ಗದಗ: ನವೀಕೃತ ಗದಗ ರೈಲು ನಿಲ್ದಾಣಕ್ಕೆ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳರವರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ರೈಲ್ವೆ ಸಚಿವರಾದ ವಿ. ಸೋಮಣ್ಣವರಿಗೆ ಮನವಿ ಸಲ್ಲಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಕ್ರಮ ಆಗಿರುವುದಿಲ್ಲ ದಯವಿಟ್ಟು ನಮ್ಮ ಮನೆಗೆ ಸ್ಪಂದಿಸಿ ನವೀಕೃತ ರೈಲು ನಿಲ್ದಾಣಕ್ಕೆ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಹೆಸರು ನಾಮಕರಣ ಮಾಡಬೇಕು ಅಂತ ಎಂ. ಪಿ ಮುಳುಗುಂದ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ, ತುಮಕೂರ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಅದರಂತೆ ಗದುಗಿನ ನಡೆದಾಡುವ ದೇವರು ಎಂದು ಹೆಸರಾಗಿರುವ ಮತ್ತು ಅಂಧ, ಅನಾಥ, ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ಶಿಕ್ಷಣ ಮತ್ತು ಸಂಗೀತ ಜ್ಞಾನ ನೀಡಿ ಸ್ವಾವಲಂಬಿಯಾಗಿ ಜೀವಿಸುವಂತೆ ಮಾಡಿದ ಶ್ರೀ ಪಂಡಿತ ಪುಟ್ಟರಾಜರ ಹೆಸರನ್ನು ಗದಗ ರೈಲು ನಿಲ್ದಾಣಕ್ಕೆ ಇಡಬೇಕು ಅಂತ ಅವರು ಆಗ್ರಹಿಸಿದರು.
ಹಲವಾರು ಬಾರಿ ಪಂಡಿತ ಪುಟ್ಟರಾಜ ರೈತ ಸಂಘದಿಂದ ಮನವಿ ಮಾಡಿದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ನಾಮಕರಣ ಆಗ್ರಹಿಸಿ ದಿನಾಂಕ 01-09-2025 ರಂದು ಬೆಳಿಗ್ಗೆ 8-30 ಗಂಟೆಗೆ ಗದಗ ರೈಲು ನಿಲ್ದಾಣದ ಎದುರಿಗೆ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು. ಈ ಹೋರಾಟದಲ್ಲಿ ಪೂಜ್ಯ ಶ್ರೀ ಫಕ್ಕಿರೇಶ್ವರ ಮಹಾಸ್ವಾಮಿಜಿಗಳು ಮಲ್ಲಸಮುದ್ರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳು, ಗದಗ ಜಿಲ್ಲೆಯ ಸಂಘ, ಸಂಸ್ಥೆಗಳು, ರೈತ ಸಂಘಟನೆಗಳು ಪಾಲ್ಗೋಳ್ಳಲಿವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಷ್ಪಾಕಲಿ ಹ. ಹೊಸಳ್ಳಿ, ಅಶೋಕ ಬಸೆಟ್ಟಿ ಗೌರವಾಧ್ಯಕ್ಷರಾದ ಎಂ.ಎಸ್.ಪರ್ವತಗೌಡ್ರ, ರಘುನಾಥರೆಡ್ಡಿ ಹುಚ್ಚಣ್ಣವರ, ಮಂಜುನಾಥ ಗುಡದೂರ, ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಉಪಸ್ಥಿತರಿದ್ದರು.