ಪುಟ್ಟರಾಜ ಗವಾಯಿಗಳ 14ನೇ ಪುಣ್ಯ ಸ್ಮರಣೆ

13GDG06A
Published on

Gadag: ಗಾನಯೋಗಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ೧೪ನೇ ಪುಣ್ಯಾರಾಧನೆ ಹಿನ್ನೆಲೆ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಶುಕ್ರವಾರ ಜಾತ್ರಾ ಸಂಭ್ರಮ ಮನೆ ಮಾಡಿತ್ತು. ಯಾವುದೇ ಭಾಗಕ್ಕೆ ಕಾಲಿಟ್ಟರೂ ಅಂಧರ ಬಾಳಿನ ಬೆಳಕು, ಸಂಗೀತ ದಿಗ್ಗಜ ಪುಟ್ಟರಾಜರದ್ದೇ ಸ್ವರ ಸ್ಮರಣೆ ಕಾಣುತ್ತಿತ್ತು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪರಿಕರಗಳೊಂದಿಗೆ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳು ರಚಿಸಿದ ಭಕ್ತಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಸ್ವರ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು. ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಭಕ್ತಿ ರಸದಲ್ಲಿ ಮಿಂದೆದ್ದರು.

ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ:

ಪುಣ್ಯಸ್ಮರಣೆ ಹಿನ್ನೆಲೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿವಿಧ ಭಾಗದ ಭಕ್ತರು ಪುಣ್ಯಾಶ್ರಮಕ್ಕೆ ಆಗಮಿಸಿದ್ದರು. ಬೆಳಗ್ಗೆಯಿಂದಲೂ ಆಶ್ರಮದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ವಿವಿಧ ಭಕ್ತರು ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾದರು. ಧಾರ್ಮಿಕ ಕಾರ್ಯಕ್ರಮದೊಂದಿಗೆ ದಿನವಿಡೀ ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆದವು. ಅಂಧರ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆ ಮೂಲಕ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಿದರು.

ಪುಟ್ಟರಾಜರದ್ದೇ ಸ್ವರ ಸ್ಮರಣೆ:

ಪುಣ್ಯಾರಾಧನೆ ನಿಮಿತ್ತ ವಿವಿಧ ಸಂಘ-ಸAಸ್ಥೆಗಳು, ಆಟೋ ಚಾಲಕರ-ಮಾಲೀಕರ ಸಂಘ, ವ್ಯಾಪಾರಿಗಳು, ಪ್ರತಿ ಬಡಾವಣೆ, ಗ್ರಾಮಗಳ ಭಕ್ತರು ಪ್ರಮುಖ ಸ್ಥಳಗಳಲ್ಲಿ ವೇದಿಕೆ ನಿರ್ಮಿಸಿದ್ದರು. ಹೂವು, ಹಣ್ಣುಗಳೊಂದಿಗೆ ಅಲಂಕರಿಸಿದ್ದ ವೇದಿಕೆಯಲ್ಲಿ ಪುಟ್ಟರಾಜರ ಭಾವಚಿತ್ರ ಪ್ರತಿಷ್ಠಾಪಿಸಿದ್ದರು. ಗುರುವಾರದಿಂದಲೇ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದ ಭಕ್ತರು, ಶುಕ್ರವಾರ ಬೆಳಗ್ಗೆ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. 

ಎಲ್ಲೆಲ್ಲೂ ಅನ್ನಸಂತರ್ಪಣೆ:

ನವನಗರ ಕ್ಷೇಮಾಭಿವೃದ್ಧಿ ಸಂಘ ಕೆ.ಎಚ್.ಬಿ. ಕಾಲೋನಿ ನವನಗರ ವಾರ್ಡ ನಂ.೨೯ ರಾಜೀವಗಾಂಧಿನಗರ ಹಾಗೂ ಇಮಾಮಸಾಬ ಮಕ್ತುಮಸಾಬ ಮೊರಬದ ಹಾಗೂ ಗೆಳೆಯರ ಬಳಗ, ಗದಗ-ಬೆಟಗೇರಿ ನಗರಸಭೆ ರಾಜೀವಗಾಂಧಿ ನಗರ, ವಾರ್ಡ ನಂ.೧೪ ರ ಟ್ಯಾಗೋರ ರಸ್ತೆಯಲ್ಲಿರುವ ಆದರ್ಶ ಗಜಾನನ ಸಮಿತಿ ಸೇರಿಂದ ವಿವಿಧ ಸಂಘ ಸಂಸ್ಥೆಗಳಿAದ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ ೧೪ನೇ ಪುಣ್ಯಾರಾಧನೆ ಕಾರ್ಯಕ್ರಮ ಹಾಗೂ ಮಹಾಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ರೈಲ್ವೆ ನಿಲ್ದಾಣ, ಹಳೆಯ ಬಸ್ ನಿಲ್ದಾಣ, ಸ್ಟೇಷÀನ್ ರಸ್ತೆ, ಕಾಟನ್ ಮಾರುಕಟ್ಟೆ ರಸ್ತೆ, ಮುಳಗುಂದ ನಾಕಾ ಹತ್ತಿರ, ಹಾತಲಗೇರಿ ನಾಕಾ, ಶಹಾಪುರ ಪೇಟೆ, ವೆಂಕಟೇಶ ಸಿನಿಮಾ ಮಂದಿರ ರಸ್ತೆ, ಬೆಟಗೇರಿಯ ತೆಂಗಿನಕಾಯಿ ಬಜಾರ್, ಹೆಲ್ತ್ಕ್ಯಾಂಪ್, ಎಸ್‌ಎಂ ಕೃಷ್ಣ ನಗರ, ಎಪಿಎಂಸಿ ಆವರಣದಲ್ಲಿ, ಹೊಸ ಬಸ್ ನಿಲ್ದಾಣದ ಆಟೋ ನಿಲ್ದಾಣದ ಸೇರಿದಂತೆ ವಿವಿಧ ಭಾಗಗಳಲ್ಲಿ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net