

ವಿಜಯವಾಣಿ ಸುದ್ದಿಜಾಲ, ಗದಗ
ಕಲ್ಕತ್ತಾದ ಆರ್.ಜಿ. ವೈದ್ಯಕಿಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾಥಿರ್ನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತರ ಸಂದಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಐಎಂಎ ಸಭಾಂಗಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಮಹಾತ್ಮಾ ಗಾಂಧಿ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದಗ ಜಿಲ್ಲಾಡಳಿತ ಭವನ ತಲುಪಿತು.
ಪ್ರಸೂತಿ ಹಾಗೂ ಸ್ತ್ರೀರೋಗ ತರ ಸಂದ ಅಧ್ಯೆ ಡಾ. ಶೃತಿಭಾವಿ ಪಾಟೀಲ ಮಾತನಾಡಿ, ಕಲ್ಕತ್ತಾದ ಆರ್.ಜಿ ವೈದ್ಯಕಿಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾಥಿರ್ನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಗೈದು ದುಷ್ಕಮಿರ್ಗಳು ಅಟ್ಟಹಾಸ ಮೆರೆದಿರುವದು ಅಮಾನವೀಯ ಕೃತ್ಯ. ಇಂತಹ ದುಷ್ಠ ಶಕ್ತಿಗಳ ಮಟ್ಟ ಹಾಕಬೇಕು. ತಪ್ಪಿತಸ್ಥ ಆರೋಪಿಗಳನ್ನು ತಣ ಬಂಧಿಸಿ ಗಲ್ಲು ಶಿೆ ವಿಧಿಸುವ ಮೂಲಕ ಇಂತಹ ಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು. ಮಹಿಳೆಯರ ಮೇಲೆ ಅದರಲ್ಲೂ ವೈದ್ಯ ಮತ್ತು ವೈದ್ಯೆಯರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ, ಆಸ್ಪತ್ರೆ ಮತ್ತು ಆಸ್ಪತ್ರೆಯ ವೈದ್ಯಕಿಯ ಉಪಕರಣಗಳನ್ನು, ಪೀಠೋಪಕರಣಗಳನ್ನು ದ್ವಂಸಗೊಳಿಸುತ್ತಿರುವ ಕೃತ್ಯವನ್ನು ಉಗ್ರವಾಗಿ ಖಂಡಿಸಬೇಕು. ಕೊಲೆಯಾದ ವಿದ್ಯಾಥಿರ್ನಿಯ ಕುಟುಂಬಕ್ಕೆ ಒಂದು ಕೋಟಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಈ ಕುರಿತು ಅಗತ್ಯ ಕ್ರಮಕ್ಕಾಗಿ ಮನವಿಯನ್ನು ಸಂಬಂಧಿಸಿದವರಿಗೆ ರವಾನಿಸುವದಾಗಿ ಹೇಳಿದರು.
ಕಾರ್ಯದಶಿರ್ ಡಾ. ಅನ್ನರ್ಪೂಣ ಧನ್ನೂರ, ಗದಗ ಐಎಂಎ ಅಧ್ಯ ಡಾ. ಜಿ. ಎಸ್.ಪಾಟೀಲ, ಕಾರ್ಯದಶಿರ್ ಡಾ. ಚಂದ್ರಶೇಖರ ಬಳ್ಳಾರಿ ಇತರರು ಇದ್ದರು.