ವರದಕ್ಷಣೆ ಕಿರುಕಳ ಕಡಿವಾಣಕ್ಕೆ ಕಾನೂನು ಅರಿವು ಅಗತ್ಯ

Published on

ಗದಗ : ಪ್ರಸುತ್ತ ಸಮಾಜದಲ್ಲಿ ನಾಗರಿಕರು ಸಾಕಷ್ಟು ಪ್ರಜ್ಞಾವಂತರು ಇದ್ದರು ಸಹಿತ ಕೌಟುಂಬಿಕ ಕಲಹದ ಪ್ರಕರಣಗಳು ಜಾಸ್ತಿ ಬೆಳಕಿಗೆ ಬರುತ್ತಿವೆ. ಮಹಿಳೆಯರಿಗೆ ವರದಕ್ಷಣೆ ಕಿರುಕಳಕ್ಕೆ ಕುಟುಂಬಗಳು ನ್ಯಾಯಾಲಯದ ಮುಂದೆ ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪ್ರಾಚಾರ್ಯ ಬಿ.ವಿ. ಪಾಟೀಲ ಹೇಳಿದರು.

ಸಮೀಪದ ಲಕ್ಕುಂಡಿ ಗ್ರಾಮದ ಬಿ.ಎಚ್. ಪಾಟೀಲ ಪದವಿ ಪೂರ್ವ ಕಾಲೇಜನಲ್ಲಿ ಬುಧವಾರ ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ಘಟಕದ ಸಂಯುಕ್ತಾಶ್ರಯದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರಂತರಾಗಿ ಮಹಿಳೆಯರು ವರದಕ್ಷಣೆ ಎಂಬ ಭೂತದಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾನೂನುಗಳು ಜಾರಿಯಲ್ಲಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಅಲ್ಲದೇ, ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವವರಿಗೆ ಸಂವಿಧಾನದಡಿಯಲ್ಲಿ ಉಚಿತ ಕಾನೂನು ಅರಿವು ಜೊತೆಗೆ ನೆರವು ಕೂಡ ನೀಡಲಾಗುತ್ತದೆ. ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಿಂದ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಕಾನೂನು ವಿದ್ಯಾರ್ಥಿನಿ ಮುಕ್ತಾ ಹಡಪದ ಮಾತನಾಡಿ, ದಿನನಿತ್ಯದ ಪ್ರತಿಯೊಂದು ವ್ಯಾಪಾರ, ವಹಿವಾಟುಗಳಲ್ಲಿ ಗ್ರಾಹಕರಿಗೆ ಮೋಸ ಮತ್ತು ವಂಚನೆ ಎದುರಿಸುತ್ತಿದ್ದಾರೆ. ಗ್ರಾಹಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಅನ್ಯಾಯಕ್ಕೆ ಒಳಗಾದ ಗ್ರಾಹಕರು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದುರು.

ಈವೇಳೆ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶ್ವೇತಾ ದಂಡಾಪೂರ, ಶಿವಲೀಲಾ ಕಲಬಂಡಿ, ಬಸವರಾಜ ಅಪ್ಪೋಜಿ, ಮುಕ್ತಾ ಹಪಡದ, ಭೀಮಪ್ಪ. ಯಶೋಧ ಕುಂಬಾರ, ಬಸವರಾಜ ಪೂಜಾರ, ಕೆ. ವಿನೋದ, ಆಂಜನೇಯ ಇವರುಗಳು ವರದಕ್ಷಣೆಯಿಂದ ಮಹಿಳೆಯರ ಸಾವು ಕುರಿತು ಕಿರು ನಾಟಕ ಪ್ರದರ್ಶನ ಹಾಗೂ ಗ್ರಾಹಕರ ಸಂರಕ್ಷಣೆ ಕಾಯ್ದೆ ಕುರಿತು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತಿರಿದ್ದರು. ಉಪನ್ಯಾಸಕ ಎಂ.ಬಿ. ಭಜಂತ್ರಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net