

ಗದಗ: ಐದು ಸಾವಿರ ವರ್ಷಗಳಿಂದ ಆಯುವೇದ ಚಿಕಿತ್ಸೆ ನಡೆದುಕೊಂಡು ಬಂದಿದೆ. ನಮ್ಮ ಪೂರ್ವಜರು ಬಳಸುವ ದೇಶೀಯ ಚಿಕಿತ್ಸೆಯೇ ಆಯುರ್ವೇದ ವೈದ್ಯಕೀಯ ಶಿಕ್ಷಣ ಪಠ್ಯವಾಗಿ ಪ್ರಚಲಿತವಾಯಿತು.
ಆದರೆ ಕಾಲಕ್ರಮೇಣ ಜಾಗತೀಕರಣದ ಪ್ರಭಾವದಿಂದ ಮನುಷ್ಯಜೀವನಕ್ರಮವೂ ಬದಲಾಗಿ ವಾತ, ಪಿತ್ತ, ಕಫಗಳಲ್ಲಿ ಮಾತ್ರ ರೋಗಗಳನ್ನು ಗುರುತಿಸುವ ಪರಂಪರೆಯ ಪದ್ಧತಿ ಬದಲಾಗಿ ಗೊತ್ತೆ ಇಲ್ಲದ ಬಿ.ಪಿ., ಶುಗರಗಳಂಥ ಶಬ್ದಗಳಲ್ಲಿ ಆರೋಗ್ಯ ಹುಡುಕುತ್ತಿದ್ದೇವೆ.
ತ್ವರಿತ ಆರೋಗ್ಯಕ್ಕೆ ಮಾಡರ್ನ್ ಚಿಕಿತ್ಸೆಯೇ ಶ್ರೇಷ್ಠ ಎಂಬ ಧಾವಂತದಲ್ಲಿದ್ದೆವೆAದು ಪ್ರೋಬಸ್ ಕ್ಲಬ್‌ನ ಮಾಸಿಕ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್. ಹಿರೇಮಠ “ಹಿರಿಯ ನಾಗರಿಕರ ಜೀವನ ಶೈಲಿ ಹಾಗೂ ಆರೋಗ್ಯ” ಕುರಿತು ಮಾತನಾಡಿದರು.
ಅಂದಿನ ದಿನಗಳಲ್ಲಿ ಮನೆಯ ಊಟವೇ ಶ್ರೇಷ್ಠವಾಗಿರುವಾಗ ಚಹಾದ ಅಂಗಡಿಗೆ ಹೋಗುವದು ಅಪರಾಧವಾಗಿತ್ತು ಈಗ ಹೊರಗಡೆ ತಿನ್ನೋದೇ ಜೀವನ ಕ್ರಮವಾಗಿ ಹೊಸ ಹೊಸ ರೋಗಗಳಿಗೆ ಬಲಿಯಾಗುತ್ತಿರುವುದು ದುರಂತವಾಗಿ ಕಾಣುತ್ತ್ತಿದೆ.
ಆಹಾರ ಪದಾರ್ಥಗಳು ನಿರ್ಜೀವ. ಸೇವಿಸಿದಾಗ ಸಂಸ್ಕರಣೆಗೊAಡು ದೇಹಕ್ಕೆ ಜೀವ ಕೊಡುತ್ತವೆ. ಅಂದು ಸಕ್ಕರೆ, ಅಕ್ಕಿ, ಮೈದಾ ಇರಲಿಲ್ಲ. ಬಳಸಿ ಗೊತ್ತಾದ ಮೇಲೆ 5 ವಿಷಗಳು ಎಂದು ಗುರುತಿಸಿದ್ದಾರೆ. ಅಂದು ಬಳಸುತ್ತಿದ್ದ ಜೋಳ, ನವಣೆ, ರಾಗಿಗಳಂಥವುಗಳು ಇಂದು ದೈಹಿಕ ಆರೋಗ್ಯಸಿರಿ ಕೊಡುವ ಸಿರಿಧಾನ್ಯಗಳಾಗಿ ಮಾನವರ ಕಣ್ಣು ತೆರೆಸಿರುವುದು ಒಳ್ಳೆಯ ಪ್ರಗತಿ ಎಂದು ಅವರು ಆಯುರ್ವೇದದ ಮಹತ್ವ ಕುರಿತು ಧೀರ್ಘವಾದ ಉಪನ್ಯಾಸ ನೀಡಿದರು.
ಉಪನ್ಯಾಸ ನೀಡಿದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಟ್ಟು ಹಬ್ಬ ಆಚರಿಸಿಕೊಂಡ ಹಿರಿಯರಾದ ಮಹೇಂದ್ರಕುಮಾರ ಸುಂದ್ರಾಣಿಯವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ಬಿ.ಎಸ್. ಗೌಡರ ಮಾತನಾಡುತ್ತಾ ಅತಿಥಿಗಳ ಉಪನ್ಯಾಸ ಆಡುಭಾಷೆಯ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ದೀಪಾವಳಿಯ ಈ ಸಂದರ್ಭದಲ್ಲಿ ಪಟಾಕಿಗಳ ಹಾವಳಿಯಿಂದ ಎಷ್ಟೋ ಜನ ಕಣ್ಣು ಕಳೆದುಕೊಂಡಿದ್ದಾರೆ. ಹೊಗೆ ಮತ್ತು ಶಬ್ದ ಮಾಲಿನ್ಯದಿಂದ ಪರಿಸರ ನಾಶಕ್ಕೆ ಕಾರಣವಾಗುತ್ತವೆಂಬ ಅರಿವು ಎಲ್ಲರಲ್ಲಿರಬೇಕೆಂದು ಹೇಳಿದರು.
ಆರಂಭದಲ್ಲಿ ಮಂಗಳಾ ಯಾನಮಶೆಟ್ಟಿ ಪ್ರಾರ್ಥಿಸಿದರು. ಉಪಾಧ್ಯಕ್ಷ ರಾಜಶೇಖರ ಹಿರೇಮಠ ಕಾಲರ್‌ಧಾರಣ ಮಾಡಿದರು. ಎಂ.ಸಿ. ವಗ್ಗಿ ಎಲ್ಲರನ್ನು ಸ್ವಾಗತಿಸುತ್ತಾ ಕ್ಲಬ್‌ನ ವೆಲ್‌ಫೆರ್ ಸೊಸೈಟಿಯ ಸಭಾಭವನ ಕಟ್ಟುವ ನಿವೇಶನದಲ್ಲಿ ಹಾಕಿದ ಬೋರವೆಲ್‌ನಿಂದ ಸಿಹಿ ನೀರು ಪುಟಿದು ಬಂತು ಎಂಬ ಸಂತೋಷದ ಸುದ್ದಿಹಂಚಿಕೊAಡರು.
ಸಹ ಕಾರ್ಯದರ್ಶಿ ಎಚ್.ಬಿ. ಯಲಬುರ್ಗಿ ನಿರೂಪಿಸಿದರು. ಉಪಾಹಾರ ವ್ಯವಸ್ಥೆ ಮಾಡಿದ್ದ ಶೈಲಾ ಕೋಡೆಕಲ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ವಾರ್ತಾಧಿಕಾರಿ ಬಸವರಾಜ ಗಣಪ್ಪನವರ ವಂದಿಸಿದರು.