ. ಮಕ್ಕಳಿಗೆ ಆಸ್ತಿ ಮಾಡದೇ ಶಿಣ, ಸಾಂಸತಿಕ ಕಲೆಗಳಿಂದ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಉದ್ಯಮಿ ವಿಜಯಕುಮಾರ ಗಡ್ಡಿ ಮಾತನಾಡಿ, ರಾಜೇಶ್ವರಿ ಕಲಾ ಕುಟೀರಕ್ಕೆ 24 ವರ್ಷವಾದರೂ ಒಂದು ಸೂರು ಇಲ್ಲದಿರುವದು ವಿಷಾದನೀಯ. ಸರ್ಕಾರ, ಸಾಂಸತಿಕ ಪ್ರಜ್ಞೆಯುಳ್ಳವರು ಇಂತಹ ಸಂಸ್ಥೆ ಭದ್ರವಾಗಿ ನೆಲೆವೂರಲು ಸಹಾಯ ಸಹಕಾರ ನೀಡಬೇಕು ಎಂದರು.

ಮೌನೇಶ ಬಡಿಗೇರ, ಡಾ.ದತ್ತಪ್ರಸನ್ನ ಪಾಟೀಲ, ಗಜಾನನ ವೇರ್ಣೆಕರ, ಪೂಜಾ ವೇರ್ಣೆಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net