ಗದಗ- ಬೆಟಗೇರಿ ಅವಳಿ ನಗರದಲ್ಲಿ ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ

Untitled
Published on

ವಾಲಿದ 1.50 ಕೋಟಿ ವೆಚ್ಚದ ಬೆಟಗೇರಿ ತರಕಾರಿ ಮಾರುಕಟ್ಟೆ

ಗದಗ: ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಗಾಳಿ, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ತಗ್ಗುಪ್ರದೇಶ ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮದ ಸ್ಥಳಿಯ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು. ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲ ತಾಪಮಾನ ಅಧಿಕವಾಗಿತ್ತು. ಸಂಜೆ ಏಕಾಏಕಿ ಮಳೆ ಸುರಿಯಲು ಆರಂಭಿಸಿತು.

ಬೀರುಗಾಳಿ ಸಮೇತ ಮಳೆ ಸುರಿಯಲಾಂಭಿಸಿದ್ದರಿಂದ, ಬೀಕರ ಗಾಳಿಗೆ ಬೆಟಗೇರಿ ತರಕಾರಿ ಮಾರುಕಟ್ಟೆ ಪ್ರಾಂಗಣದ ಮೇಲ್ಚಾವಣಿ ಹಾರಿದೆ ಹಾಗೂ ಕಂಪೌಂಡ ಬಿರುಕು ಬಿಟ್ಟಿದ್ದು, ಯಾವುದೇ ಸಮಯದಲ್ಲಾದರೂ ತರಕಾರಿ ಮಾರುಕಟ್ಟೆ ಪ್ರಾಂಗಣ ಬೀಳುವ ಸ್ಥಿತಿ ಉದ್ಭವಿಸಿದೆ. ಮಳೆ ಗಾಳಿಗೆ ಬಾಗಶಃ ಮಾರುಕಟ್ಟೆ ಕಟ್ಟಡ ವಾಲಿದೆ. ತರಕಾರಿ ವ್ಯಾಪಾರಸ್ಥರು ಆತಂಕದಲ್ಲಿಯೇ ಶನಿವಾರ ತರಕಾರಿ ವ್ಯವಾಹರ ನಡೆಸಿರುವುದು ಕಂಡು ಬಂದಿತು. ಸಂಜೆ ವೇಳೆ ಎಲ್ಲ ವ್ಯಾಪಾರಸ್ಥರನ್ನು ತೆರವು ಗೊಳಿಸಲಾಗಿದೆ. 2017ರಲ್ಲಿ 1.50 ಕೋಟಿಗೂ ಅಧೀಕ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಅಂದಿನಿಂದಲೂ ಅವೈಜ್ಞಾನಿಕವಾಘಿ ಈ ಕಟ್ಟಡ ನಿಮಿರ್ಸಿದ್ದಾರೆ ಎಂಬ ಆರೋಪಗಳು ಮತ್ತು ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ನಗರದಲ್ಲಿ ಸಮಸ್ಯೆ:

ಏಕಕಾಏಕಿ ಸುರಿದ ಧಾರಾಕಾರ ಮಳೆಗೆ ಹಲವಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಕೆಲವಡೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಮನೆಯೊಳಗೆ ನುಗ್ಗಿದ್ದರಿಂದ ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡಬೇಕಾಯಿತು. ಪ್ರತಿ ಬಾರಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದಾಗ ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ನಗರಸಭೆ ಸದಸ್ಯರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೀದಿಯಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸಾರ್ವಜನಿರು ಪರದಾಡುವಂತಾಯಿತು. ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ರಭಸವಾಗಿ ಹರಿಯಿತು. ಇದರಿಂದ ರಸ್ತೆಯಲ್ಲಾ ಕೆಸರು ಮಯವಾಗಿತ್ತು. ಬೈಕ್​, ಆಟೋ ಸವಾರರು ಮತ್ತು ಪಾದಚಾರಿಗಳು ರಸ್ತೆ ದಾಟಲು ಹರ ಸಾಹಸ ಪಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net