ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಸಹಸ್ರಾರ್ಜುನ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ ಭಾಂಡಗೆ ವಹಿಸುವರು. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಡಾ.ಶಶಿಕುಮಾರ ಮೇರವಾಡ, ಮಾಜಿ ಶಾಸಕ ಡಿ.ಆರ್.ಪಾಟೀಲ, ಪಿ.ಎಲ್.ಬುರಬುರೆ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಎಸ್.ಎಚ್.ಶಿವನಗೌಡ್ರ, ಪ್ರಕಾಶ ಬಾಕಳೆ, ಆಂಜನೇಯ ಕಟಗಿ, ಡಾ.ವೈ.ಎಸ್. ರಾಯಬಾಗಿ ಭಾಗವಹಿಸುವರು ಎಂದರು.