ನಾಗಮೋಹನದಾಸ ವರದಿ ವಿರೋಧಿಸಿ ನಗರದಲ್ಲಿ ಬೃಹತ್​ ಪ್ರತಿಭಟನೆ

06GDG08
Published on

ವಿಜಯವಾಣಿ ಸುದ್ದಿಜಾಲ ಗದಗ

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂತಿರ್ ನಾಗಮೋಹನದಾಸ ಏಕ ಸದಸ್ಯ ಪೀಠದ ಆಯೋಗವು ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಕೋಟಿರ್ನ ಮಾನದಂಡಗಳನ್ನು ಸಂರ್ಪೂಣವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿ ಬಂಜಾರ ಸಮುದಾಯ ಸೇರಿದಂತೆ ಪರಿಶಿಷ್ಠ ಜಾತಿಯ ವಿವಿಧ ಸಮುದಾಯಗಳು ನಗರದಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿದವು. ನಗರದ ಗಾಂಧೀ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಪುಟ್ಟಯ್ಯಜ್ಜಯ ವೃತ್ತ, ಚೆನ್ನಮ್ಮ ವೃತ್ತ, ಮುಳಗುಂದ ನಾಕಾ ಸೇರಿದಂತೆ ವಿವಿಧ ವೃತ್ತದಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನಾಗಮೋಹನ ದಾಸ ವರದಿ ವಿರೋಧಿಸಿ ದಿಕ್ಕಾರ ಕೂಗಿದರು. ನಾಮಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಜಿಲ್ಲಾಡಳಿತ ಮುಂಭಾಗದಲ್ಲಿ 11 ದಿನಗಳ ಕಾಲ ಧರಣಿಗೆ ಕುಳಿತರು.

ಈ ವೇಳೆ ಸರ್ಕಾರವನ್ನು ಪ್ರಶ್ನಿಸಿದ ಪ್ರತಿಭಟನಾಕಾರರು ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆಥಿರ್ಕ ಸ್ಥಿತಿಗತಿಯ ಅಂಕಿ ಸಂಖ್ಯೆಗಳು ದಮನಿತ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದೆ. ನಾಗಮೋಹನದಾಸ ಅವರೆ ವರದಿಯಲ್ಲಿ ತಿಳಿಸಿರುವಂತೆ ಸರ್ಕಾರದ ಕೆಲವು ಇಲಾಖೆಗಳು ಪರಿಶಿಷ್ಟ ಜಾತಿಯ ಅಂಕಿ ಸಂಖ್ಯೆಗಳನ್ನು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲವು ಕುಟುಂಬಗಳು ಅಲಭ್ಯ ಇರುವುದರಿಂದ ಸಮೀಕ್ಷೆ ಅರ್ಪೂಣವಾಗಿದೆ. ಈ ಅರ್ಪೂಣ ವರದಿಯನ್ನೇ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಕೆಲವು ಸಚಿವರುಗಳೊಂದಿಗೆ ರಾಜಿ ಪಂಚಾಯಿತಿ ನಡೆಸಿ, ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಾಗಮೋಹನ ದಾಸ ವರದಿಯಲ್ಲಿರುವ 324, 325, 326 ನೇ ಪುಟದಲ್ಲಿ ಇಡೀ ಸಮೀಕ್ಷೆಯ ಫಲಿತಾಂಶವನ್ನು ವಿಶ್ಲೇಷಿಸಿ, ಸಿದ್ಧಪಡಿಸಿರುವ ಕೋಷ್ಟಕದಲ್ಲಿ 26 ವಿವಿಧ ವಿಷಯಗಳ ಮಾನದಂಡಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಆಯಾ ಜಾತಿಗಳ ಪ್ರಗತಿಯ ಮೇಲೆ ಸಿದ್ಧಪಡಿಸಿರುವ 23 ವಿಷಯವಾರು ಮಾನದಂಡಗಳಲ್ಲಿ "ಡಿ' ಗುಂಪಿನಲ್ಲಿ ಬರುವ ಲಂಬಾಣಿ ಮತ್ತು ಇತರೆ ಸಮುದಾಯ ಕೇವಲ 6 ವಿಷಯಗಳಲ್ಲಿ ಮಾತ್ರ ಮುಂದಿವೆ ಎಂದು ಕಾಣಿಸಲಾಗಿದೆ. ಉಳಿದ 17 ವಿಷಯಗಳಲ್ಲಿ "ಸಿ' ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂದು ಅಂಕಿ ಸಂಖ್ಯೆಗಳ ಮೂಲಕ ತೋರಿಸಲಾಗಿದೆ, ಹಿಗಿದ್ದರೂ "ಡಿ' ಗುಂಪಿಗಿಂತ "ಸಿ' ಗುಂಪಿನ ಸಮುದಾಯಕ್ಕೆ ಶೇಕಡವಾರು ಹೆಚ್ಚಿನ ಮೀಸಲಾತಿ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.

ವರದಿಯಲ್ಲಿ 2011ರ ಜನಗಣತಿಯ ಜಾತಿವಾರು ಲೆಕ್ಕಾಚಾರವನ್ನು 2025 ರ ಜನಗಣತಿ ವಿಶ್ಲೇಶಿಸಿದಾಗ 14 ವರ್ಷಗಳ ತರುವಾಯ ಕೆಲವು ಜಾತಿಗಳ ಜನಸಂಖ್ಯೆ ಶೇ. 1.13 ರಷ್ಟು ಹೆಚ್ಚಳ ತೋರಿಸಿ, ಇನ್ನು ಕೆಲವು ಜಾತಿಗಳಿಗೆ ಶೇ. 10 ರಿಂದ 12 ರಷ್ಟು ಹೆಚ್ಚು ತೋರಿಸಿರುವುದರ ಹಿಂದಿನ ಮರ್ಮವನ್ನು ನಾಗಮೋಹನ ದಾಸ ಬಹಿರಂಗಪಡಿಸಬೇಕಿದೆ ಎಂದು ಬಂಜಾರ ಸಮುದಾಯ ಆಗ್ರಹಿಸಿತು.

ಎ.ಜೆ. ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಹಾಗೂ ನಾಗಮೋಹನ್​ ದಾಸ್​ ಆಯೋಗದ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನಿಗದಿಗೊಳಿಸಲಾಗಿದೆ. ಕಾಂಗ್ರೆಸ್​ ಸರ್ಕಾರ ಯಾವುದೇ ದೃಷ್ಟಿಕೋನದಿಂದಲೂ ಹೊಂದಾಣಿಕೆ ಆಗದ ಅಲೆಮಾರಿ ಸಮುದಾಯವನ್ನು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದೊಂದಿಗೆ ಸೇರಿಸಿರುವ ಉದ್ದೇಶ ಏನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಅಲೆಮಾರಿಗಳಿಗೂ ಶೇ.1 ರಷ್ಟು ಮೀಸಲಾತಿ ನೀಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ "ಸಿ' ವರ್ಗದಲ್ಲಿ ಬರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದವರಿಗೂ ಶೇ 6 ರಷ್ಟು ಮೀಸಲಾತಿ ನಿಗದಿಗೊಳಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಂದ್ರು ನಾಯಕ, ಉಮೇಶ ರಾಥೋಡ, ಕುಮಾರ ಮಹರಾಜ, ಶಿವಣ್ಣ ಲಮಾಣಿ, ರವಿಕಾಂತ ಅಂಗಡಿ, ಕೆ.ಸಿ. ಮಧಾ, ಐ.ಎಸ್​. ಪೂಜಾರ, ಗಣೇಶ ರಾಥೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net