

ಗದಗ: ಬೆವರು ಸುರಿಸಿ ಖಾಸಗಿ ಕಂಪನಿಗಳಿಗೆ ವಿಮೆ ಹಣ ಪಾವತಿಸಿದ್ದು, ಮೋಸ ಮಾಡಿದ ಕಂಪನಿಗಳ ವಿರುದ್ದ ತಣ ಕ್ರಮ ಕೈಗೊಳ್ಳಬೇಕು. ನಿಗಧಿತ ಸಮಯದಲ್ಲಿ ನಮ್ಮ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಬೇಕು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊಣೆ ಎಂದು ವಂಚನೆ ಸಂತ್ರಸ್ಥ ಠೇವಣಿದಾರ ಸಂದ ತಾಲೂಕು ಟಕ ಅಧ್ಯ ಹೊನಕೇರಪ್ಪ ನರಸಾಪೂರ ಹೇಳಿದರು.
ಹಣ ದ್ವಿಗುಣಗೊಳಿಸುವುದಾಗಿ ಸಾರ್ವಜನಿಕರಿಂದ ಕೆಲ ಖಾಸಗಿ ಕಂಪನಿಗಳು ಠೇವಣಿ ಪಡೆದು ಜನರಿಗೆ ಮೋಸ ಮಾಡಿದ್ದರಿಂದ, ವಂಚನೆಗೆ ಒಳಗಾದ ಸಾರ್ವಜನಿಕರಿಂದ ಕಂಪನಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಣ ಮರುಪಾವತಿಸಬೇಕೆಂದು ಆಗ್ರಹಿಸಿದ ಅವರು, ನಮ್ಮ ಹೋರಾಟ ನಿರಂತರ. ನಮಗೆ ನ್ಯಾಯ ಸಿಗುವವರೆಗೂ ಸ್ಥಳ ಬಿಟ್ಟು ಕದಲುವದಿಲ್ಲ. ಸತತ 12 ದಿನಗಳ ಕಾಲ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಈವೆರೆಗೂ ಸಂತ್ರಸ್ಥರಿಗೆ ಯಾವದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ$್ಯ ಹಾಗೂ ಪೈರ್ವಾಗ್ರಹ ಪೀಡಿತ ಸಂದೇಶವಾಗಿದೆ ಎಂದು ಆರೋಪಿಸಿದರು.
ಇಲ್ಲಿಯವರೆಗೂ ಶಾಂತಿಯುತ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಭಿನ್ನವಾಗಿ ನಮ್ಮ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸಿಕೊಂಡು ಅಖಾಡಕ್ಕೆ ಧುಮುಕುತ್ತೆವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಂಚನೆ ಸಂತ್ರಸ್ಥ ಠೇವಣಿದಾರರ ಸಂದ ಜಿಲ್ಲಾ ಟಕ ಅಧ್ಯ ಹೇಮಂತಗೌಡ ಮಾಲಿಪಾಟೀಲ ಮಾತನಾಡಿ, ಹಲವು ವರ್ಷಗಳಿಂದ ಖಾಸಗಿ ಕಂಪನಿಗಳು ಜನರಿಂದ ಹಣವನ್ನು ವಸೂಲಿ ಮಾಡಿವೆ. ಅವಧಿ ಮುಗಿದರೂ ಕೂಡ ಈವೆರೆಗೂ ಜನರಿಗೆ ಹಣ ತಲುಪಿಸಿಲ್ಲ. ಹಣ ನೀಡದೇ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸಂದಾಯ ಮಾಡಿದ ಸಾರ್ವಜನಿಕರಿಗೆ ತಣ ಹಣ ಮರಳಿಸಬೇಕು ಎಂದು ಒತ್ತಾಯಿಸಿದರು.
ನೀಲಮ್ಮ ಗದಗೇರಿ, ಸರೋಜಾ ಬಾರಕೇರ, ಪಂಚಾರಯ್ಯ ವಿರಕ್ತಮಠ, ಸುರೇಶ ಕರ್ಜಗಿ, ನರಗುಂದ ತಾಲ್ಲೂಕಾ ಅಧ್ಯ ನದಾ್, ಸುಮಂಗಲಾ ರಾಠೋಡ, ಗಂಗಮ್ಮ ಹುರಳಿ, ಶಿವಕುಮಾರ ಮಠದ, ಅಶೋಕ ಕುರ್ತಕೋಟಿ, ಕಲಾವತಿ ನಾವಿ ಮತ್ತಿತರರು ಇದ್ದರು.