ಮುದ್ರಣ ಉದ್ಯಮಕ್ಕೆ ಗದಗ ವಿಶಿಷ್ಠ ಕೊಡುಗೆ ನೀಡಿದೆ: ಈಶಣ್ಣ ಮುನವಳ್ಳಿ

24GDG04
Published on

ಗದಗ:
ಮುದ್ರಣ ಉದ್ಯಮಕ್ಕೆ ಗದಗ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯ ಈಶಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುದ್ರಣ ಮತ್ತು ಪ್ರಕಾಶನ ೇತ್ರದಲ್ಲಿ ಹೆಸರು ಮಾಡಿರುವ ಗದಗ ಜಿಲ್ಲೆ ಅಚ್ಚುಮೊಳೆಯಿಂದ ಆರಂಭಗೊಂಡು ಅತ್ಯಾಧುನಿಕ ಆ್​ಸೆಟ್​ ಮುದ್ರಣದಲ್ಲೂ ಮುಂಚೂಣಿಯಲ್ಲಿದೆ. ಪಠ್ಯ ಪುಸ್ತಕ, ಸಾಹಿತ್ಯ ಪುಸ್ತಕ ಸೇರಿದಂತೆ ಕ್ಯಾಲೆಂಡರ್​ ಪ್ರಕಟಣೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಹಲವು ಪ್ರಸಿದ್ಧ ಪ್ರಕಾಶಕರು ಉತ್ತಮ ಕೊಡಗೆ ನೀಡಿದ್ದಾರೆ ಎಂದರು.
ಕಾರ್ಯದಶಿರ್ ಪ್ರಕಾಶ ಉಗಲಾಟದ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ವ್ಯಾಪಾರಸ್ಥರ ಬೇಡಿಕೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಸಾಹಿತಿ ಅಂದಾನೆಪ್ಪ ವಿಭೂತಿ, ಬಸವರಾಜ ಅಯ್ಯಪ್ಪ ಅಂಗಡಿ, ಸುರೇಶ ಅಂಗಡಿ ಮಾತನಾಡಿದರು.
ವಿಶ್ವನಾಥ ರಾಮನಕೊಪ್ಪ, ಜಯದೇವ ಮೆಣಸಗಿ, ಚನ್ನಬಸಪ್ಪ ಅಕ್ಕಿ, ವಿಜಯಕುಮಾರ ಹಿರೇಮಠ, ಮಹಾಲಿಂಗಪ್ಪ ರಂಜಣಗಿ, ಪ್ರಸಾದ ಹಿರೇಮಠ, ಪರಶುರಾಮ ತೆರದಾಳ, ಸಿದ್ಧಲಿಂಗೇಶ ಅಂಗಡಿ, ವಿನಯ ಕಾಡಪ್ಪನವರ, ಉಮೇಶ ಭೂಸ್ತ, ಜವಾಹರ ಖೋಡೆ, ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net