ಜಕ್ಕಪ್ಪನ್ನವರಿಗೆ ಅಭಿನಂದನ ಸಮಾರಂಭ: ಡಿ.ಆರ್​. ಪಾಟೀಲ

17GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ನೂತನವಾಗಿ ವಿಧಾನ ಪರಿಷತ್​ ಸದಸ್ಯ ಜಕ್ಕಪ್ಪನವರ ಅವರಿಗಾಗಿ ಅ. 19 ರಂದು ಬೆಳಗ್ಗೆ 10.30ಕ್ಕೆ ನಗರದ ಭಿಮಸೇನ ಜ್ಯೋಶಿ ರಂಗ ಮಂದಿರದಲ್ಲಿ ಅಭಿನಂದನ ಸಮಾರಂಭ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ, ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಡಿ.ಆರ್​. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್​ ಸದಸ್ಯ ಎ್​. ಎಸ್​. ಜಕ್ಕಪ್ಪನವರ ಅವರು ರಾಷ್ಟ್ರೀಯ ಕಾಮಿರ್ಕ ಮುಖಂಡರಾಗಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ ಅವರ ಅನುಯಾಯಿ ಆಗಿದ್ದಾರೆ. ಅಂತವರಿಗೆ ಸನ್ಮಾನಿಸುವುದು ಅವರಿಗೆ ನೀಡುವ ಗೌರವವಾಗಿದೆ. ಕಾನೂನು ಸಚಿವ ಎಚ್​.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಬುದ್ಧ ಬಸವ ಅಂಬೇಡ್ಕರ ಭಾವಚಿತ್ರಕ್ಕೆ ಶಾಸಕ ಜಿ.ಎಸ್​. ಪಾಟೀಲ ಪುಷ್ಪಾರ್ಚನೆ ನೆರವೇರಿಸುವರು. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅರ್ಜುನ ಗೊಳಸಂಗಿ. ಆಶಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕರಾದ ಬಿ.ಆರ್​. ಯಾವಗಲ್ಲ, ನೆಹರೂ ಓಲೇಕಾರ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತಿ ಇರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆ.ಕೆ. ಜಮಾದಾರ, ರವಿ ಮೂಲಿಮನಿ, ಗುರಣ್ಣ ಬಳಗಾನೂರು, ಅಶೋಕ ಮಂದಾಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net