ಹಿಂದೂ ಜಾತಿಯಲ್ಲಿ ಕ್ರಿಶ್ಚಿಯನ್​ ಬಳಕೆ!  ವಿವಿಧ ಮಠಾಧೀಶರರಿಂದ ಪ್ರತಿಭಟನೆ! ಮನವಿ

18GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಸರ್ಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಕಾಲಂನಲ್ಲಿ ಕ್ರಿಶ್ಚಿಯನ್​ ಎಂಬ ಪದ ಸೇರಿಸಿದ್ದನ್ನು ಖಂಡಿಸಿ ವಿವಿಧ ಮಠಾಧೀಶರು ಮತ್ತು ಸಾಮರಸ್ಯ ವೇದಿಕೆ ನೇತೃತ್ವದಲ್ಲಿ ಗುರುವಾರ ಗದಗ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಾದಯಾತ್ರೆ ಮೂಲಕ ಜಿಲ್ಲಾಡಳಿತ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಇಲ್ಲದ ಜಾತಿ ಸೃಷ್ಟಿಸಿರುವ ಸರ್ಕಾರ ಹಿಂದೂ ಧರ್ಮದ ನಡುವಿನ ಒಗ್ಗಟ್ಟು ಒಡೆಯುತ್ತಿದೆ. ಈ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯ ಸರ್ಕಾರ ಅಂದಾಜು 420 ಕೋಟಿ ವೆಚ್ಚದಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಲು ತಿರ್ಮಾನಿಸಿದೆ. ಆದರೆ, ತರಾತುರಿಯಲ್ಲಿ ಜನಗಣತಿ ಮಾಡುವ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಿದೆ. ಭಾರತ ತನ್ನದೇ ಆದ ಧರ್ಮ, ಭಾಷೆಯೊಂದಿಗೆ ಸಾಗುತ್ತಿದೆ. ರಾಜಕಾರಣಿಗಳು ಅಸ್ಥಿತ್ವಕ್ಕಾಗಿ ಧರ್ಮ, ಜಾತಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಧರ್ಮದಲ್ಲಿ ಲಿಂಗಾಯತ, ಕುರುಬ, ಬ್ರಾಹ್ಮಣ, ಭೋವಿ ಸೇರಿದಂತೆ 46 ಕ್ಕೂ ಅಧಿಕ ಜಾತಿಗಳಲ್ಲಿ ಕ್ರಿಶ್ಚಿಯನ್​ ಎಂದು ನಮೂದು ಮಾಡಲಾಗಿದೆ. ಕ್ರಿಶ್ಚಿಯನ್​ ಎಂಬ ಕಾಲಂ ತಗೆಯುವವರೆಗೂ ಈ ಜನಗಣತಿಯನ್ನು ಮಾಡಬಾರದು. ಈ ಮೂಲಕ ಹಿಂದೂಗಳಲ್ಲಿ ಒಡಕು ಹುಟ್ಟಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರದ ಈ ಜಾತಿಗಳ ಪಟ್ಟಿಯಲ್ಲಿ ಆನಧಿಕೃತವಾಗಿ ಹಿಂದೂ ಜಾತಿಗಳನ್ನು ಕೆಸ್ತ ಜಾತಿಗಳೆಂದು ಗುರುತಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಅಡಗಿದೆ. ಹಿಂದೂ ಜಾತಿಗಳೊಳಗೆ ಮತಾಂತರಕ್ಕೆ ಕುಮ್ಮಕ್ಕು ನೀಡಿ, ರ್ದುಬಲಗೊಳಿಸುವ ವ್ಯವಸ್ಥಿತ ಸಂಚು ಅಡಗಿದೆ. ಕೆಸ್ತ ಹೆಸರಿನಲ್ಲಿ ಮತಾಂತರಿಗಳು ಹಿಂದೂ ಜಾತಿಗಳೊಳಗೆ ನುಸುಳಿ ಹಿಂದೂ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ ಎಂದು ಗಂಭೀರ ಆರೋಪ ಮಾಡಿದರು. ಜಿಲ್ಲಾಡಳಿತ ಮುಂಭಾಗದಲ್ಲಿ ನಾಮ ಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಅನ್ನದಾನೇಶ್ವರ ಶಾಖಾಮಠ ನರಸಾಪೂರದ ಶ್ರೀಗಳು, ವೀರೇಶ್ವರ ಶಿವಾಚಾರ್ಯ ಶ್ರೀಗಳು, ಚನ್ನವಿರೇಶ್ವರ ಶ್ರೀಗಳು, ರಾಜು ಕುರಡಗಿ, ರವಿಕಾಂತ ಅಂಗಡಿ, ವಿಜಯಲಕ್ಷಿ$್ಮ ಮಾನ್ವಿ, ಜಗದೀಶ್​ ಎಸ್​. ಪಿ., ಭೀಮನಗೌಡ ಪಾಟೀಲ, ರಾಮಚಂದ್ರ ಮೋನೆ, ಕುಮಾರ ಬೆಂತೂರಮಠ, ವಂದನಾ ವರ್ಣೇಕರ, ಉಡಚಪ್ಪ ಹಳ್ಳಿಕೇರಿ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net