

ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ಬಾರಿ ಗದಗ ಜಿಲ್ಲೆಯ ಪಿಯುಸಿ ಲಿತಾಂಶ ಣಿಸಿದ್ದರಿಂದ ಇಲ್ಲಿನ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ. ಈ ಬಾರಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗದಗ ಜಿಲ್ಲೆಯ ಲಿತಾಂಶವನ್ನು ಉತ್ತಮಗೊಳಿಸಲು ಉಪನ್ಯಾಸಕರು ಗಮನ ಹರಿಸಬೇಕು ಎಂದು ಶಾಲಾ ಶಿಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯ್ಕ ನುಡಿದರು.
ಇತ್ತೀಚೆಗೆ ನಗರದ ಮನೋರಮಾ ವಾಣಿಜ್ಯ ಪಿಯು ಕಾಲೇಜಿನಲ್ಲಿ ಶಾಲಾ ಶಿಣ ಇಲಾಖೆ ಹಾಗೂ ಗದಗ ಜಿಲ್ಲಾ ಪಿಯು ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರದಲ್ಲಿ ಜರುಗಿದ ಕನ್ನಡ ಭಾಷಾ ವಿಷಯದ ಉಪನ್ಯಾಸಕರ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷಾ ಉಪನ್ಯಾಸಕರಿಗಾಗಿ ನಡೆದಿರುವ ಈ ಪುನಶ್ಚೇತನ ತರಬೇತಿ ಶಿಬಿರ ಜ್ಞಾನಿಗಳ, ವಾಗ್ಮಿಗಳ ಸಮಾಗಮವಾಗಿದೆ. ಉಪನ್ಯಾಸಕರು ಜೀವನದಲ್ಲಿ ಸದಾ ವಿದ್ಯಾಥಿರ್ ಆಗಿರಬೇಕು. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬೋಧನಾ ಕೌಶಲವನ್ನು ನವೀಕರಣಗೊಳಿಸಿ ಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ವಿದ್ಯಾಥಿರ್ಗಳ ಮನಗೆಲ್ಲುವ ಸವಾಲು ಉಪನ್ಯಾಸಕರ ಎದುರಿಗೆ ಇದೆ. ಉಪನ್ಯಾಸಕರ ವ್ಯಕ್ತಿತ್ವ ಸಹ ಮಾದರಿ ಆಗಿರಬೇಕು ಎಂದರು.
ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂದ ಅಧ್ಯ ಎಂ. ಸಿ. ಕಟ್ಟಿಮನಿ ಮಾತನಾಡಿ, ಗದಗ ಜಿಲ್ಲೆಯ ಪಿಯು ಲಿತಾಂಶ ಸುಧಾರಣೆಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸುದೀರ್ ಸಭೆ ನಡೆದಿದೆ. ಉಪನ್ಯಾಸಕರ ಸಲಹೆ, ಅಶೋತ್ತರಗಳ ವರದಿ ನೀಡಲಾಗಿದೆ. ಕನ್ನಡ ಭಾಷಾ ಉಪನ್ಯಾಸಕರು ಸೇರಿದಂತೆ ಗದುಗಿನ ಪಿಯು ಉಪನ್ಯಾಸಕರ ವೃಂದ ಸತತ ಪರಿಶ್ರಮದಿಂದ ಲಿತಾಂಶವನ್ನು ಉತ್ತಮಗೊಳಿಸೋಣ ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಜಿಲ್ಲಾ ಪಿಯು ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಒಬ್ಬ ವಿದ್ಯಾಥಿರ್ ಅನುತ್ತೀರ್ಣನಾಗದಂತೆ ನಾವು ನೋಡಿಕೊಳ್ಳಬೇಕಿದೆ. ಈ ಬಾರಿಯ ಗದಗ ಜಿಲ್ಲೆಯ ಲಿತಾಂಶಕ್ಕೆ ಕನ್ನಡ ಉಪನ್ಯಾಸಕರು ಅವಿರತ ಶ್ರಮವಹಿಸಿ ಒಳ್ಳೆಯ ಕೊಡುಗೆ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ತಿಮ್ಮರಾಜು, ಎಸ್. ಎಚ್ ಸತ್ಯನಾರಾಯಣ, ಡಾ. ಸಿದ್ಧರಾಮ ಖಾನಾಪುರ ಕನ್ನಡ ಉಪನ್ಯಾಸಕರಿಗೆ ಪುನಶ್ಚೇತನ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಪಿಯು ಪರೀೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾಥಿರ್ಗಳನ್ನು ಹಾಗೂ ನೂರಕ್ಕೆ ನೂರು ಲಿತಾಂಶ ನೀಡಿದ ಕಾಲೇಜುಗಳ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ನರಸಿಂಹ ಕುಡ್ತರಕರ, ಸತೀಶ್ ಪಾಶಿ, ಎ್. ಎನ್ ಹುಡೇದ, ಎಸ್. ಎಚ್ ಮಲ್ಲಾಪೂರ ಇತರರು ಇದ್ದರು.