ಸಾರಿಗೆ ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ, ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

22GDG02
Published on
Gadag: ಸಾರಿಗೆ ಚಾಲನಾ ಸಿಬ್ಬಂದಿಗಳ ಮೇಲೆ ಆಗುತ್ತಿರುವ ಹಲ್ಲೆಗಳಿಂದ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸಾರಿಗೆ ನೌಕರರಿಂದ ಪ್ರತಿಭಟನೆ ಮಾಡಿದರು.
ನಗರದ ಸಾರಿಗೆ ವಿಭಾಗೀಯ ಕಛೇರಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯ ವರೆಗೆ ಗದಗ ವಿಭಾಗದ ನೌಕರರಿಂದ ಕಾಲ್ನಡಿಗೆ ಮೂಲಕ ತೆರಳಲು ಮನವಿ ಸಲ್ಲಿಸಿದರು. ನೂರಾರು ಸಾರಿಗೆ ನೌಕರರು ಈ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.
ಸರಕಾರ ಅಗತ್ಯ ಸೇವಾ ಕಾಯ್ದೆಯ ಅಡಿಯ ಕೆಲಸ ಮಾಡುತ್ತಿರುವ ನಮ್ಮ ಸಂಸ್ಥೆಯ ನೌಕರರು ಅದರಲ್ಲೂ ವಿಶೇಷವಾಗಿ ಚಾಲನಾ ಸಿಬ್ಬಂದಿಗಳಾದ ಚಾಲಕ, ನಿರ್ವಾಹಕ, ಚಾಲಕ ಕಂ ನಿರ್ವಾಹಕರು ಹಗಲು ರಾತ್ರಿ ಎನ್ನದೇ ಬಿಸಿಲು, ಚಳಿ, ಮಳೆಗಾಳಿ ಲೆಕ್ಕಿಸದೇ ದಿನದ ೨೪ ಗಂಟೆಯೂ ತಮ್ಮ ಇಲಾಖೆಯಂತೆ ಸಾರ್ವಜನಿಕರಿಗೆ ಪ್ರಯಾಣದ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೀರಾ ಕಳವಳಕಾರಿ, ಆತಂಕಕಾರಿ ಘಟನೆಗಳು ನಡೆಯುತ್ತಿದ್ದು, ವಿನಾಕಾರಣ ನಮ್ಮ ಚಾಲಕ ನಿರ್ವಾಹಕರ ಮೇಲೆ ಸಾರ್ವಜನಿಕರಿಂದ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ನಮ್ಮ ಜಿಲ್ಲೆಯಲ್ಲಿಯೂ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದ್ದು, ಅತ್ಯಂತ ಹೇಯ ಕೃತ್ಯಗಳಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಮೊನ್ನೆ ನಡೆದ ಶಿರಹಟ್ಟಿಯ ಘಟನೆಯಾಗಿರುತ್ತದೆ. ಜೊತೆಗೆ ಶಕ್ತಿ ಯೋಜನೆಯಿಂದ ಬಸುಗಳು ವಿಪರೀತ ಗದ್ದಲಗಳಾಗುತ್ತಿದ್ದು, ಸ್ಟೇಜ್ ದಾಟುವುದರೊಳಗಾಗಿ ದಾರಿ ಚೀಟಿ ನೀಡಬೇಕಾದ ನಿಯಮ ಇರುವುದರಿಂದ ದಾರಿ ಚೀಟಿ ನೀಡಲು ಬಸ್ ನಿಲ್ಲಿಸಿದರೂ ಹಲ್ಲೆಗೆ ಮುಂದಾಗುತ್ತಿದ್ದಾರೆ.
ಒಂದು ವೇಳೆ ಸ್ಟೇಜ್ ದಾಟಿದರೆ ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿದರೆ ಸಸ್ಪೆಂಡ್ ಆಗುವ ಸಂಭವ ಇರುತ್ತದೆ. ಇಂತಹ ಕಾನೂನಿನ ಅರಿದಿಲ್ಲದ ಸಾರ್ವಜನಿಕರು ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ನಮ್ಮ ಚಾಲನಾ ಸಿಬ್ಬಂದಿಗಳ ಮೇಲೆ ಆಗುತ್ತಿರುವ ಅಂತಹ ಹಲ್ಲೆಗಳಿಂದ ರಕ್ಷಣೆಗೆ ದೃಡ ಸಂಕಲ್ಪಮಾಡಿ ನಮ್ಮ ಸಿಬ್ಬಂದಿಯವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಎಸ್.ಎಂ.ಮುಳವಾಡ, ಗೋಪಾಲ ರಾಯರು, ಬಿ.ಎಚ್. ರಾಮೇನಹಳ್ಳಿ, ಎಸ್.ಕೆ. ಅಯ್ಯನಗೌಡರ, ನಾಗರಾಜ ಬಳ್ಳಾರಿ, ಎಂ.ಎಚ್.ಪೂಜಾರ, ಎಚ್.ಸಿ.ಕೊಪ್ಪಳ, ಎ.ಕೆ.ಕರ್ನಾಚಿ, ಎಸ್.ಎಫ್. ಸಂಗಣ್ಣವರ, ಎಫ್.ಎಚ್.ಗೌಡರ, ಎಂ. ಆಜಂನೇಯ, ಜೆ.ಆರ್.ಆದಿ, ಸಂತೋಷ ಕುಲಕರ್ಣಿ, ಎ.ಜೆ. ಸುಂಕದ, ಎಸ್.ಕೆ. ಭಜಂತ್ರಿ, ಆಂಜನೇಯ ಕುಂಬಾರ, ಲಕ್ಷಿö್ಮÃ ಸಾಲಮನಿ, ವಿದ್ಯಾ ಮೇಘರಾಜ, ವೀಣಾ ಚವ್ಹಾಣ ಸೇರಿದಂತೆ ಸಾರಿಗೆ ನೌಕರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net