ಸಂಪುಟ ಸದಸ್ಯರ ನಡುವೆಯೂ ಜಾತಿಗಣತಿ ಮಂಡನೆ

12GDG01
Published on

ವಿಜಯವಾಣಿ ಸುದ್ದಿಜಾಲ ಗದಗ

ಸಚಿವ ಸಂಪುಟ ಸಹೊದ್ಯೋಗಿಗಳ ಅಸಮಾಧಾನ ನಡುವೆಯೂ ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಮಂಡನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ಎಚ್​. ಕೆ. ಪಾಟೀಲ ಅವರ ಮನೆಗೆ ಗಣತಿ ಮಾಡಲು ಯಾರಾದರೂ ಬಂದಿದ್ರಾ? ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಾತಿ ಗಣತಿ ಸಮೀೆ ಮಾಡಲು ನಮ್ಮ ಮನಗೂ ಯಾರು ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಒಂದು ಕ್ಷೇತ್ರದಲ್ಲಿ ಲಾಮಾಣಿ ಸಮುದಾಯ ಇಲ್ಲ. ಆದರೂ ನಾಲ್ಕು ಸಾವಿರ ಜನರು ಇದ್ದಾರೆ ಎಂದು ಸಮೀೆ ನಡೆಸಿದ್ದಾರೆ. ಹಲವಡೆ ಇಳಿಗೇರ ಸಮುದಾಯವೇ ಇಲ್ಲ. ಆದರೂ 2 ರಿಂದ 3 ಸಾವಿರ ಇಳಿಗೇರ ಸಮುದಾಯ ಇದ್ದಾರೆ ಎಂದು ಸುಳ್ಳು ವರದಿ ಸೃಷ್ಟಿ ಮಾಡಲಾಗಿದೆ. ಅಸಮರ್ಪಕವಾದ ಜಾತಿ ಜನಗಣತಿಯಿಂದ ಯಾರಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್​ ನಾಕಯರು ಏಕೆ ಅರ್ಥೈಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯ ಕುರಿತು ಮಾತನಾಡಿದ ಸಿ.ಸಿ. ಪಾಟೀಲ, ಅಲ್ಪಸಮಖ್ಯಾತ ಮತ್ತು ಹಿಂದುಳಿದ ವರ್ಗಕ್ಕೆ ಸಿಗುವ ಸೌಲಭ್ಯಗಳನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ, ಸಿದ್ದರಾಮಯ್ಯ ನೇತೃತ್ವದ್ಲ ಸರ್ಕಾರದಲ್ಲಿ ಲಿಂಗಾಯತರಾಗಿ ಹುಟ್ಟಿರೋದು ತಪ್ಪಾಯಿತಾ ಅನಿಸುತ್ತಿದೆ. ಜಾತಿ ಗಣಿತಿ ಮಂಡನೆಗೆ 136 ರಿಂದ 139 ಶಾಸಕರ ಬೆಂಬಲ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ಬೆಂಬಲ ಭಸ್ಮಾಸುರ ಬೆಂಬಲ ಅಗಬಾರದು. ಭಸ್ಮಾಸುರ ಬಹಳ ಜನರನ್ನು ಸುಟ್ಟು ಕೊನೆಗೆ ತಾನೇ ತನ್ನ ಕೈಯನ್ನು ತಲೆ ಮೇಲೆ ಇಟ್ಟುಕೊಂಡು ಭಸ್ಮನಾಗುತ್ತಾನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು. ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ವರ್ಗಕ್ಕೆ ಅನ್ಯಾಯ ಆಗಬಾರದು ಎಂದು ಆಗ್ರಹಿಸಿದರು.

ತಹವ್ವುರ ರಾಣ ಬಗ್ಗೆ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗೆ ಕಾಳಜಿ ಹೆಚ್ಚು:

ಮುಂಬೈ ದಾಳಿಕೋರ ರಾಣಾ ಬಗ್ಗೆ ಸಿ. ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿ, ತಹವ್ವುರ ರಾಣ ಬಗ್ಗೆ ಕಾಂಗ್ರೆಸ್ಸಿಗೆ ಮೃದು ಧೋರಣೆ ಏಕಿದೆ ಎಂದು ಪ್ರಶ್ನಿಸಿದರು. ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ ರಾಣಾ ಭಾರತಕ್ಕೆ ಹಸ್ತಾಂತರವಾದ ನಂತರ ಕಾಂಗ್ರೆಸ್​ ನಾಯಕರಿಗೆ ಭೀತಿ ಶುರುವಾಯಿತು. ರಾಣಾ ಗೆ ನ್ಯಾಯ ಸಮ್ಮತವಾದ ವಕೀಲರನ್ನು ಕೊಡಬೇಕು. ಕಾನೂನಾತ್ಮಕ ಹೋರಾಟಕ್ಕೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಒಬ್ಬ ರಾಣಾ ಬಗ್ಗೆ ಚಿಂತೆ ಇದೆ ಆದರೆ, 166 ಜನ ಅಮಾಯಕರ ಪ್ರಾಣದ ಬಗ್ಗೆ ಅವರಿಗೆ ಚಿಂತೆ ಇಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ಸಿನ ದೇಶ ಪ್ರೇಮ ಎಷ್ಟಿದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಮುಂಬೈನಲ್ಲಿ ನಡೆದಿದ್ದು ಅಮಾನುಷ ಭಯೋತ್ಪಾದಕ ದಾಳಿ. 166 ಜನ್ರ ಪ್ರಾಣ ತೆಗೆದ ಭಯಾನಕ ಟನೆಯ ಮಾಸ್ಟರ್​ ಮೈಂಡ ರಾಣಾ. ರಾಣಾ ಹಿಂದೆ ಪಾಕಿಸ್ತಾನದ ಕೈವಾಡ ಇದೆ. ಭಾರತದಲ್ಲಿ ಎಲ್ಲಿ ದಾಳಿ ಮಾಡಿದರೆ ಹೆಚ್ಚಿನ ಹಾನಿಯಾಗುತ್ತೆ ಎಂಬ ನೀಲನೆಯನ್ನು ಪಾಕಿಸ್ತಾನಕ್ಕೆ ರಾಣಾ ಕೊಟ್ಟಿದ್ದಾನೆ. ಐಎಸ್​ಐ ಸಂಎಟನೆ ಜೊತೆಗೆ ರಾಣಾ ಗುರುತಿಸಿಕೊಂಡಿದ್ದ. ರಾಣಾ ಭಾರತಕ್ಕೆ ಹಸ್ತಾಂತರ ಆದ ಕೂಡಲೇ ನಮಗೂ ರಾಣಾಗೂ ಸಂಬಂಧವಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.

ಹೆಗಲ ಮೇಲಿದ್ದ ಬಾರಕೋಲು ಎಲ್ಲಿ ಹೋಯಿತು:

ಹೆಗಲ ಮೇಲಿದ್ದ ಬಾರಕೋಲು ಎಲ್ಲಿ ಹೋಯಿತು ಎಂದು ವಿಜಯಾನಂದ ಕಾಶಪ್ಪನ್ನವರ ಬಗ್ಗೆ ಸಿ.ಸಿ. ಪಾಟೀಲ ವ್ಯಂಗ್ಯವಾಡಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಗ್ಗೆ ವಿಜಯಾನಂದ ಕಾಶಪ್ಪನ್ನವರ ಹೇಳಿಕೆ ಕುರಿತು ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂದರ್ಭದಲ್ಲಿ ಕಾಶಪ್ಪನ್ನವರ ಅವರಿಗೆ ಇದ್ದ 2ಎ ಮಿಸಲು ಹೋರಾಟದ ರೋಷಾವೇಷ ಈಗ ಎಲ್ಲಿ ಹೋಯಿತು. ಅಂದು ಹೆಗಲ ಮೇಲೆ ನಿರಂತರವಾಗಿ ಹಾಕಿಕೊಂಡಿದ್ದ ಬಾರಕೋಲು ಇಂದು ಕಾಂಗ್ರೆಸ್​ ಸರ್ಕಾರ ಸಂದರ್ಭದಲ್ಲಿ ಬಾರಕೋಲು ಇಲ್ಲವಾಗಿದೆ. ಬಿಜೆಪಿ ಸರ್ಕಾರದಲ್ಲಿ 2ಡಿ, 2ಸಿ ನೀಡಲಾಗಿತ್ತು. ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿ ಕೇಸ್​ ಹಿಂತೆಗೆದುಕೊಂಡರೆ 2ಡಿ, 2ಸಿ ಸಿಗುತ್ತದೆ. ಆದರೆ ಕಾಂಗ್ರೆಸ್​ ಆ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮೋಹನ ಮಾಳಶೆಟ್ಟಿ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ಮಹೇಶ ದಾಸರ ಇತರರು ಇದ್ದರು.

ಬಾಕ್ಸ್​:

ಆಗ ಬೇಕಿದ್ದರು, ಈಗ ಬೇಕಿಲ್ಲ:

ಪತ್ನಿ ವೀಣಾ ಕಾಶಪ್ಪನ್ನವರ ಅವರಿಗೆ ಬಾಗಲಕೋಟೆ ಲೋಕಸಭೆ ಟಿಕೆಟ್​ ಕೊಡಿಸಲು ವಿಜಯಾನಂದ ಕಾಶಪ್ಪನ್ನವರ ಕೂಡಲ ಸಂಗಮಶ್ರೀಗಳನ್ನು ಸಿಎಂ, ಡಿಸಿಎಂ ಮನೆಗೆ ಕಳುಹಿಸಿದ್ದರು. ಆಗ ಕೂಡಲ ಸಂಗಮ ಶ್ರೀಗಳು ಬೇಕಿದ್ದರು. ಈಗ ಬೇಡವಾಗಿದ್ದಾರೆ ಏಕೆ? ಎಂದು ಪ್ರಶ್ನಿಸಿದರು.

ಹೈಲೆಟ್ಸ್​:

* ಜಾತಿಗಣತಿ ಮಂಡನೆಗೆ ಸಂಪುಟ ಸಹೋದ್ಯೋಗಿಗಳ ಅಸಹಮತ

* ತಹವ್ವುರ ರಾಣಾ ಬಗ್ಗೆ ಕಾಂಗ್ರೆಸ್ಸಿಗೆ ಹೆಚ್ಚು ಕಾಳಜಿ

* ವೀಣಾ ಕಾಶಪ್ಪನ್ನವರ ಅವರಿಗೆ ಲೋಕಸಭೆ ಟಿಕೆಟ್​ ಕೊಡಿಸಲು ಪ್ರಯತ್ನಿಸುವಾಗ ವಿಜಯಾನಂದ ಕಾಶಪ್ಪನ್ನವರ ಅವರಿಗೆ ಕೂಡಲಸಂಗಮ ಶ್ರೀಗಳು ಬೇಕಿದ್ದರು. ಈಗ ಶ್ರೀಗಳು ಬೇಡವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net