

ಜ. 21 ರಂದು ರಂದು ಹೊಸ ಪ್ರಣಾಳಿಕೆ ಸಲ್ಲಿಕೆ
ವಿಜಯವಾಣಿ ಸುದ್ದಿಜಾಲ ಗದಗ
ನೀತಿ ಇಲ್ಲದ ಇಂದಿನ ರಾಜಕಾರಣದಲ್ಲಿ ರೈತರ ಬೇಕು ಬೇಡಿಕೆಗಳನ್ನು ಒಳಗೊಂಡ ಹೊಸ ಪ್ರಣಾಳಿಕೆಯನ್ನು ಜ. 21ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖ ಬಣ) ಮುಖಂಡ ಶಂಕರಗೌಡ ಜಾಯನಗೌಡ್ರ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನದಿ ವಿವಾದ, ಗಡಿ ವಿವಾದ ಇತ್ಯರ್ಥ ಆಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ನೀರಾವರಿ, ಶಿಕ್ಷಣ ಜ್ವಲಂತ ಸಮಸ್ಯೆಗಳಾಗಿವೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು ತೀರಾ ಹಿಂದುಳಿವೆ. ರಾಜಕಾರಣದಲ್ಲಿ ನೀತಿ ಇಲ್ಲದಾಗಿದೆ. ಇದಕ್ಕೆ ಹೊಸ ರೂಪ ಕೊಡಬೇಕು ಎನ್ನುವ ಕಾರಣಕ್ಕೆ, ಕರ್ನಾಟಕದ ಹೊಸ ಪ್ರಣಾಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಸಿದ್ದಪಡಿಸಲಾಗಿದ್ದು, ಅದನ್ನು ಜ. 21 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ ಎಂದರು.
ರೈತ ಮತ್ತು ನಾಡಿನ ಪರವಾದ ಹೊಸ ಪ್ರಣಾಳಿಕೆ ಬಿಡುಗಡೆಗೆ ಕನ್ನಡ ಮತ್ತು ರೈತ ಪರ ಸಂಟನೆಗಳು ಕೈ ಜೋಡಿಸಿವೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಬಿ.ಟಿ. ಲಲಿತಾ ನಾಯಕ, ನಾರಾಯಣಗೌಡ್ರ ಸಹಿತ ಅನೇಕ ಗಣ್ಯರು ಅಂದು ರೈತರ ಜೊತೆಗಿದ್ದು, ಹೊಸ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ನೀರಾವರಿ, ಹೆದ್ದಾರಿ, ರೈಲ್ವೆ ಸಹಿತ ಅನೇಕ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನಮ್ಮ ಪ್ರಣಾಳಿಕೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ದಿಲ್ಲಿಯಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಸವರಾಜ ನವಲಗುಂದ, ಶಿವಯೋಗಯ್ಯ ಶಶಿಮಠ, ಮಂಜುನಾಥ ವಡ್ಡರ, ಅರುಣಕುಮಾರ ತಿರ್ಲಾಪುರ, ಎಚ.ಡಿ. ದೊಡ್ಡಮನಿ, ಸಂತೋಷ ಹೂಗಾರ ಇತರರು ಇದ್ದರು.