ಮುಕ್ಕಣ್ಣೇಶ್ವರ ಮಹಾಸ್ವಾಮಿಗಳು ಪುಣ್ಯಾರಾಧನೆ: ಶಂಕರಾನಂದ ಶ್ರೀಗಳು

05GDG08
Published on

ವಿಜಯವಾಣಿ ಸುದ್ದಿಜಾಲ ಗದಗ

ಮುಕ್ಕಣ್ಣೇಶ್ವರ ಮಹಾಸ್ವಾಮಿಗಳ 100 ನೇ ಪುಣ್ಯಾರಾಧನೆ ಕಾರ್ಯಕ್ರಮಗಳು ನ. 6 ರಿಂದ 13 ರವರೆಗೆ ಮುಕ್ಕಣ್ಣೇಶ್ವರ ಮಹಾಸ್ವಾಮಿಗಳವರ ಮಠದಲ್ಲಿ ಜರುಗಲಿವೆ ಎಂದು ಶ್ರೀಮಠದ ಶಂಕರಾನಂದ ಶ್ರೀಗಳು ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ದಿನ ಸಂಜೆ 6-.30 ಕ್ಕೆ ಕೀರ್ತನ ಕೇಸರಿ ಹಾಗೂ ಗುರುನಾಥ ಶಾಸ್ತ್ರಿಗಳು ಕರಿಕಟ್ಟಿ ಇವರಿಂದ ಚರಿತಾಮೃತ ಪ್ರವಚನ ನಡೆಯಲಿದೆ. ನ. 11ರಂದು ಸಂಜೆ 6.-30 ಕ್ಕೆ ಧರ್ಮಸಭೆ, ತುಲಾಭಾರ, ಸಂಗೀತ ಹಾಗೂ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ. ನ. 12 ಮಂಗಳವಾರ ಬೆಳಗ್ಗೆ 7-.30ಕ್ಕೆ ಶಿವಕೋಟಿ ಜಪಯಜ್ಞ ನಿಮಿತ್ಯ 108 ದಂಪತಿಗಳಿಂದ ಲಕ್ಷ ಬಿಲ್ವಾರ್ಚನೆ, ಮಧ್ಯಾಹ್ನ 3ಕ್ಕೆ ಸದ್ಗುರು ಶ್ರೀಗಳ ಭಾವಚಿತ್ರವನ್ನು ಕುಂಭದೊಂದಿಗೆ ಮೆರವಣಿಗೆ, ಸಂಜೆ ಧರ್ಮಸಭೆ, ತುಲಾಭಾರ, ಸಂಗೀತ ಹಾಗೂ ಸಾಂಸತಿಕ ಕಾರ್ಯಕ್ರಮ ಜರುಗಲಿವೆ. ನ. 13 ಬುಧವಾರ ಬೆಳಗ್ಗೆ ರುದ್ರಾಭಿಷೇಕ, ಹೋಮ, ಹವನ, ಬೆಳಗ್ಗೆ 10ಕ್ಕೆ ಧರ್ಮಸಭೆ ಹಾಗೂ ಮುತ್ತದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಲಿವೆ ಎಂದರು.

ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಭಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ವಿವಿಧ ಗ್ರಾಮಸ್ಥರು ಭಾಗವಹಿಸುವರು ಎಂದರು.

ಗಂಗಾಧರ ಅಬ್ಬಿಗೇರಿ, ಬಿ. ಎನ್​. ಯರನಾಳ, ಮಲ್ಲಿಕಾರ್ಜುನ ಸರವಿ, ಎಸ್​. ಎಸ್​. ಮುಗಳಿ, ಬಿ. ವಿ. ಜಗಾಪೂರ, ಶಿವಪ್ಪ ಮಾಗುಂಡ, ಶರಣಪ್ಪ ಗೆಟಿ, ಟಿ. ಆರ್​. ಮಡಿವಾಳರ, ಶಂಕರ ಹಾನಗಲ್​, ಎಂ. ಎನ್​. ಕಲಕೇರಿ, ಐ. ಬಿ. ಮೈದೂರಗಿ, ಜೆ. ಬಿ. ಚನ್ನಪ್ಪಗೌಡರ, ಸಿ. ಎ್​. ಪಾಟೀಲ, ರಮೇಶ ಪೂಜಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net