

ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಪ್ರಜಾಪ್ರಭುತ್ವ ಯುವ ಸಂಟನೆ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್ನಲ್ಲಿ ಚಿತ್ರಕಲೆ, ಸಂಗೀತ, ರಂಗಕಲೆ ಹಾಗೂ ದೈಹಿಕ ಶಿಣದಲ್ಲಿ ಪದವಿ ಪಡೆದ ಹಾಗೂ ಐಟಿಐ ಡಿಪ್ಲೊಮಾ ಮುಗಿಸಿದ ಯುವಕರಿಂದ ನೇಮಕಾತಿಗೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಮಟನೆಯ ರಾಜ್ಯ ಕಾರ್ಯದಶಿರ್ ಮಂಡಳಿ ಸದಸ್ಯ ಶರಣು ಗಡ್ಡಿ ಮಾತನಾಡಿ, ಚಿತ್ರಕಲೆ, ಸಂಗೀತ, ರಂಗಕಲೆ ಹಾಗೂ ದೈಹಿಕ ಶಿಣದಲ್ಲಿ ಪದವಿ ಪಡೆದವರನ್ನು ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭತಿರ್ ಮಾಡಲು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಔದ್ಯೋಗಿಕ ನೀತಿಗಳನ್ನು ಜಾರಿಗೆ ತರದಿರುವುದು ವಿಪರ್ಯಾಸ. ಸಂಗೀತ, ಚಿತ್ರಕಲೆ, ನೃತ್ಯ, ನಾಟಕ ಹಾಗೂ ದೈಹಿಕ ಶಿಣ ವಿಷಯಗಳಲ್ಲಿ ಪದವಿಗಳನ್ನು ಪಡೆದವರು ನೇಮಕಾತಿಯಲ್ಲಿ ಹೆಚ್ಚಿನ ನಿರ್ಲಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಗುತ್ತಿಗೆ ಆಧಾರದಲ್ಲಿ ಅಥವಾ ಅತಿಥಿಗಳ ಶಿಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಸರ್ಕಾರ ಕಡಿಮೆ ಸಂಬಳ ನೀಡುತ್ತಿದೆ. ಕನಿಷ್ಠ ವೇತನವು ಜಾರಿ ಮಾಡಿಲ್ಲ. ಆದ್ದರಿಂದ ಬಹುತೇಕ ಶಾಲೆಗಳಿಗೆ ಈ ಶಿಕರ ನೇಮಕಾತಿ ಆಗಬೇಕಿದೆ. ಈ ಎಲ್ಲ ಶಿಕರನ್ನು ಖಾಯಂ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರೇಡ&2 ತಹಶೀಲ್ದಾರ ಬಾಳೆಹೊಸೂರ ಅವರಿಗೆ ಮನವಿ ಪತ್ರ ಕೊಡಲಾಯಿತು.
ಭರಮಪ್ಪ ಪಲ್ಲೇದ, ಶರಣಪ್ಪ ಗೋಡೆಕರ, ಲಕ್ಷ$್ಮಣ ತಳವಾರ, ವೆಂಕಟೇಶ, ಬಸವರಾಜ, ಪ್ರಜ್ವಲ್, ಎಚ್. ರೆಡ್ಡಿ, ಕೀರಪ್ಪ ಕುಂಟಗೇರಿ, ಮಹಾದೇವಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.
ೋಟೋ 12ಜಿಡಿಜಿ05
ಗದಗ ಗಾಂಧೀವೃತ್ತದಲ್ಲಿ ಸಂಗೀತ, ಚಿತ್ರಕಲಾ, ರಂಗಕಲಾ ಹಾಗೂ ದೈಹಿಕ ಶಿಕರನ್ನು ನೇಮಕಾತಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಭರಮಪ್ಪ ಪಲ್ಲೇದ, ಶರಣಪ್ಪ ಗೋಡೆಕರ, ಲಕ್ಷ$್ಮಣ ತಳವಾರ, ವೆಂಕಟೇಶ, ಬಸವರಾಜ ಹಲವರು ಇದ್ದರು.
ಗದಗ ಗಾಂಧಿವೃತ್ತದಲ್ಲಿ