ನಾಡಿನ ಸಂಗೀತ ಸಾಹಿತ್ಯ ಕಲೆ ಸಂಸ್ಕೃತಿಗೆ ಡಾ. ಪುಟ್ಟರಾಜ ಕವಿ ಗವಾಯಿಗಳವರ ಕೊಡುಗೆ ಅನನ್ಯ

oppo_0
oppo_0
Published on

ಗದಗ: ನಾಡಿನ ಸಂಗೀತ ಸಾಹಿತ್ಯ ಕಲೆ ಸಂಸ್ಕೃತಿಗೆ ಗಾನಯೋಗಿ ಶಿವಯೋಗಿ ಡಾ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಅವರ ಕೊಡುಗೆ ಅನನ್ಯ ವಾಗಿದೆ ಎಂದು ಖ್ಯಾತ ತಬಲಾ ವಾದಕ ವೈ ಆರ್ ಮೂಲಿಮನಿ ಅವರು ಹೇಳಿದರು.
ಡಾ.ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು  ಅಂದ ಅನಾಥ ಅಂಗವಿಕಲ ಮಕ್ಕಳ ಬಾಳಿಗೆ ಬೆಳಕಾಗಿರುವರು ಎಂದು ಅವರು ಹೇಳಿದರು.

ಪಂಡಿತ ಪಂಚಾಕ್ಷರ ಗವಾಯಿಗಳವರು, ಡಾ. ಪುಟ್ಟರಾಜ ಕವಿ ಗವಾಯಿಗಳವರು  ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಅನ್ನ ವಸ್ತ್ರ ವಸತಿ ಆಶ್ರಯ ನೀಡಿ ಸಲ್ಲುತ್ತಿರುವುದು ನಾಡಿಗೆ ಹೆಮ್ಮೆ ತರುವಂತದ್ದಾಗಿದೆ  ಎಂದು ಉಪನ್ಯಾಸಕ ಗಂಗಾಧರ ಹಿಡ್ಕಿಮಠ  ಅವರು ಹೇಳಿದರು.
ಉಪನ್ಯಾಸಕರಾದ ಮೃತ್ಯುಂಜಯ ಮಠದ ವಾ ಆರ್ ಮೂಲಿಮನಿ, ಪಂಚಾಕ್ಷರಿ ಹಿಡ್ಕಿಮಠ , ಶರಣಪ್ಪ ಕಲ್ಬುರ್ಗಿ, ವಿರುಪಾಕ್ಷ ಪಟ್ಟದಕಲ್, ಬಿ ಎಚ್ ಜೋಗರೆಡ್ಡಿ, ಎಚ್ ಮಹೇಶ್ ,ಸುಮತಿ ಮರಿಗೌಡರ, ಶೃತಿ ಪವನ್, ಪವಿತ್ರ, ವಾಣಿಶ್ರೀ ಎಚ್ರಳ್ಳಿ, ತಮ್ಮಣ್ಣ, ರೇವಣಸಿದ್ದಯ್ಯ, ನಾಗರಾಜ್ ಪುರಂಕರ್, ಮಂಜುನಾಥ್ ಎಮ್ಮಿ. ಎಸ್ ಡಿ ಕಾಡಣ್ಣವರ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net