

ವಿಜಯವಾಣಿ ಸುದ್ದಿಜಾಲ ಗದಗ
ಪುನಿತ್ ರಾಜಕುಮಾರ ಹುಟ್ಟುಹಬ್ಬದ ಅಂಗವಾಗಿ ರಾಜಕುಮಾರ್ ಹಾಗೂ ಪುನಿತ್ ರಾಜಕುಮಾರ ಅಭಿಮಾನಿ ಬಳಗದಿಂದ ಸೋಮವಾರ ಗದಗ ಮೃಗಾಲಯದಲ್ಲಿ ಕೃಷ್ಣ ಮೃಗವನ್ನು ದತ್ತು ಪಡೆಯಲಾಯಿತು.
ಪುನಿತ್ ರಾಜಕುಮಾರ ಅಭಿಮಾನಿ ಸಂದ ಜಿಲ್ಲಾಧ್ಯಕ್ಷ ವಿಠ್ಠಲ್ ಪರಪುರ ಮಾತನಾಡಿ, ಪುನೀತ್ ರಾಜಕುಮಾರ್ ಅವರು ತಮ್ಮ ಜೀವನದ ಉದ್ದಕ್ಕೂ ಕರ್ನಾಟಕದ ಅರಣ್ಯ ಹಾಗೂ ಕಾಡು ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿ ಹೊಂದಿದ್ದರು. ಗಂಧದ ಗುಡಿ ಚಿತ್ರದ ಮೂಲಕ ಅವರು ಪರಿಸರದ ಪ್ರೇಮ ತೋರಿದ್ದರು. ಅವರ ಸೇವೆ ಮತ್ತು ಕಾಳಜಿಯನ್ನು ಅವರ ಅಭಿಮಾನಿಗಳಾದ ನಾವುಗಳು ಅಳವಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಈ ಹಿನ್ನೆಲೆ ಮೃಗಾಲಯದಿಂದ ಕೃಷ್ಣಮೃಗವನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ ಎಂದರು.
ಜನರು ಪರಿಸರ ಮೇಲೆ ಮತ್ತು ಪ್ರಾಣಿಗಳ ಮೇಲೆ ಪ್ರೀತಿ, ವಿಶ್ವಾಸ ತೋರಬೇಕು ಎಂಬುದು ಅವರ ಧ್ಯೇಯವಾಗಿತ್ತು. ಅವರ ಧ್ಯೇಯವನ್ನು ಅವರ ಅಭಿಮಾನಿಗಳಾದ ನಾವು ಅರಶಃ ಪಾಲಿಸುವ ಮೂಲಕ ಆಶಯ ಈಡೇರಿಸುತ್ತಿದ್ದೇವೆ. ಪುನಿತ್ ರಾಜಕುಮಾರ ಅವರು ಅಭಿಮಾನಿಗಳ ಹೃದಯ ಮಂದಿರದಲ್ಲಿ ಇದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾ ಎಂದರು.
ಉಪ ಸಂರಕ್ಷಣಾಧಿಕಾರಿ ಮೀನಾ ಮಾತನಾಡಿ, ರಾಜಕುಮಾರ್ ಅವರ ಗಂಧದಗುಡಿ ಚಲನಚಿತ್ರದಿಂದ ಹಲವರು ಅರಣ್ಯ ಇಲಾಖೆ ಸೇರಿಕೊಂಡರು. ಪರಿಸರ ಉಳಿಸಿ ಬೆಳೆಸುವ ವಿಷಯದಲ್ಲಿ ಡಾ. ರಾಜಕುಮಾರ ಅವರ ಕುಟುಂಬ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಮುಂಬರು ದಿನಗಳಲ್ಲಿ ಸಂದಿಂದ ನಡೆಯುವ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಇಲಾಖೆಯಿಂದ ಸಹಕಾರ ನೀಡುತ್ತೇನೆ ಎಂದರು.
ಅರಣ್ಯ ಸಂರಣಾಧಿಕಾರಿ ಸ್ನೇಹ ಕೊಪ್ಪಲ ಮಾತನಾಡಿ, ಯುವಶಕ್ತಿಗಳಿಗೆ ಪುನೀತ್ ರಾಜಕುಮಾರ್ ಅವರು ಆದರ್ಶವಾಗಿದ್ದರು ಎನ್ನುವುದಕ್ಕೆ ನಿಮ್ಮೆಲ್ಲರ ಈ ಕಾರ್ಯ ಸಾಯಾಗಿದೆ ಎಂದರು.
ಬಸವರಾಜ್ ಮನಗುಂಡಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ರಾಜಕುಮಾರ ಕುಟುಂಬದ ವರ್ಗದವರು ಮಾಡಿರುವ ಸೇವೆಯನ್ನು ಕನ್ನಡ ನಾಡು ಎಂದಿಗೂ ಮರೆಯುವುದಿಲ್ಲ. ಬದುಕಿರುವಾಗ ಅವರು ಮಾಡಿರುವ ಕಾರ್ಯಗಳೆಲ್ಲವೂ ನಿಸ್ವಾರ್ಥ ಸೇವೆಗಳಾಗಿದ್ದರು. ಅದೇ ರೀತಿ ಜಿಲ್ಲಾ ಟಕವು ಅವರ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು.
ಮಲ್ಲಿಕಾರ್ಜುನ ಸಂಗಾಪುರ, ಮೇನಾ ಕೊಟ್ಟೂರು, ವಿಠಲ್ ಪರಾಪುರ, ನಾಗರಾಜ್ ಗುತ್ತಿ, ಮಲ್ಲೇಶ ಪರಾಪೂರ, ರೇಖಾ ಬಂಗಾರಶೆಟ್ಟರ್, ಾತಿಮಾ ಹೊನ್ನಾಪೂರ, ಶಿವು ತಮ್ಮಣ್ಣವರ್, ಮನೋಹರ ಅದೋನಿ, ಮಂಜುನಾಥ್ ಪರಾಪೂರ, ಪ್ರೇಮ ಹುಬ್ಬಳ್ಳಿ, ದೀಪಕ್ ಹಾದಿಮನಿ ಹಲವರು ಇದ್ದರು.